

ಕೋಲಾರ: ಮದ್ಯಪಾನ ಮಾಡಿಕೊಂಡು ಅದರ ಅಮಲಿನಲ್ಲಿದ್ದ ಯುವಕರು ಗಣೇಶ ಮೂರ್ತಿಗಳನ್ನು ಚೆಲ್ಲಾಡಿ ವಿರೂಪಗೊಳಿಸಿದ ಪ್ರಕರಣ ನಡೆದಿದೆ. ಕೋಲಾರ ಜಿಲ್ಲೆಯಲ್ಲಿ ದುಂಡಾವರ್ತನೆ ವರದಿಯಾಗಿದೆ.
ಕೋಲಾರದ ಮಾಲೂರು ಪಟ್ಟಣದಲ್ಲಿ ಈ ಪ್ರಕರಣ ನಡೆದಿದೆ. ಮದ್ಯಪಾನ ಮಾಡಿ ಬೀದಿಗಳಿದಿದ್ದ ಯುವಕರು ರಸ್ತೆಯ ಬದಿಯಲ್ಲಿದ್ದ ಗಣೇಶ ಮೂರ್ತಿಗಳನ್ನು ಕೆಳಗಿಳಿಸಿ, ಮಲಗಿಸಿ, ವಿರೂಪಗೊಳಿಸಿ ವಿಕೃತವಾಗಿ ವರ್ತಿಸಿದ್ದಾರೆ. ಕೋಲಾರದಲ್ಲಿ ಗಣೇಶನನ್ನು ಕೂರಿಸಲಾಗಿರುವ ನಾಲ್ಕೈದು ಕಡೆ ಆರೋಪಿಗಳು ಈ ಪುಂಡಾಟಿಕೆ ತೋರಿದ್ದಾರೆ.
ಪ್ರಕರಣದಕ್ಕೆ ಸಂಬಂಧಿಸಿದಂತೆ ಮಲ್ಲೇಶ್, ಕಾಂತರಾಜು, ಗಿರೀಶ್, ಪುನೀತ್, ಚಂದು ಎಂಬವರನ್ನು ಮಾಲೂರು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ಮೇಲೆ ಪ್ರಕರಣ ದಾಖಲಿಸಿಕೊಂಡು ವಿಚಾರಣೆಗೊಳಪಡಿಸಿ ತನಿಖೆ ನಡೆಸಿದ್ದಾರೆ.