ಕಿಸಾನ್ ಸೂರ್ಯೋದಯ ಲೋಕಾರ್ಪಣೆಗೊಳಿಸಿದ್ರು ಪ್ರಧಾನಿ ಮೋದಿ

Kisan Suryodaya yojana PM Modi
Published on

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ತವರು ರಾಜ್ಯ ಗುಜರಾತ್​​ನ ರೈತರ ಅಭಿವೃದ್ಧಿ, ಆರೋಗ್ಯ ವಲಯದ ಅಭಿವೃದ್ಧಿ ಮತ್ತು ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಮೂರು ಯೋಜನೆಗಳಿಗೆ ಶನಿವಾರ ವರ್ಚುವಲ್ ವೇದಿಕೆಯಲ್ಲಿ ಚಾಲನೆ ನೀಡಿದರು.

ರೈತರಿಗೆ ಬೆಳೆಗಳಿಗೆ ನೀರು ಪೂರೈಸಲು ಮತ್ತು ಇತರೆ ಕೆಲಸಗಳಿಗೆ ನೆರವಾಗಲಿ ಎನ್ನುವ ಉದ್ದೇಶದಿಂದ ಹಗಲು ಹೊತ್ತಿನಲ್ಲಿ ವಿದ್ಯುತ್ ನೀಡುವ ಕಿಸಾನ್ ಸೂರ್ಯೋದಯ ಯೋಜನೆಯನ್ನು ಆರಂಭಿಸಲಾಗಿದೆ. ಯುಎನ್ ಮೆಹ್ತಾ ಇನ್​ಸ್ಟಿಟ್ಯೂಟ್ ಆಫ್ ಕಾರ್ಡಿಯಾಲಜಿಯಲ್ಲಿ ಮಕ್ಕಳ ಹೃದ್ರೋಗ ಆಸ್ಪತ್ರೆಯನ್ನು ತೆರೆಯಲಾಗಿದೆ. 470 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಆಸ್ಪತ್ರೆ ನಿರ್ವಿುಸಲಾಗಿದೆ.

ಅಲ್ಲದೆ, ಜುನಾಗ್ಬಾದ್ ನಗರದಲ್ಲಿರುವ ಗಿರ್ನಾರ್ ಬೆಟ್ಟದಲ್ಲಿ 2.3 ಕಿ.ಮೀ ಉದ್ದದ ರೋಪ್​ವೇ ನಿರ್ವಿುಸಲಾಗಿದ್ದು, ಅದರ ಉದ್ಘಾಟನೆಯನ್ನೂ ಪ್ರಧಾನಿ ನೆರವೇರಿಸಿದ್ರು. ಇದೇ ವೇಳೆ, ರೈತರು ನೀರು ಉಳಿತಾಯ ಮಾಡಬೇಕು. ಪರ್ ಡ್ರಾಪ್ ಮೋರ್ ಕ್ರಾಪ್ ಎನ್ನುವ ಸೂತ್ರ ಪಾಲಿಸಬೇಕು ಎಂದು ರೈತರನ್ನುದ್ದೇಶಿಸಿ ಅವರು ಹೇಳಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net