ಪೇದೆಗೆ ಕರೊನಾ ಸೋಂಕು, ಪಿಜಿಗೆ ಡ್ರಾಪ್​ ಪಡೆದ ಮಹಿಳಾ ಪೇದೆಗೂ ಸಂಕಷ್ಟ!

corona
Published on

ಬೆಂಗಳೂರು: ಫ್ರೆಜರ್ ಟೌನ್ ಸಂಚಾರ ಪೊಲೀಸ್ ಠಾಣೆಯ ಪೇದೆಯೊಬ್ಬರಿಗೆ ಕರೊನಾ ಸೋಂಕು ದೃಢಪಟ್ಟಿದ್ದು, ಠಾಣೆಯ ಸಿಬ್ಬಂದಿಯಲ್ಲಿ ಆತಂಕ ಮನೆ ಮಾಡಿದೆ.

ಸಿವಿ ರಾಮನ್ ಆಸ್ಪತ್ರೆಯಲ್ಲಿ ಪೇದೆಯು ಕೋವಿಡ್​19 ತಪಾಸಣೆಗೆ ಒಳಗಾಗಿದ್ದರು. ಗುರುವಾರ ರಾತ್ರಿ 11.30ಕ್ಕೆ ವರದಿ ಬಂದಿದ್ದು, ಗಂಟಲು ದ್ರವ ಮಾದರಿ ಪರೀಕ್ಷೆಯ ವರದಿ ಪಾಸಿಟಿವ್​ ಬಂದಿದೆ. ಕರ್ತವ್ಯ ನಿರ್ವಹಣೆ ವೇಳೆ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ. ಬೆಂಗಳೂರಿನ ಮನೆಯಲ್ಲಿ ಪೇದೆ ಒಬ್ಬರೇ ನೆಲೆಸಿದ್ದು, ಕುಟುಂಬಸ್ಥರು ಸ್ವಗ್ರಾಮದಲ್ಲಿ ಇದ್ದಾರೆ.

ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಪೇದೆ ಜತೆ ಮಾರ್ಗಮಧ್ಯೆ ಹೆನ್ನೂರಿನ ಪಿಜಿ (ಪೇಯಿಂಗ್​ ಗೆಸ್ಟ್)ಗೆ ಡ್ರಾಪ್ ತೆಗೆದುಕೊಳ್ಳುತ್ತಿದ್ದ ಮಹಿಳಾ ಪೇದೆಯೊಬ್ಬರನ್ನು ಬಿಬಿಎಂಪಿಯ ಕ್ವಾರಂಟೈನ್ ಕೇಂದ್ರಕ್ಕೆ ಒಳಪಡಿಸಲಾಗಿದೆ. ಕರ್ತವ್ಯ ನಿರ್ವಹಿಸುತ್ತಿದ್ದ ಠಾಣೆಯನ್ನು ಸ್ಯಾನಿಟೈಜ್ ಮಾಡಲಾಗಿದ್ದು, ಇವರ ಸಂಪರ್ಕಕ್ಕೆ ಬಂದವರನ್ನೂ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.

ಗುರುವಾರ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆಯಲ್ಲೂ ಪೇದೆಯೊಬ್ಬರಿಗೆ ಕರೊನಾ ಸೋಂಕು ದೃಢಪಟ್ಟಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net