

ನವದೆಹಲಿ: ಗ್ವಾಲಿಯರ್ನ ರಾಜಮಾತೆ ಎಂದೇ ಖ್ಯಾತರಾಗಿರುವ ವಿಜಯರಾಜೇ ಸಿಂಧ್ಯಾ ಅವರ ಜನ್ಮಶತಮಾನೋತ್ಸವ ಸ್ಮರಣಾರ್ಥ ಪ್ರಧಾನಿ ನರೇಂದ್ರ ಮೋದಿ ಅವರು ನೂರು ರೂಪಾಯಿ ನಾಣ್ಯವನ್ನು ಸೋಮವಾರ ಬಿಡುಗಡೆ ಮಾಡಿದರು.
ಹಣಕಾಸು ಸಚಿವಾಲಯವು ಈ ವಿಶೇಷ ನಾಣ್ಯವನ್ನು ಮುದ್ರಿಸಿದ್ದು, ಇಂದು ಬೆಳಗ್ಗೆ ನಡೆದ ವರ್ಚುವಲ್ ಸಮಾರಂಭದಲ್ಲಿ ಪ್ರಧಾನಿ ಮೋದಿ ಬಿಡುಗಡೆ ಮಾಡಿದರು.
ಬಳಿಕ ಮಾತನಾಡಿದ ಪ್ರಧಾನಿ, ರಾಜಮಾತೆ ಸಿಂಧ್ಯಾ ಅವರು ತಮ್ಮ ಜೀವನವನ್ನು ಜನರಿಗಾಗಿ ಅರ್ಪಿಸಿದರು. ಜನರ ಪ್ರತಿನಿಧಿಗಳಿಗೆ 'ರಾಜ್ ಸತ್ತಾ' ಅಲ್ಲ, 'ಜನಸೇವೆ'ಯೇ ಮುಖ್ಯವೆಂದು ಸಾಬೀತುಪಡಿಸಿದರು ಎಂದು ಸ್ಮರಿಸಿದರು.
ತ್ರಿವಳಿ ತಲಾಖ್ ವಿರುದ್ಧ ಕಾನೂನು ಮಾಡಿರುವುದರಿಂದ ದೇಶವು ರಾಜಮಾತೆ ಸಿಂಧ್ಯಾ ಅವರ ಮಹಿಳಾ ಸಬಲೀಕರಣದ ದೃಷ್ಟಿಕೋನವನ್ನು ಮುನ್ನೆಡೆಸುತ್ತಿದ್ದಾರೆಂದು ಪ್ರಧಾನಿ ಹೇಳಿದರು.
ಪ್ರಧಾನಿ ಮೋದಿ ಅವರ ಜತೆಗೆ ವಿಜಯರಾಜೇ ಸಿಂಧ್ಯಾ ಅವರ ಕುಟುಂಬಸ್ಥರು, ಕೇಂದ್ರ ಹಣಕಾಸು ಸಚಿವಾಲಯದ ಮುಖ್ಯಸ್ಥರು ಹಾಗೂ ಇತರ ಗಣ್ಯರು ವರ್ಚುವಲ್ ಪ್ಲ್ಯಾಟ್ಫಾರ್ಮ್ ಮೂಲಕ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು. (ಏಜೆನ್ಸೀಸ್)