

ತಮಿಳುನಾಡು: ಮೂರು ದಿನದ ಧ್ಯಾನ ವಿರಾಮ ತೆಗೆದುಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ತಮಿಳುನಾಡಿನ ಕನ್ಯಾಕುಮಾರಿಗೆ ಭೇಟಿ ನೀಡಿ, ಅಲ್ಲಿನ ಸ್ವಾಮಿ ವಿವೇಕಾನಂದ ಸ್ಮಾರಕದಲ್ಲಿ ಧ್ಯಾನಕ್ಕೆ ಕುಳಿತಿರುವ ವಿಡಿಯೋಗಳು ಸದ್ಯ ಸಾಮಾಜಿಕ ಜಾಲತಾಣವನ್ನು ಸುತ್ತುವರೆದಿವೆ.
ಇದನ್ನೂ ಓದಿ: ಸ್ವಾಮಿ ವಿವೇಕಾನಂದ ಸ್ಮಾರಕದಲ್ಲಿ ಪ್ರಧಾನಿ ಮೋದಿ ಧ್ಯಾನ
ಸ್ವಾಮಿ ವಿವೇಕಾನಂದ ಕಲ್ಲು ಸ್ಮಾರಕದಲ್ಲಿ ಧ್ಯಾನಕ್ಕೆ ಕುಳಿತಿರುವ ಪ್ರಧಾನಿಗಳು, ಮೇ.30ರಿಂದ ಜೂನ್ 01ರವರೆಗೆ ಇಲ್ಲಿಯೇ ಧ್ಯಾನ ಮಾಡಲಿದ್ದಾರೆ ಎಂದು ವರದಿಯಾಗಿದೆ. ಈ ಸ್ಥಳದ ವಿಶೇಷತೆ ಏನಂದರೆ, ಅಂದು ಇದೇ ಜಾಗದಲ್ಲಿ ಸ್ವಾಮಿ ವಿವೇಕಾನಂದರು ಕೂಡ ಧ್ಯಾನ ಮಾಡಿದ್ದರು ಎಂಬ ಮಾತಿದೆ.
ಮೆಮೋರಿಯಲ್ಗೆ ಬರುವ ಮುನ್ನ ಮೊದಲು ಭಾಗವತಿ ಅಮ್ಮನ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಪ್ರಧಾನಿಗಳು, ನಂತರದಲ್ಲಿ ಕಲ್ಲು ಸ್ಮಾರಕದ ಬಳಿ ಧ್ಯಾನದಲ್ಲಿ ಮಗ್ನರಾಗಿದ್ದಾರೆ. ಈ ಕುರಿತಾದ ಫೋಟೋ ಮತ್ತು ವಿಡಿಯೋಗಳನ್ನು ಬಿಜೆಪಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ,(ಏಜೆನ್ಸೀಸ್).