ಪ್ರಿಯತಮೆ ಮೇಲೆ ಕುದಿಯುವ ಎಣ್ಣೆ ಸುರಿದ ಗೆಳೆಯ; ಪ್ರಿಯಕರನಿಗಾಗಿ ಹುಡುಕಾಟ!

boiling oil
Published on

ಆಂಧ್ರಪ್ರದೇಶ:  ಮಾದಕ ವ್ಯಸನಿ ಯುವಕ ಪ್ರೀತಿಸಿದ ಯುವತಿ ಮೇಲೆ ಕುದಿಯುವ ಎಣ್ಣೆ ಸುರಿದ ಪರಿಣಾಮ ಆಕೆ ಗಂಭೀರವಾಗಿ ಗಾಯಗೊಂಡಿದ್ದಾಳೆ.

ಎಲೂರು ಜಿಲ್ಲೆಯ ತನ್ನ ಮನೆಯ ಕೊಠಡಿಯಲ್ಲಿ ಯುವಕ ಆಕೆಯ ಕೈ ಮತ್ತು ಕಾಲುಗಳ ಮೇಲೆ ಕುದಿಯುವ ಎಣ್ಣೆಯನ್ನು ಸುರಿದಿದ್ದ. ಆಂಧ್ರಪ್ರದೇಶದ ಕಾಕಿನಾಡದಲ್ಲಿರುವ ಜವಾಹರಲಾಲ್ ನೆಹರು ತಾಂತ್ರಿಕ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಯುವತಿ ಮೂರನೇ ವರ್ಷದ ಎಂಜಿನಿಯರಿಂಗ್ ಓದುತ್ತಿದ್ದಾಳೆ. ಏಲೂರು ನಿವಾಸಿಯಾಗಿರುವ ಯುವತಿ ದುಗ್ಗಿರಾಳ ನಿವಾಸಿ ಅನುದೀಪ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಆತ ಆಕೆಯನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದ. ಐದು ದಿನಗಳ ಹಿಂದೆ ಅನುದೀಪ್ ವಿದ್ಯಾರ್ಥಿನಿಯನ್ನು ದುಗ್ಗಿರಾಳದಲ್ಲಿರುವ ತನ್ನ ಮನೆಗೆ ಕರೆದುಕೊಂಡು ಹೋಗಿದ್ದ. ಅಲ್ಲಿ ಆತ ವಿದ್ಯಾರ್ಥಿನಿಯನ್ನು ಒಂದು ಕೋಣೆಯಲ್ಲಿ ಕಟ್ಟಿಹಾಕಿ ಹಿಂಸಿಸುತ್ತಿದ್ದ.ಕೊಲೆ ಬೆದರಿಕೆ ಹಾಕಿದ್ದ. ಮಧ್ಯರಾತ್ರಿಯ ನಂತರ ನೇಣು ಬಿಗಿದು ಕೊಲ್ಲಲು ಯೋಜಿಸಿದ್ದ. ಆದಾಗ್ಯೂ, ಅವಳು ತಪ್ಪಿಸಿಕೊಂಡು ತನ್ನ ಮನೆ ತಲುಪಿದಳು. ಪೋಷಕರ ನೆರವಿನಿಂದ ಆಕೆ ದೂರು ದಾಖಲಿಸಿದ್ದಾಳೆ.

ಆರೋಪಿಯು ಗಾಂಜಾ ಮತ್ತು ಇತರ ಮಾನಸಿಕ ಮಾದಕ ವ್ಯಸನಿಯಾಗಿದ್ದು, ಪ್ರೀತಿಯ ಹೆಸರಿನಲ್ಲಿ ಹಲವಾರು ಹುಡುಗಿಯರನ್ನು ವಂಚಿಸುತ್ತಿದ್ದ ಎನ್ನಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತಲೆಮರೆಸಿಕೊಂಡಿರುವ ಅನುದೀಪ್‌ಗಾಗಿ ಹುಡುಕಾಟ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net