More

    ನನಗಿರುವುದು ಇದೊಂದೇ ಆಸೆ… ‘3’ರ ಹಿಂದೆ ಬಿದ್ದ ಕೆಕೆಆರ್​ ಮೆಂಟರ್ ಗೌತಮ್​ ಗಂಭೀರ್​!

    ನವದೆಹಲಿ: 2011ರಲ್ಲಿ ವಿಶ್ವಕಪ್​ ಗೆದ್ದ ಟೀಂ ಇಂಡಿಯಾ ಪರ ಅದ್ಭುತ ಬ್ಯಾಟ್​ ಮಾಡಿ, ಫೈನಲ್​ನಲ್ಲಿ 97 ರನ್​ ಕೊಡುಗೆ ನೀಡುವ ಮೂಲಕ ತಂಡದ ಗೆಲುವಿಗೆ ಪ್ರಮುಖ ಕಾರಣರಾದ ಗೌತಮ್ ಗಂಭೀರ್ ಕಂಡರೆ ಕ್ರಿಕೆಟ್ ಅಭಿಮಾನಿಗಳಿಗೆ ಅದೇನೋ ಹೆಚ್ಚಿನ ಪ್ರೀತಿ, ಉತ್ಸಾಹ. ಅದರಲ್ಲೂ ವಿಶೇಷ ಎಂದರೆ 2008ರಲ್ಲಿ ಶುರುವಾದ ಐಪಿಎಲ್​ ಆವೃತ್ತಿಯಲ್ಲಿ ಭಾಗಿಯಾದ ಗೌತಮ್​, ಕೊಲ್ಕತ್ತಾ ನೈಟ್​ ರೈಡರ್ಸ್​ ತಂಡದ ಕ್ಯಾಪ್ಟನ್ ಆಗಿ ಎರಡು ಬಾರಿ ಟ್ರೋಫಿಯನ್ನು ಎತ್ತಿಹಿಡಿದಿದ್ದರು. ಇದೀಗ ಮೆಂಟರ್ ಸ್ಥಾನದಲ್ಲಿದ್ದು, ಮೂರನೇ ಬಾರಿ ತಂಡಕ್ಕೆ ಕಪ್​ ತಂದುಕೊಟ್ಟಿದ್ದಾರೆ.

    ಇದನ್ನೂ ಓದಿ: ಅಬ್ಬಬ್ಬಾ..! ಎಷ್ಟು ಉದ್ದದ ಮೊಸಳೆ: ಆಶ್ವರ್ಯದಿಂದ ಫೋಟೋ ಕ್ಲಿಕ್ಕಿಸಿದ ಜನರು

    ಇನ್ನೂ ತಮ್ಮ ಐಪಿಎಲ್ ವೃತ್ತಿಯಲ್ಲಿ ಪ್ರಸ್ತುತ ಕೆಕೆಆರ್​ ಮೆಂಟರ್​ ಆಗಿ ತಂಡವನ್ನು ಗೆಲುವಿನೆಡೆಗೆ ಕೊಂಡೊಯ್ದಿರುವ ಗೌತಮ್ ಗಂಭೀರ್, ಐಪಿಎಲ್ 2024ರ ಫೈನಲ್ ಪಂದ್ಯದಲ್ಲಿ ಪ್ಯಾಟ್​ ಕಮ್ಮಿನ್ಸ್ ನೇತೃತ್ವದ ಸನ್​ರೈಸರ್ಸ್​ ಹೈದರಾಬಾದ್​ ವಿರುದ್ಧ ತಮ್ಮ ತಂಡ ನೀಡಿದ ಅಮೋಘ ಪ್ರದರ್ಶನವನ್ನು ಮೆಚ್ಚಿ, ಮೈದಾನದಲ್ಲಿ ಸಂಭ್ರಮಿಸಿದ್ದರು. ಮೆಂಟರ್ ಆಗಿ ಗೌತಿ ನೀಡಿದ ಅಪಾರ ಕೊಡುಗೆಯನ್ನು ಶ್ಲಾಘಿಸಿದ ಕೆಕೆಆರ್​ ಮಾಲೀಕ ನಟ ಶಾರುಖ್ ಖಾನ್, ಗಂಭೀರ್​ರನ್ನು ಗಟ್ಟಿಯಾಗಿ ಅಪ್ಪಿಕೊಂಡು, ಮುತ್ತಿಕ್ಕಿದರು. ಇನ್ನು ಇದರ ಬೆನ್ನಲ್ಲೇ ಗೌತಿಗೆ ಟೀಂ ಇಂಡಿಯಾದ ಹೆಡ್ ಕೋಚ್ ಸ್ಥಾನಕ್ಕೆ ದೊಡ್ಡ ಆಫರ್ ಕೂಡ ಒಲಿದು ಬಂದಿದೆ.

