ರಂಜಾನ್ ಹಬ್ಬದ ಶುಭಾಶಯ; ಮೋದಿ, ಮುರ್ಮು, ರಾಹುಲ್​ಗಾಂಧಿ ಸಾಮರಸ್ಯ ಸಂದೇಶ |Eid

Ramjan
Published on

Eid | ಎಲ್ಲೆಡೆ ಸಾಮರಸ್ಯ ಮನೋಭಾವದಿಂದ ರಂಜಾನ್​ ಹಬ್ಬ ಆಚರಣೆ ಮಾಡಲಾಗ್ತಾ ಇದೆ. ಈ ನಡುವೆ ದೇಶದ ಪ್ರಮುಖ ರಾಜಕೀಯ ಗಣ್ಯರಾದ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪತಿ ಮುರ್ಮು ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್​ಗಾಂಧಿ ರಂಜಾನ್​ ಹಬ್ಬದ ಹಿನ್ನಲೆ ಶುಭಾಷಯ ಕೋರಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ :

ಪ್ರಧಾನ ಮಂತ್ರಿ ಮೋದಿ ಅವರು ರಂಜಾನ್​ ಹಬ್ಬಕ್ಕೆ ಶುಭಾಷಯ ತಿಳಿಸಿದ್ದಾರೆ. ತಮ್ಮ ಶುಭಾಶಯ ಸಂದೇಶದಲ್ಲಿ ದಯೆ ಮತ್ತು ಸಾಮರಸ್ಯ ವಿಚಾರಕ್ಕೆ ಮೋದಿ ಹೆಚ್ಚಿನ ಒತ್ತು ನೀಡಿದ್ದಾರೆ. ಈ ಹಬ್ಬವು ನಮ್ಮ ಸಮಾಜದಲ್ಲಿ ಸಾಮರಸ್ಯ ಮತ್ತು ದಯೆಯ ಚೈತನ್ಯವನ್ನು ಹೆಚ್ಚಿಸಲಿ. ನಿಮ್ಮ ಎಲ್ಲಾ ಪ್ರಯತ್ನಗಳಲ್ಲಿ ಸಂತೋಷ ಮತ್ತು ಯಶಸ್ಸು ದೊರೆಯಲಿ. ಈದ್ ಮುಬಾರಕ್, ಎಂದು ಮೋದಿ ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ರಾಷ್ಟ್ರಪತಿ ದೌಪದಿ ಮುರ್ಮು :

ರಂಜಾನ್​ ಹಬ್ಬದ ಶುಭಾಷಯ ತಿಳಿಸಿದ ರಾಷ್ಟ್ರಪತಿ ಮುರ್ಮು ಅವರು ಸಹೋದರತೆ ಮತ್ತು ಕರುಣೆಯ ಸಂದೇಶವನ್ನು ಸಾರಿದ್ದಾರೆ. ಈದ್-ಉಲ್-ಫಿತ್ನ ಶುಭ ಸಂದರ್ಭದಲ್ಲಿ, ನಾನು ಎಲ್ಲಾ ದೇಶವಾಸಿಗಳಿಗೆ, ವಿಶೇಷವಾಗಿ ನನ್ನ ಮುಸ್ಲಿಂ ಸಹೋದರ ಸಹೋದರಿಯರಿಗೆ ಶುಭಾಶಯಗಳನ್ನು ಕೋರುತ್ತೇನೆ. ಈ ಹಬ್ಬವು ಸಹೋದರತೆಯ ಚೈತನ್ಯವನ್ನು ಹೆಚ್ಚಿಸುತ್ತದೆ ಮತ್ತು ದಾನ, ಕರುಣೆಯನ್ನು ಅಳವಡಿಸಿಕೊಳ್ಳುವ ಸಂದೇಶವನ್ನು ನೀಡುತ್ತದೆ. ಈ ಹಬ್ಬವು ಎಲ್ಲರ ಜೀವನದಲ್ಲಿ ಶಾಂತಿ, ಸಮೃದ್ಧಿ ಹಾಗೂ ಸಂತೋಷವನ್ನು ತರಲಿ ಹಾಗೂ ಎಲ್ಲರ ಹೃದಯಗಳಲ್ಲಿ ಒಳಿತಿನ ಮಾರ್ಗದಲ್ಲಿ ನಡೆಯುವ ಸಂಕಲ್ಪವನ್ನು ಬಲಪಡಿಸಲಿ ಎಂದು ಆಶಿಸುತ್ತೇನೆ ಎಂದು ದೌಪದಿ ಮುರ್ಮು ಅವರು ಹಿಂದಿಯಲ್ಲಿ ಬರೆದು ಶುಭಕೋರಿದ್ದಾರೆ.

ರಾಹುಲ್ ಗಾಂಧಿ :

ಭಾರತದ ರಾಜಕೀಯ ಪಕ್ಷಗಳ ನಾಯಕರು ಈದ್ ಅಲ್-ಫಿತ್ ಸಂದರ್ಭದಲ್ಲಿ ಶುಭಾಶಯಗಳನ್ನು ತಿಳಿಸುವ ಮೂಲಕ ಶಾಂತಿ, ಸಾಮರಸ್ಯ ಮತ್ತು ಸಹೋದರತೆಯ ಸಂದೇಶವನ್ನು ಜನರಿಗೆ ತಲುಪಿಸಿದ್ದಾರೆ.

ಇನ್ನೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಹ ಶಾಂತಿ ಮತ್ತು ಸಮೃದ್ಧಿಯ ಸಂದೇಶ ಸಾರುವ ಮೂಲಕ ಮುಸ್ಲಿಂ ಬಾಂಧವರಿಗೆ ಶುಭಾಷಯ ತಿಳಿಸಿದ್ದಾರೆ. ಈದ್ ಮುಬಾರಕ್ ಈ ಸಂತೋಷದ ಸಂದರ್ಭವು ನಿಮಗೆ ಮತ್ತು ನಿಮ್ಮ ಪ್ರೀತಿಪಾತ್ರರಿಗೆ ಶಾಂತಿ, ಸಂತೋಷ, ಸಮೃದ್ಧಿ ಮತ್ತು ಉತ್ತಮ ಆರೋಗ್ಯವನ್ನು ತರಲಿ ಎಂದು ಎಕ್ಸ್‌ನಲ್ಲಿ ಬರೆದು ಜೊತೆಗೆ ಒಂದು ಚಿತ್ರವನ್ನು ಸಹ ಹಂಚಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net