ಕ್ರಿಸ್ತನ ತ್ಯಾಗ ಸ್ಮರಿಸಿದ ಪ್ರಧಾನಿ ಮೋದಿ

modi
Published on

ನವದೆಹಲಿ: ಯೇಸು ಕ್ರಿಸ್ತನ ಆಳವಾದ ತ್ಯಾಗವನ್ನು ಶುಭಶುಕ್ರವಾರದ ಪ್ರಯುಕ್ತ ಸ್ಮರಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಇದು ಎಲ್ಲರಿಗೂ ಸಹಾನುಭೂತಿ ಮತ್ತು ಕ್ಷಮೆಯ ಪಾಠಗಳನ್ನು ಕಲಿಸುತ್ತದೆ ಎಂದು ಹೇಳಿದ್ದಾರೆ.

ಕ್ರಿಸ್ತನ ಸಹನಾಶೀಲತೆಯ ಪಾಠ ಪ್ರತಿಯೊಬ್ಬರೂ ಅನುಸರಿಸಬೇಕಿದೆ. ಎಂದು ಪ್ರಧಾನಿ ಮೋದಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಕ್ರಿಸ್ತರಿಗೆ ಪ್ರಧಾನಿ ಮೋದಿ ಅವರು ಶುಭಹಾರೈಸಿದ್ದಾರೆ.

ಶುಭ ಶುಕ್ರವಾರ ಪ್ರಯುಕ್ತ ಚರ್ಚ್‌ಗಳಲ್ಲಿ ಪ್ರಾರ್ಥನೆಗಳನ್ನು ನಡೆಸಲಾಗುತ್ತಿದೆ. ರಾಷ್ಟ್ರ ರಾಜಧಾನಿಯ ಸೇಕ್ರೆಡ್ ಹಾರ್ಟ್ ಕ್ಯಾಥೆಡ್ರಲ್ ಚರ್ಚ್‌ನಲ್ಲಿಯೂ ಪ್ರಾರ್ಥನೆ ಸಲ್ಲಿಸಲಾಯಿತು. ದೆಹಲಿಯ ಪ್ರಧಾನ ಕಛೇರಿಯ ಕ್ಯಾಥೋಲಿಕ್ ಬಿಷಪ್ಸ್ ಕಾನ್ಫರೆನ್ಸ್ ಆಫ್ ಇಂಡಿಯಾದ ಸಿಬಿಸಿಐ ಕೇಂದ್ರದಿಂದ ಫಾದರ್ ಜಾಲಿ ಅವರು ಕ್ರಿಶ್ಚಿಯನ್ನರಿಗೆ 'ಶುಭ ಶುಕ್ರವಾರ'ದ ಮಹತ್ವವನ್ನು ವಿವರಿಸಿದರು.

ಎಎನ್‌ಐ ಜೊತೆ ಮಾತನಾಡಿದ ಫಾದರ್ ಜಾಲಿ, "ಶುಭ ಶುಕ್ರವಾರದಂದು, ಕ್ರಿಶ್ಚಿಯನ್ನರು ಯೇಸು ಕ್ರಿಸ್ತನ ಮರಣವನ್ನು ನೆನಪಿಸಿಕೊಳ್ಳುತ್ತಾರೆ. ಇದು ಕ್ರಿಸ್ತನ ಶಿಲುಬೆಯ ನೋವು ಮತ್ತು ಮರಣ ನೆನೆದು ಮುಂದೆ ಸಾಗಲು ನಮಗೆ ಸ್ಮರಣೀಯ ದಿನವಾಗಿದೆ. ಇದರೊಂದಿಗೆ ನಾವು ನಮ್ಮನ್ನು, ನಮ್ಮ ಮನೆಗಳನ್ನು ಪವಿತ್ರಗೊಳಿಸುತ್ತೇವೆ. ಮತ್ತು ಕ್ರಿಸ್ತನ ಜೀವನದೊಂದಿಗೆ ನಮ್ಮ ಜೀವನವನ್ನು ಸೇರಲು ನಮ್ಮ ಹೃದಯ ಮತ್ತು ಮನಸ್ಸನ್ನು ಶುದ್ಧೀಕರಿಸುತ್ತೇವೆ ಎಂದು ಹೇಳಿದರು.

ತಿರುವನಂತಪುರಂನಲ್ಲಿ, ಪಾಳಯಂನಲ್ಲಿರುವ ಸೇಂಟ್ ಜೋಸೆಫ್ ಕ್ಯಾಥೆಡ್ರಲ್‌ಗೆ 'ಕ್ರಾಸ್ ಸ್ಟೇಷನ್' ಮೆರವಣಿಗೆಯಲ್ಲಿ ಭಕ್ತರು ಪಾಲ್ಗೊಂಡರು.ಕೋಲ್ಕತ್ತಾದಲ್ಲಿ ಕ್ರೈಸ್ತರು ಮದರ್ ಹೌಸ್‌ನಿಂದ ಸೇಂಟ್ ತೆರೇಸಾ ಚರ್ಚ್‌ಗೆ ಮೆರವಣಿಗೆ ನಡೆಸಿದರು. ಶುಭ ಶುಕ್ರವಾರವನ್ನು ಆಚರಿಸಲು ಚರ್ಚ್‌ನಲ್ಲಿ ಪ್ರಾರ್ಥನೆ ಸಲ್ಲಿಸಿದರು.

ಶುಭ ಶುಕ್ರವಾರ'ದ ದಿನವನ್ನು 'ಈಸ್ಟರ್' ಎಂದು ಕರೆಯಲಾಗುತ್ತದೆ, ಇದು ಯೇಸುವನ್ನು ಶಿಲುಬೆಗೇರಿಸಿದ ಮೂರನೇ ದಿನದ ಪುನರುತ್ಥಾನದ ಘಟನೆಯನ್ನು ಉಲ್ಲೇಖಿಸುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net