video/ ಗರಿಬಿಚ್ಚಿ ಪ್ರಧಾನಿ ಮೋದಿ ಜತೆ ಹೆಜ್ಜೆ ಹಾಕಿದ ನವಿಲು... ಇದು 'ನಮೋ' ಅಮೂಲ್ಯ ಕ್ಷಣಗಳು!

PMModi- Peacock 1
Published on

ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೂ ರಾಷ್ಟ್ರಪಕ್ಷಿ ನವಿಲಿಗೂ ಅವಿನಾಭಾವ ಸಂಬಂಧವಿದೆ. ಸ್ವತಃ ಪ್ರಧಾನಿ ಅವರೇ ತಮ್ಮ ಇನ್‌ಸ್ಟಾಗ್ರಾಂ ಪುಟದಲ್ಲಿ ಭಾನುವಾರ ಪೋಸ್ಟ್ ಮಾಡಿರವ ವಿಡಿಯೋ ಇದಕ್ಕೆ ಸಾಕ್ಷಿ.

"ಅಮೂಲ್ಯ ಕ್ಷಣಗಳು" ಎಂಬ ಶೀರ್ಷಿಕೆ ಮತ್ತು ಹಿಂದಿಯಲ್ಲಿ ಬರೆದ ಕವಿತೆಯೊಂದಿಗೆ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ವಿಡಿಯೋದಲ್ಲಿ ಪ್ರಧಾನಿ ಮೋದಿ ತಮ್ಮ ನಿವಾಸದ ಹೊರಗಡೆ ಮತ್ತು ಒಳಗಡೆ ನವಿಲುಗಳಿಗೆ ಆಹಾರ ಹಾಕುತ್ತಿರುವ, ಬೆಳಗ್ಗೆ ವಾಕಿಂಗ್‌ ಮಾಡುವ ವೇಳೆ ನವಿಲು ಗರಿಬಿಚ್ಚಿ ಹೆಜ್ಜೆ ಹಾಕುವ, ನವಿಲುಗಳಿಗೆ ಪ್ರಧಾನಿ ಅವರು ಆಹಾರ ನೀಡುತ್ತಿರುವ ದೃಶ್ಯವಿದೆ. ಅಲ್ಲದೆ ಪ್ರಧಾನಿ ಪುಸ್ತಕ ಓದುತ್ತಿದ್ದಾಗ ಅವರ ಪಕ್ಕದಲ್ಲೇ ನವಿಲು ಆಹಾರ ತಿನ್ನುತ್ತಿರುವ ಫೋಟೋ ಕೂಡ ಇದೆ.

ಬಿಡುವಿನ ಸಮಯದಲ್ಲಿ ನರೇಂದ್ರ ಮೋದಿ ಅವರು ರಾಷ್ಟ್ರಪಕ್ಷಿ ಜೊತೆ ಕಾಲ ಕಳೆಯುವ ಮೂಲಕ ವಿಶ್ರಾಂತಿ ಪಡೆಯುವ ಈ ದೃಶ್ಯವನ್ನು ಈಗಾಗಲೇ ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಮೋದಿಯವರ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ಈ ವಿಡಿಯೋ 1 ನಿಮಿಷ 47 ಸೆಕೆಂಡ್​ ಇದೆ. ಇದರ ಜತೆಗೆ ಪ್ರಧಾನಿ ಅವರು ಹಿಂದಿ ಕವಿತೆಯೊಂದನ್ನೂ ಶೇರ್​ ಮಾಡಿದ್ದಾರೆ. ಈ ಕವಿತೆಯು ನವಿಲುಗಳು ಮತ್ತು ಅವುಗಳ ಸೌಂದರ್ಯ ಕುರಿತದ್ದಾಗಿದೆ.

ಪ್ರತಿ ದಿನ ಪ್ರಧಾನಿ ಮೋದಿ ವಾಕಿಂಗ್‌ ಮಾಡುವ ಸಂದರ್ಭದಲ್ಲಿ ಅವರ ಜತೆಯಲ್ಲೂ ನವಿಲುಗಳು ಹೆಜ್ಜೆ ಹಾಕುತ್ತವೆ ಎಂದು ಮೂಲಗಳನ್ನು ಉಲ್ಲೇಖಿಸಿ ವರದಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net