ಜನರಿಂದ ಐಡಿಯಾ ಕೇಳಿದ ಪ್ರಧಾನಿ ನರೇಂದ್ರ ಮೋದಿ...

Modi in hakhaton
Published on

ಬೆಂಗಳೂರು: ಯಾವಾಗಲೂ ಯಾವುದಾದರೊಂದು ರೀತಿಯಲ್ಲಿ ಜನರನ್ನು ತಲುಪಲು, ಅವರಿಂದ ಪ್ರತಿಕ್ರಿಯೆ ತಿಳಿಯಲು ಬಯಸುವ ಪ್ರಧಾನಿ ನರೇಂದ್ರ ಮೋದಿ ಇದೀಗ ಜನರಿಂದ ಐಡಿಯಾ ಕೇಳಿದ್ದಾರೆ.

ಅಂದಹಾಗೆ ಅವರು ಇಂಥದ್ದೊಂದು ಬೇಡಿಕೆ ಮುಂದಿಟ್ಟಿರುವುದು 'ಮನ್​ ಕಿ ಬಾತ್​'ಗಾಗಿ. 'ಮನ್​ ಕಿ ಬಾತ್​' ಮೂಲಕ ಆಗಾಗ ತಮ್ಮ ಮನದ ಅನಿಸಿಕೆಗಳನ್ನು ಹಂಚಿಕೊಳ್ಳುವ ಮೋದಿ, ಆ ಮೂಲಕ ಸಾಮಾಜಿಕ ಪರಿವರ್ತನೆಗಾಗಿ ಸಮಾಜದಲ್ಲಿ ಸಾಧನೆ ಮಾಡಿದ ಸಾಧಕರ ಕುರಿತು ಕೂಡ ಆಗಾಗ ಪ್ರಸ್ತಾಪಿಸುತ್ತಿರುತ್ತಾರೆ.

ಅಂಥ ಸಾಧಕರ ಬಗ್ಗೆ ಹಾಗೂ ಸಾಮಾಜಿಕ ಪರಿವರ್ತನೆಗಾಗಿ ತಮ್ಮಲ್ಲಿರುವ ಯೋಚನೆ-ಯೋಜನೆಗಳ ವಿಚಾರಗಳನ್ನು ಹಂಚಿಕೊಳ್ಳುವಂತೆ ಅವರು ಜನರಿಗೆ ಕರೆ ನೀಡಿದ್ದಾರೆ. ಅ. 25ರಂದು ನಡೆಯುವ 'ಮನ್​ ಕಿ ಬಾತ್' ಕಾರ್ಯಕ್ರಮದಲ್ಲಿ ಅವರು ಅಂಥ ಆಯ್ದ ಐಡಿಯಾ/ಸಾಧಕರ ಕುರಿತು ತಮ್ಮ ಮಾತಿನಲ್ಲಿ ಉಲ್ಲೇಖಿಸಲಿದ್ದಾರೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net