

Narendra Modi: ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳನ್ನು ಒಂದೇ ಸೂರಿನಡಿ ತರುವ ಉದ್ದೇಶದಿಂದ ನಿರ್ಮಿಸಿರುವ ದೆಹಲಿಯಲ್ಲಿನ ಕರ್ತವ್ಯ ಭವನವನ್ನು ಪ್ರಧಾನಿ ನರೇಂದ್ರ ಮೋದಿ ಬುಧವಾರ (ಆಗಸ್ಟ್6) ಉದ್ಘಾಟಿಸಿದರು.
ಈ ಕಟ್ಟಡವು ಅತ್ಯಾಧುನಿಕ ಸಮ್ಮೇಳನ ಕೊಠಡಿಗಳು, ಆಧುನಿಕ ಸೌಕರ್ಯಗಳು ಮತ್ತು ಸಿಸಿಟಿವಿಗಳನ್ನು ಒಳಗೊಂಡಿದ್ದು, ಗೃಹ ವ್ಯವಹಾರಗಳು, ವಿದೇಶಾಂಗ ವ್ಯವಹಾರಗಳು, ಗ್ರಾಮೀಣಾಭಿವೃದ್ಧಿ, ಎಂಎಸ್‌ಎಂಇಗಳು, ಡಿಒಪಿಟಿ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯಗಳ ಕಚೇರಿಗಳನ್ನು ಹೊಂದಿದೆ.
ಮೊದಲ ಮೂರು ಸಿಸಿಎಸ್ ಕಟ್ಟಡಗಳನ್ನು ಪೂರ್ಣಗೊಳಿಸಲು ನವೆಂಬರ್ 2023 ಗಡುವು ನೀಡಲಾಗಿತ್ತು ಎನ್ನಲಾಗಿದೆ. ಈ ಯೋಜನೆ 2027 ರ ಮಧ್ಯಭಾಗದಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಹೊಸ ಸಂಕೀರ್ಣವು ವಿವಿಧ ಕೇಂದ್ರ ಸರ್ಕಾರಿ ಸಚಿವಾಲಯಗಳನ್ನು ಒಳಗೊಂಡಂತೆ 10 ಹೊಸ ಕಟ್ಟಡಗಳನ್ನು ಹೊಂದಿರುತ್ತದೆ. ಈ ವಿಷಯವಾಗಿ ಮಂಗಳವಾರ(ಆಗಸ್ಟ್5) ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಸತಿ ಕಾರ್ಯದರ್ಶಿ ಕೆ ಶ್ರೀನಿವಾಸ್, ಈ ವರ್ಷ್ಯಾಂತ್ಯದಲ್ಲಿ ಉಳಿದ ಎಲ್ಲಾ ಕಟ್ಟಡಗಳ ಕೆಲಸ ಪ್ರಾರಂಭವಾಗಲಿದೆ ಎಂದರು.
ದೇಶದ ಶಕ್ತಿ ಕೇಂದ್ರದ ಬಳಿಯಿರುವ ರಾಜ್ ಪಥ್ವನ್ನು ಪುನರಾಭಿವೃದ್ಧಿ ಮಾಡಿ ಕರ್ತವ್ಯ ಪಥ್ ಎಂದು ಮರುನಾಮಕರಣ ಮಾಡಲಾಗಿದೆ. (ಏಜೆನ್ಸೀಸ್)