

ನವದೆಹಲಿ: ಶ್ರೀಮಂತ ಉದ್ಯಮಿ ಗೌತಮ್ ಅದಾನಿ(Adani ) ಸೌರ ವಿದ್ಯುತ್ ಗುತ್ತಿಗೆಗೆ ಸಂಬಂಧಿಸಿದಂತೆ ಬಹುಕೋಟಿ ಮತ್ತು ಡಾಲರ್ ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಹೊರ ಬಿದ್ದ ಬಳಿಕ, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬಹುಕೋಟಿ ವಂಚನೆ ಪ್ರಕರಣದಲ್ಲಿ ಗೌತಮ್ ಅದಾನಿ ಜತೆ ಪ್ರಧಾನಿ ನರೇಂದ್ರ ಮೋದಿ ಕೈಜೋಡಿಸಿದ್ದಾರೆ. ಹೀಗಾಗಿ, ಹಗರಣ ನಡೆದರೂ ನಮ್ಮ ದೇಶ ಮತ್ತು ವಿದೇಶದಲ್ಲಿ ಅದಾನಿ ಅವರು ಸ್ವತಂತ್ರ್ಯವಾಗಿ ಓಡಾಡುತ್ತಿದ್ದಾರೆ. ಮೋದಿ ಅವರ(ಅದಾನಿ) ರಕ್ಷಣೆಯಲ್ಲಿದ್ದಾರೆ. ಇನ್ನೂ ಪ್ರಕರಣದಲ್ಲಿ ಭಾಗಿಯಾಗಿರುವ ಶ್ರೀಮಂತ್ರ ಉದ್ಯಮಿಯನ್ನು ಕೂಡಲೇ ಬಂಧಿಸಬೇಕು ಎಂದು ದೆಹಲಿಯಲ್ಲಿ ಗುರುವಾರ(ನ.21) ನಡೆದ ಪ್ರತಿಕಾಗೋಷ್ಠಿಯಲ್ಲಿ ರಾಹುಲ್ ಒತ್ತಾಯಿಸಿದರು.
ಅದಾನಿ ಭಾರತೀಯ ಮತ್ತು ಅಮೆರಿಕಾದ ಎರಡು ಕಾನೂನುಗಳನ್ನು ಉಲ್ಲಂಘಿಸಿದ್ದಾರೆ. ಅಲ್ಲದೆ, ಈಗ ಅದು ಧೃಡಪಟ್ಟಿದೆ. ಈ ದೇಶದಲ್ಲಿ ಅದಾನಿ ಏಕೆ ಸ್ವತಂತ್ರ್ಯವಾಗಿ ಓಡಾಡುತ್ತಿದ್ದಾರೆ ಎಂದು ನಾನು ಆಶ್ಚರ್ಯಪಡುತ್ತಿದ್ದೆ. ಈಗ ಗೊತ್ತಾಗಿದೆ. ಅವರ ಬೆನ್ನಿಂದೆ ನಮ್ಮ ಪ್ರಧಾನಿಗಳು ಇದ್ದಾರೆ ಎಂದು ಆರೋಪಿಸಿದ ರಾಹುಲ್ ತೀವ್ರ ವಾಗ್ದಾಳಿ ನಡೆಸಿದರು. ಈ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ಅದಾನಿ ಭಾಗಿಯಾಗಿದ್ದಾರೆ ಎಂದು 2020 ರಿಂದ 2024ರ ಮಧ್ಯದಲ್ಲಿ ರಾಹುಲ್ ಗಾಂಧಿ ಆರೋಪಿಸಿದ್ದರು ಎಂದು ವರದಿಗಳು ಉಲ್ಲೇಖಿಸಿವೆ,(ಏಜೆನ್ಸೀಸ್).