ರಂಗಮಯೂರಿಯಲ್ಲಿ ಕವನಸಂಕಲನ ಬಿಡುಗಡೆ

New Project (14)
Published on

ಸುಳ್ಯ: ರಂಗಮಯೂರಿ ಕಲಾಶಾಲೆಯಲ್ಲಿ ಸ್ವಾತಂತ್ರ್ಯ ಸಂಭ್ರಮ ಕಾರ್ಯಕ್ರಮ ಜರುಗಿತು. ರಂಗಕರ್ಮಿ ಬಾಸುಮ ಕೊಡಗು ರಚಿಸಿದ ‘ನಡುರಾತ್ರಿಯ ಸ್ವಾತಂತ್ರ್ಯ’ ಕವನ ಸಂಕಲನವನ್ನು ಕಸಾಪ ಸುಳ್ಯ ಘಟಕ ಅಧ್ಯಕ್ಷ ಚಂದ್ರಶೇಖರ ಪೇರಾಲು ಬಿಡುಗಡೆಗೊಳಿಸಿದರು.

ಗಾಂಧಿ ಚಿಂತನ ವೇದಿಕೆ ಪ್ರಧಾನ ಸಂಚಾಲಕ ಹರೀಶ್ ಬಂಟ್ವಾಳ್ ಗಾಂಧಿ ಕುರಿತು ಮಾತನಾಡಿದರು. ರಂಗಮಯೂರಿ ಕಲಾ ಶಾಲೆ ಪೋಷಕ ಭವಾನಿಶಂಕರ ಅಡ್ತಲೆ, ಸಂಗೀತ ಶಿಕ್ಷಕಿ ಸುಮನಾ ರಾವ್, ರಂಗಮಯೂರಿ ಕಲಾ ಶಾಲೆ ಸಂಚಾಲಕ ಲೋಕೇಶ್ ಊರುಬೈಲು ಮಾತನಾಡಿದರು. ಮುದ್ದುಕೃಷ್ಣ ವೇಷ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಬಳಿಕ ಸಂಸ್ಥೆಯ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಯಶ್ವಿತ್ ಕಾಳಮ್ಮನೆ ಸ್ವಾಗತಿಸಿದರು. ಜಯಕೃಷ್ಣ ವಂದಿಸಿದರು. ಶಶಿಕಾಂತ್ ಮಿತ್ತೂರು ಮತ್ತು ಧೃತಿ ದೀಟಿಗೆ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net