ಫೇಸ್​​ಬುಕ್​ನಲ್ಲಿ ನಕಲಿ ಪೇಜ್ ಸೃಷ್ಟಿಸಿ ರಾಷ್ಟ್ರವಿರೋಧಿ ಚಟುವಟಿಕೆ ನಡೆಸುತ್ತಿದ್ದವ ಏನಾದ?

Arrest
Published on

ಸೊಪೊರ್: ನಕಲಿ ಫೇಸ್‌ಬುಕ್ ಪುಟವನ್ನು ರಚಿಸಿ ಅದನ್ನು ರಾಷ್ಟ್ರ ವಿರೋಧಿ ಚಟುವಟಿಕೆಗಳಿಗೆ ಬಳಸಿದ್ದಕ್ಕಾಗಿ ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಉತ್ತರ ಕಾಶ್ಮೀರದ ಸೊಪೋರ್ ನಿವಾಸಿಯನ್ನು ಬಂಧಿಸಿದ್ದಾರೆ ಎಂದು ವಕ್ತಾರರು ತಿಳಿಸಿದ್ದಾರೆ.

ರಯೀಸ್ ಅಹ್ಮದ್ ಮಿರ್ ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆಗಳನ್ನು ರಚಿಸಿ ರಾಷ್ಟ್ರ ವಿರೋಧಿ ಚಟುವಟಿಕೆಗಳಿಗೆ ಬಳಸಿದ್ದಕ್ಕಾಗಿ ಆತನನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದರು.

ವಕ್ತಾರರ ಪ್ರಕಾರ, ಆರೋಪಿ, ಇತ್ತೀಚೆಗೆ ತನ್ನ ಫೇಸ್‌ಬುಕ್ ಖಾತೆಯಲ್ಲಿ ಗುಜ್ರಾನ್‌ವಾಲಾ ಪಾಕಿಸ್ತಾನ ಮೂಲದ ಅಬು ಹುಜೈಫ್‌ ಹೆಸರಿನಲ್ಲಿ ವೀಡಿಯೊವನ್ನು ಅಪ್‌ಲೋಡ್ ಮಾಡಿದ್ದ. "ವೀಡಿಯೊದ ಚಿತ್ರದಲ್ಲಿರುವ ಈ ವ್ಯಕ್ತಿ ಬೆಮಿನಾ ಶ್ರೀನಗರದ ಅತ್ಯಂತ ಪ್ರಸಿದ್ಧ ಉದ್ಯಮಿ" ಎಂದು ಹೇಳಿದ್ದಾರೆ.

ಈ ಖಾತೆಯ ಅಡ್ಮಿನ್ ವಿರುದ್ಧ ಕ್ರಮ ಕೈಗೊಳ್ಳಲು ಆತ (ಉದ್ಯಮಿ) ಸೊಪೋರ್ ಪೊಲೀಸರನ್ನು ಸಂಪರ್ಕಿಸಿದ್ದಾರೆ ಎಂದು ವಕ್ತಾರರು ಹೇಳಿದರು.

ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಹಾಗೂ ಸೈಬರ್ ಸೆಲ್ ಸಹಾಯದಿಂದ, ಅ ವೀಡಿಯೊವನ್ನು ಅಪ್‌ಲೋಡ್ ಮಾಡಿದ ಫೇಸ್‌ಬುಕ್ ಖಾತೆ / ಪುಟದ ಬಳಕೆದಾರನನ್ನು ಗುರುತಿಸುವಲ್ಲಿ ಸೊಪೋರ್ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಅವರು ಹೇಳಿದರು.

ಆರೋಪಿಯನ್ನು ಬಂಧಿಸಲಾಗಿದ್ದು, ಪೊಲೀಸ್ ವಶದಲ್ಲಿದ್ದಾನೆ, " ಕಳೆದ ಕೆಲವು ದಿನಗಳಿಂದ, ವೈಷಮ್ಯದ ವಾತಾವರಣ ಸೃಷ್ಟಿಸಲು ಮತ್ತು ಭದ್ರತಾ ವ್ಯವಸ್ಥೆಯನ್ನು ಹಾಳುಗೆಡವಲು ಸಾಮಾಜಿಕ ಮಾಧ್ಯಮವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಅನೇಕ ಖಾತೆಗಳನ್ನು ಮತ್ತು ವ್ಯಕ್ತಿಗಳನ್ನು ಪೊಲೀಸರು ಗುರುತಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಯನ್ನು ಸೃಷ್ಟಿಸುವ ಸಲುವಾಗಿ ಸಮಾಜ ವಿರೋಧಿ ವಿಷಯವನ್ನು ಹಂಚಿಕೊಳ್ಳುತ್ತಿರುವ ಅಂತಹ ಅಂದಾಜು 200 ಖಾತೆಗಳ ಹಿನ್ನೆಲೆ ಪತ್ತೆಹಚ್ಚುವ ಪ್ರಕ್ರಿಯೆಯಲ್ಲಿ ಸಪೊರೆ ಪೊಲೀಸರು ಕಾರ್ಯನಿರತರಾಗಿದ್ದು, ಅಂಥವರನ್ನು ಶೀಘ್ರ ವಶಕ್ಕೆ ತೆಗೆದುಕೊಳ್ಳಲಿದ್ದಾರೆ. ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಳ್ಳುವವರು ಯಾರೇ ಇರಲಿ, ಅಂಥವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಅವರು ವಕ್ತಾರರು ಎಚ್ಚರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net