ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಮನುಷ್ಯನಿಗೆ ಹಾಗು ಪರಿಸರಕ್ಕೆ ಅವಿನಾಭಾವ ಸಂಬಂಧವಿದ್ದು, ಮನುಷ್ಯ ಪ್ರಕೃತಿಗೆ ಋಣಿಯಾಗಿ ಬದುಕಬೇಕು. ಪರಿಸರ ಉಳಿಕೆ ದೃಷ್ಟಿಯಿಂದ ಸಂಘಗಳ ಮೂಲಕ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಕೈಗೊಂಡ ಕಾರ್ಯಗಳು ಅದ್ಭುತ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್ ಹೇಳಿದರು.
ವಿಶ್ವಪರಿಸರ ದಿನಾಚರಣೆ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಗುರುವಾಯನಕೆರೆ, ಸರ್ಕಾರಿ ಪ್ರೌಢ ಶಾಲೆ ಮಚ್ಚಿನ, ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ಮಚ್ಚಿನ, ಶೌರ್ಯ ವಿಪತ್ತು ನಿರ್ವಹಣಾ ಘಟಕದ ಮಚ್ಚಿನ ಪಾಲಡ್ಕ ಆಶ್ರಯದಲ್ಲಿ ಆಯೋಜಿಸಲಾದ ಗಿಡ ನಾಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಶಿಕ್ಷಕ ರಮೇಶ್ ಮಾತನಾಡಿ, ಪರಿಸರ ನಾಶವಾಗುತ್ತಿರುವುದನ್ನು ಮನಗಂಡ ವಿಶ್ವಸಂಸ್ಥೆ 1972ರಲ್ಲೇ ವಿಶ್ವ ಪರಿಸರ ದಿನಾಚರಣೆ ಘೋಷಿಸಿತ್ತು. ಪ್ರತಿ ವರ್ಷ ಹೊಸ ಧ್ಯೇಯ ವಾಕ್ಯಗಳೊಂದಿಗೆ ಪರಿಸರ ದಿನಾಚರಣೆ ಪ್ರಕೃತಿ ಉಳಿಕೆಗೆ ಪ್ರೇರಣೆಯಾಗಿದೆ ಎಂದರು.
ಮಚ್ಚಿನ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರುಕ್ಮಿಣಿ, ಉಪಾಧ್ಯಕ್ಷ ಸೋಮವತಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ವಸಂತಿ ಲಕ್ಮಣ, ಮುಖ್ಯ ಶಿಕ್ಷಕ ಪ್ರಕಾಶ್, ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷ ಹರ್ಷ, ಒಕ್ಕೂಟದ ಅಧ್ಯಕ್ಷ ಜಯ ಪೂಜಾರಿ, ನ್ಯೂ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ಸದಸ್ಯ ಸಂದೀಪ್, ಯೋಜನಾಧಿಕಾರಿ ದಯಾನಂದ ಪೂಜಾರಿ, ಮೇಲ್ವಿಚಾರಕ ವಸಂತ್, ಸೇವಾ ಪ್ರತಿನಿಧಿಗಳಾದ ಪರಮೇಶ್ವರ್, ನಂದಿನಿ ಉಪಸ್ಥಿತರಿದ್ದರು. ಶೌರ್ಯ ವಿಪತ್ತು ಘಟಕದ ಸದಸ್ಯರು ಗಿಡಗಳ ನಾಟಿ ನಡೆಸಿದರು.