More

    ಯುವತಿಯನ್ನು ನಂಬಿಸಿ ದ್ರೋಹವೆಸಗಿದ ಪೊಲೀಸ್​ ಕಾನ್ಸ್​ಟೇಬಲ್ ಬಂಧನ​

    ಬೆಳಗಾವಿ: ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ಕೈಕೊಟ್ಟಿದ್ದ ಪೊಲೀಸ್​ ಕಾನ್ಸ್​ಟೇಬಲ್​ನನ್ನು ಬೆಳಗಾವಿ ಪೊಲಿಸರು ಶನಿವಾರ ಬಂಧಿಸಿದ್ದಾರೆ.

    ಅತ್ಯಾಚಾರ ಪ್ರಕರಣದಡಿಯಲ್ಲಿ ಬೆಳಗಾವಿಯ ಕಾನ್ಸ್​ಟೇಬಲ್​ ಇಮ್ರಾನ್ ಖಾನ್ ಅಬ್ದುಲ್ ಮುನಾಫ್ ಘೋರಿ ಎಂಬಾತನ್ನು ಬಂಧಿಸಲಾಗಿದೆ. ಬೆಳಗಾವಿಯ ಮಹಿಳಾ ಪೋಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿತ್ತು.

    ಇದನ್ನೂ ಓದಿ: ಮದುವೆಗೆ 4 ದಿನ‌ ಇರುವಾಗ್ಲೇ ಭಾವನಿಂದಲೇ ಮದುಮಗಳ ಹತ್ಯೆ: ಆರೋಪಿಯ ನಾಟಕ ಕೇಳಿದ್ರೆ ಶಾಕ್​ ಆಗ್ತೀರಾ!

    ಆರೋಪಿ ಖಾನ್ ಸಿಟಿ ರಿಸರ್ವ ಪೋಲೀಸ್ ಪೇದೆಯಾಗಿ ಸೇವೆ ಸಲ್ಲಿಸುತ್ತಿದ್ದ. ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ, ದೈಹಿಕವಾಗಿ ಬಳಸಿಕೊಂಡು‌ ಕೈ ಕೊಟ್ಟಿದ್ದ ಎಂಬ ಆರೋಪ ಕೇಳಿಬಂದಿದೆ.

    ಯುವತಿಯು ಬೆಳಗಾವಿಯ ಮಹಿಳಾ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ದೂರು ನೀಡಿದ್ದಳು. ದೂರು ಆಧರಿಸಿ ವಂಚಕ ಅರೋಪಿ ಪೊಲೀಸ್ ಪೆದೆಯನ್ನು ಬಂಧಿಸಲಾಗಿದೆ.

    ಇದನ್ನೂ ಓದಿ: ವೈರಲ್​ ಆಯ್ತು ನಟ-ನಿರ್ದೇಶಕ ನಡುವಿನ ಲಿಪ್​ಲಾಕ್​ ಫೋಟೋ: ನೆಟ್ಟಿಗರಿಂದ ತೂರಿಬಂತು ಶಾಕಿಂಗ್​ ಪ್ರಶ್ನೆ!

    ರಸ್ತೆ ಮಧ್ಯೆಯೇ ಹುಟ್ಟುಹಬ್ಬ ಆಚರಿಸಿಕೊಂಡ ರೌಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts