

ತಿರುವನಂತಪುರಂ: ಪ್ರಧಾನಿ ನರೇಂದ್ರ ಮೋದಿ ಅವರು ಕೇರಳದ ಮೊದಲ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಇಂದು (ಏಪ್ರಿಲ್ 25) ಚಾಲನೆ ನೀಡಿದರು.
ಕೇರಳ ರಾಜಧಾನಿ ತಿರುವನಂತಪುರದಲ್ಲಿ ಪ್ರಧಾನಿ ಮೋದಿ ಹಸಿರು ನಿಶಾನೆ ತೋರಿದರು. ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ತಿರುವನಂತಪುರ ಕೇಂದ್ರ ಮತ್ತು ಕಾಸರಗೋಡು ನಡುವೆ ಸಂಚರಿಸಲಿದೆ.
ಚಾಲನೆಗೂ ಮುನ್ನ ತಂಪನೂರ್ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್ ಸಂಖ್ಯೆ 1 ರಲ್ಲಿ ನಿಲ್ಲಿಸಲಾದ ರೈಲಿನ C 2 ಕೋಚ್‌ನಲ್ಲಿ 42 ಆಯ್ದ ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ಮೋದಿ ಸಂವಾದ ನಡೆಸಿದರು. ಸಂವಾದ ನಡೆಸಿದ ಬಳಿಕ ಪ್ರಧಾನಿ ಮೋದಿ ರೈಲಿಗೆ ಚಾಲನೆ ನೀಡಿದರು. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೂಡ ರೈಲಿನಲ್ಲಿ ಮೋದಿಗೆ ಸಾಥ್ ನೀಡಿದರು.
ಇದೇ ಸಂದರ್ಭದಲ್ಲಿ ಲೊಕೊ ಪೈಲಟ್‌ಗಳ ಜತೆಯೂ ಮೋದಿ ಮಾತನಾಡಿದರು. ಮೊದಲ ಪಯಣದಲ್ಲಿ ಧಾರ್ಮಿಕ, ಸಾಮಾಜಿಕ-ರಾಜಕೀಯ ಮುಖಂಡರು ಹಾಗೂ ಗಣ್ಯರು ಭಾಗವಹಿಸಿದರು. 1000 ವಿದ್ಯಾರ್ಥಿಗಳು ವಿವಿಧ ನಿಲ್ದಾಣಗಳಿಂದ ಉಚಿತ ಪ್ರಯಾಣ ಅನುಭವಿಸಿದರು. (ಏಜೆನ್ಸೀಸ್)