ಕುಖ್ಯಾತ ಕಳ್ಳ ನವಾಜ್​ ಶರೀಫ್​ನನ್ನು ಬಂಧಿಸಿದ ಪೊಲೀಸರು!

nawaz sharif
Published on

ಬೇಗೂರು: ಇದೀಗ ಬೇಗೂರು ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು ಮನೆಗೆಳಿಗೆ ಕನ್ನ ಹಾಕುತ್ತಲೇ ಕುಖ್ಯಾತನಾದ ಕಳ್ಳ ನವಾಜ್​ ಶರೀಫ್​ನನ್ನು ಬಂಧಿಸಿದ್ದಾರೆ.

ಈ ಕಿರಾತಕ, ಮನೆಯ ಹೊರಗಡೆ ಇರುವ ಚಪ್ಪಲಿ ಸ್ಟಾಂಡ್ ಹಾಗೂ ಹೂ ಕುಂಡಗಳಲ್ಲಿ ಬೀಗ ಇಟ್ಟು ಹೋಗುತ್ತಿದ್ದ ಮನೆಗಳನ್ನೇ ಟಾರ್ಗೆಟ್ ಮಾಡುತ್ತಿದ್ದ. ಚಪ್ಪಲಿ ಸ್ಟ್ಯಾಂಡ್​ ಅಥವಾ ಹೂಕುಂಡದ ಬಳಿ ಬೀಗ ಇಟ್ಟು ಕೆಲಸಕ್ಕೆ ಹೋಗುತ್ತಿದ್ದಂತೆಯೇ ಈತ ನವಾಜ್​ ಶರೀಫ್​ ಎಂಟ್ರಿ ನೀಡುತ್ತಿದ್ದ. ಅದಾದ ಮೇಲೆ ನಷ್ಟದ್ದೇ ಕಥೆ.

ಈವರೆಗೆ ಈ ಭೂಪ 9 ಮನೆಗಳನ್ನು ದರೋಡೆಗೈದಿರುವುದು ಬೆಳಕಿಗೆ ಬಂದಿದೆ. ಈತನ ವಿರುದ್ಧ ಒಟ್ಟು 27 ಪ್ರಕರಣಗಳು ದಾಖಲಾಗಿದ್ದು ಇಷ್ಟು ದಿನಗಳ ಕಾಲ ಪೊಲೀಸರಿಂದ ಕಣ್ತಪ್ಪಿಸಿ ಓಡಾಡುತ್ತಿದ್ದ.

ಇದೀಗ ಬಂಧಿತನಿಂದ 16 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದ್ದು ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೀಗ ತನಿಖೆ ಆರಂಭಿಸಿರುವ ಪೊಲೀಸರು, ಈತ ಇನ್ನೆಷ್ಟು ಕಡೆಗಳಲ್ಲಿ ಕಳ್ಳತನ ಮಾಡಿದ್ದಾನೆ ಎಂದು ಪರಿಶೀಲನೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net