    ಅಧಿಕೃತವಾಗಿ ಟೀಂ ಇಂಡಿಯಾದ ಹೆಡ್ ಕೋಚ್ ಸ್ಥಾನವನ್ನು ಇನ್ನೂ ಅಲಂಕರಿಸದ ಗಂಭೀರ್, ಕೆಕೆಆರ್ ಮೆಂಟರ್​ ಆಗಿ ತಾವೇನು ಮಾಡಬೇಕು, ತಮ್ಮ ಕನಸು ಹಾಗೂ ಗುರಿ ಎರಡನ್ನೂ ಇದೀಗ ಮುಕ್ತವಾಗಿ ಹಂಚಿಕೊಂಡಿದ್ದಾರೆ. ಸದ್ಯ ಈ ವಿಷಯ ಕ್ರಿಕೆಟ್ ಅಭಿಮಾನಿಗಳು ಮತ್ತು ಮಾಜಿ ಕ್ರಿಕೆಟಿಗರ ಹುಬ್ಬೇರುವಂತೆ ಮಾಡಿದೆ. ಕೊಲ್ಕತ್ತಾ ನೈಟ್ ರೈಡರ್ಸ್​ ತಂಡದ ಕ್ಯಾಪ್ಟನ್ ಆಗಿ ತಂಡಕ್ಕೆ ಉತ್ತಮ ಕೊಡುಗೆ ನೀಡಿದ್ದ ಗೌತಿ, ಮೆಂಟರ್ ಆಗಿಯೂ ಕೂಡ ತಂಡಕ್ಕೆ ಅತ್ಯುತ್ತಮ ಕೆಲಸ ಮಾಡಿದ್ದಾರೆ.

    See also  ದೇವತಾ ದರ್ಶನ ಇನ್ನಷ್ಟು ಸುಲಭ ಮೈ ತೀರ್ಥ್ ಇಂಡಿಯಾದಿಂದ ವಿನೂತನ ಪ್ರಯೋಗ

    ಇದನ್ನೂ ಓದಿ: ಟ್ಯಾಟೂ ಹಾಕಿಸಿಕೊಂಡ ಕಿಚ್ಚನ ಪುತ್ರಿ; ಸಾನ್ವಿ ಸುದೀಪ್‌, ಏನಿದರ ಅರ್ಥ? ಎಂದ್ರು ಫ್ಯಾನ್ಸ್‌

    ಸತತ ಗೆಲುವಿನ ಕೇಕೆ ಹಾಕಿರುವ ಕೆಕೆಆರ್​ ತಂಡದ ಮೆಂಟರ್ ಸ್ಥಾನದಲ್ಲಿ ನಿಂತು ಮಾತನಾಡಿದ ಗಂಭೀರ್​, “ಈ ಐಪಿಎಲ್ ಇತಿಹಾಸದಲ್ಲಿ ನಮ್ಮ ಕೊಲ್ಕತ್ತಾ ನೈಟ್ ರೈಡರ್ಸ್​ ಟೀಮ್​ನ ಅತ್ಯಂತ ಯಶಸ್ವಿ ತಂಡವನ್ನಾಗಿ ಮಾಡಬೇಕೆಂಬುದು ನನ್ನ ದೊಡ್ಡ ಕನಸು. ಇದು ಕೇವಲ ಪ್ರಾರಂಭವಷ್ಟೇ, ನಮ್ಮ ತಂಡಕ್ಕೆ ಇನ್ನೂ ಮೂರು ಟ್ರೋಫಿಗಳನ್ನು ಸೇರಿಸವುದೇ ನನ್ನ ಗುರಿ. ಎಂಐ (Mumbai Indians) ಮತ್ತು ಸಿಎಸ್​ಕೆ (Chennai Super Kings) ತಂಡಗಳನ್ನು ಹಿಂದಿಕ್ಕಬೇಕು ಎಂದರೆ ನಾವಿನ್ನು ಎರಡು ಟ್ರೋಫಿ ಪಡೆಯಬೇಕು ಅಷ್ಟೇ” ಎಂದಿದ್ದಾರೆ,(ಏಜೆನ್ಸೀಸ್). 

    ಅಂಥದ್ದೇನು ನಾ ಹೇಳಿಲ್ಲ.. ವಿರಾಟ್ ಫ್ಯಾನ್ಸ್​ಗಳಿಂದ ಕೊಲೆ ಬೆದರಿಕೆ ಇದೆ! ಅಳಲು ತೋಡಿಕೊಂಡ ಮಾಜಿ ಕ್ರಿಕೆಟಿಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts