ಪಾಕಿಸ್ತಾನ ಸೇನೆಯ ಚೀನಾ ನಿರ್ಮಿತ ಕ್ವಾಡ್​ಕಾಪ್ಟರ್​ನ್ನು ಹೊಡೆದುರುಳಿಸಿತು ಸೇನೆ

Quad copter pakistan
Published on

ಶ್ರೀನಗರ : ಭಾರತದ ಸೀಮಾ ರೇಖೆಯ ಸಮೀಪ ಹಾರಾಡುತ್ತಿದ್ದ ಪಾಕಿಸ್ತಾನ ಸೇನೆ ಬಳಸುತ್ತಿದ್ದ ಚೀನಾ ನಿರ್ಮಿತ ಕ್ವಾಡ್​ಕಾಪ್ಟರ್ ಅನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ.

ಪಾಕಿಸ್ತಾನವು ಉಗ್ರರನ್ನು ಭಾರತದೊಳಗೆ ಕಳುಹಿಸಲು ಸಕಲ ಪ್ರಯತ್ನ ಮಾಡುತ್ತಿದ್ದು, ನಾವು ಅದನ್ನು ಯಶಸ್ವಿಯಾಗಲು ಬಿಡುವುದಿಲ್ಲ ಎಂದು ಸೇನೆಯ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರಾವಣೆ ತಿಳಿಸಿದ್ದಾರೆ.

ಕೇರನ್ ಪ್ರದೇಶದ ಗಡಿ ರೇಖೆಯ ಬಳಿ ಶನಿವಾರ ಬೆಳಗ್ಗೆ ಕ್ವಾಡ್​ಕಾಪ್ಟರ್ ಹಾರಾಡುತ್ತಿತ್ತು. ಇದು ಗಮನಕ್ಕೆ ಬರುತ್ತಿದ್ದಂತೆ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಸೇನೆ ಅದನ್ನು ಹೊಡೆದುರುಳಿಸಿದೆ. ಕ್ವಾಡ್​ಕಾಪ್ಟರ್ ಚೀನಾದ ಡಿಜೆಐ ಮಾವಿಕ್ ಕಂಪನಿಯ 2 ಪ್ರೋ ಮಾಡೆಲ್​ ನದ್ದಾಗಿದೆ. ಭಾರತೀಯ ಸೇನೆಯು ಗಡಿ ಭಾಗದಲ್ಲಿ ಹೆಚ್ಚು ಸಕ್ರಿಯವಾಗಿದ್ದು, ಪಾಕಿಸ್ತಾನದ ಒಳನುಸುಳುಕೋರರು ಮತ್ತು ಈ ರೀತಿಯ ದಾಳಿಗಳನ್ನು ಸಂಪೂರ್ಣವಾಗಿ ವಿಫಲ ಮಾಡಲಾಗುವುದು ಎಂದು ಸೇನೆ ತಿಳಿಸಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net