ದೇಶದ ಮೊದಲ ಚಾಲಕ ರಹಿತ ಮೆಟ್ರೋ ಸೇವೆಗೆ ಚಾಲನೆ ನೀಡಿದ್ರು ಪ್ರಧಾನಿ ಮೋದಿ

Delhi Metro Driverless service PM Modi
Published on

ನವದೆಹಲಿ: ದೇಸದ ಮೊಟ್ಟ ಮೊದಲ ಚಾಲಕ ರಹಿತ ಪೂರ್ಣ ಪ್ರಮಾಣದಲ್ಲಿ ಸ್ವಯಂ ಚಾಲಿತ ಮೆಟ್ರೋ ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಇಂದು ಚಾಲನೆ ನೀಡಿದರು. ಈ ಸ್ವಯಂ ಚಾಲಿತ ರೈಲು ದೆಹಲಿ ಮೆಟ್ರೋದ ಮೆಜೆಂಟಾ ದಾರಿಯಲ್ಲಿ ಸಂಚರಿಸುತ್ತದೆ.

ತಾಂತ್ರಿಕವಾಗಿ ಮುಂದುವರಿದ ಸೇವೆ ಇದಾಗಿದ್ದು ರಾಷ್ಟ್ರ ರಾಜಧಾನಿಯಲ್ಲಿ ಮೆಜೆಂಟಾ ಪಥದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಹೊಸ ಅನುಭವ ನೀಡಲಿದೆ.

ಮೆಜೆಂಟಾ ಲೈನ್​ 37 ಕಿ.ಮೀ. ದೂರದ್ದಾಗಿದ್ದು ಜಾನಕಪುರಿ ವೆಸ್ಟ್​ನಿಂದ ಬೊಟಾನಿಕಲ್ ಗಾರ್ಡನ್​ ತನಕ ಇದೆ. ಇದೇ ರೀತಿ 2021ರ ಮಧ್ಯಭಾಗದಲ್ಲಿ 57 ಕಿ.ಮೀ. ಉದ್ದದ ಪಿಂಕ್ ಪಥ ಮಜ್ಲಿಸ್ ಪಾರ್ಕ್​ನಿಂದ ಶಿವ ವಿಹಾರ್ ತನಕದ ಮಾರ್ಗದಲ್ಲಿ ಸ್ವಯಂಚಾಲಿತ ಮೆಟ್ರೋ ರೈಲುಗಳು ಸೇವೆ ಒದಗಿಸುವ ನಿರೀಕ್ಷೆ ಇದೆ.

ಆರು ಬೋಗಿಗಳ ಚಾಲಕ ರಹಿತ ರೈಲು: ಚಾಲಕ ರಹಿತ ರೈಲುಗಳಲ್ಲಿ ಆರು ಬೋಗಿಗಳು ಇರಲಿವೆ. ಇದರಲ್ಲಿ ಅನೇಕ ಸುಧಾರಿತ ಅಂಶಗಳಿವೆ. ಆರಂಭಿಕ ಹಂತದಲ್ಲಿ ಚಾಲಕರು ಟ್ರೈನ್​ನಲ್ಲಿ ಇರಲಿದ್ದು, ನಿಧಾನವಾಗಿ ಸಂಪೂರ್ಣ ಸ್ವಯಂಚಾಲಿತ ರೈಲು ಸೇವೆ ಗ್ರಾಹಕರಿಗೆ ಸಿಗಲಿದೆ ಎಂದು ದೆಹಲಿ ಮೆಟ್ರೋ ತಿಳಿಸಿದೆ. (ಏಜೆನ್ಸೀಸ್)

ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net