ಸೆಮಿಫೈನಲ್ ಪ್ರವೇಶಿಸಿದ ಕುಸ್ತಿಪಟುಗಳು, ಪದಕಕ್ಕೆ ಒಂದೇ ಹೆಜ್ಜೆ

olampics
Published on

ಟೋಕಿಯೋ: ಭಾರತೀಯ ಕುಸ್ತಿಪಟುಗಳಾದ ರವಿಕುಮಾರ್ ದಹಿಯಾ ಮತ್ತು ದೀಪಕ್ ಪುನಿಯಾ ಟೋಕಿಯೋ ಒಲಿಂಪಿಕ್ಸ್​​ನಲ್ಲಿ ಸೆಮಿಫೈನಲ್ ಪ್ರವೇಶಿಸಿ ಪದಕದ ಭರವಸೆ ಮೂಡಿಸಿದ್ದಾರೆ.

22 ವರ್ಷದ ಕುಸ್ತಿಪಟು ದೀಪಕ್ ಪುನಿಯಾ ಇಂದು ನಡೆದ 86 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ, ನೈಜೀರಿಯಾದ ಎಕೆರೆಕೆಮೆ ಅಜಿಯೊಮೋರ್ ರನ್ನು ಸೋಲಿಸುವ ಮೂಲಕ ಸೆಮಿಫೈನಲ್​​​ಗೆ ಲಗ್ಗೆ ಇಟ್ಟಿದ್ದಾರೆ.
ದೀಪಕ್ ಒಟ್ಟು 12 ಅಂಕ ಪಡೆದಿದ್ದರೆ, ನೈಜೀರಿಯಾ ಪಟು ಕೇವಲ ಒಂದು ಅಂಕ ಪಡೆದಿದ್ದರು. ದೀಪಕ್ ಇಂದು ನಡೆಯುವ ಸೆಮಿಫೈನಲ್​​ನಲ್ಲಿ ಚೀನಾದ ಜುಸೆನ್​ ಲಿನ್​ರನ್ನು ಎದುರಿಸಲಿದ್ದಾರೆ.

23 ವರ್ಷದ ಮತ್ತೋರ್ವ ಭರವಸೆ ಕುಸ್ತಿಪಟು ರವಿಕುಮಾರ್ ದಹಿಯಾ ಇಂದು ನಡೆದ ಪುರುಷರ 57 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ, ಕೊಲಂಬಿಯಾದ ಆಸ್ಕರ್ ಟಿಗ್ರೋರ್ಸ್ ಉರ್ಬಾನ್​​ರನ್ನು 13-02 ಅಂತರದಲ್ಲಿ ಮಣ್ಣು ಮುಕ್ಕಿಸಿದ್ದಾರೆ. ಇದು ಇವರ ಮೊದಲ ಒಲಿಂಪಿಕ್ಸ್ ಕ್ರೀಡಾಕೂಟವಾಗಿದ್ದು, ಸಿಮಿಫೈನಲ್​​ನಲ್ಲಿ ಬಲ್ಗೇರಿಯಾದ ಜಾರ್ಜಿ ವಂಗೇಲರನ್ನು ಎದುರಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net