ಕರೊನಾ ಸೋಂಕಿತನ ಅಜ್ಜಿ ಕ್ವಾರಂಟೈನ್​ ಕೇಂದ್ರದಲ್ಲೇ ಆತ್ಮಹತ್ಯೆ

Suicide
Published on

ಕಾರವಾರ: ಕರೊನಾ ಸೋಂಕಿತ ಯುವಕನ ಅಜ್ಜಿ ಕ್ವಾರಂಟೈನ್​ ಕೇಂದ್ರದಲ್ಲೇ ಶುಕ್ರವಾರ ಬೆಳಗಿನ ಜಾವ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹಳೆಯ ದಾಂಡೇಲಿ ಮೂಲದ 24 ವರ್ಷದ ಯುವಕನೊಬ್ಬನಿಗೆ ಕೋವಿಡ್​-19 ಸೋಂಕು ಇರುವುದು ಬುಧವಾರ (ಮೇ 20) ಖಚಿತವಾಗಿತ್ತು. ಸದ್ಯ ಈತನಿಗೆ ಕಾರವಾರ ಕ್ರಿಮ್ಸ್ ಕರೊನಾ ವಾರ್ಡ್​ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಯುವಕನ ಪ್ರಾಥಮಿಕ ಸಂಪರ್ಕಕ್ಕೆ ಬಂದ‌ 62 ವರ್ಷದ ಅಜ್ಜಿ ಸೇರಿ 23 ಜನರನ್ನು ದಾಂಡೇಲಿ ಸರ್ಕಾರಿ ಆಸ್ಪತ್ರೆಯಲ್ಲಿ ಗುರುವಾರ ಕ್ವಾರಂಟೈನ್​ ಮಾಡಲಾಗಿತ್ತು. ಇದೇ ಆಸ್ಪತ್ರೆಯ ಕಿಟಕಿಗೆ ನೇಣುಬಿಗಿದುಕೊಂಡು ಅಜ್ಜಿ ಮೃತಪಟ್ಟಿದ್ದಾರೆ.

ಚಾಲಕ ವೃತ್ತಿ ಮಾಡುತ್ತಿದ್ದ ಅಜ್ಜಿಯ ಮೊಮ್ಮಗ ಗುಜರಾತ್, ಗೋವಾ, ಹಳಿಯಾಳ ಸುತ್ತಾಡಿ ದಾಂಡೇಲಿಗೆ ಬಂದಿದ್ದ. ಸ್ವಯಂಪ್ರೇರಿತವಾಗಿ ಕ್ವಾರಂಟೈನ್ ಆಗದ ಈತನನ್ನು ಆರೋಗ್ಯ ಮತ್ತು ಪೊಲೀಸ್ ಸಿಬ್ಬಂದಿ ಹಿಡಿದು ಕ್ವಾರಂಟೈನ್ ಮಾಡಿದ್ದರು. ಆರೋಗ್ಯ ತಪಾಸಣೆ ಮಾಡಿದಾಗ ಈತನ ಕರೊನಾ ಸೋಂಕು ಇರುವುದು ದೃಢ ಪಟ್ಟಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net