ಕಜೆ ಶ್ರೀರಾಮ ಭಜನಾ ಮಂದಿರದಲ್ಲಿ ಗಿಡ ನಾಟಿ

New Project (2)
Published on

ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ ಮತ್ತು ಕಜೆ ಶ್ರೀರಾಮ ಭಜನಾ ಮಂದಿರದ ಸಹಯೋಗದಲ್ಲಿ ವಿಶ್ವ ಪರಿಸರ ದಿನವನ್ನು ಕಜೆ ಶ್ರೀರಾಮ ಭಜನಾ ಮಂದಿರ ವಠಾರದಲ್ಲಿ ಬಂಟ್ವಾಳ ವಲಯ ಅರಣ್ಯಾಧಿಕಾರಿಗಳು ಹಾಗೂ ಜೂನ್ ತಿಂಗಳ ಹುಟ್ಟು ಹಬ್ಬ ಆಚರಿಸುತ್ತಿರುವ ವಿದ್ಯಾರ್ಥಿಗಳು ಹಾಗೂ ಅವನಿ ವಿಜ್ಞಾನ ಸಂ ವತಿಯಿಂದ ಗಿಡಗಳನ್ನು ನೆಡುವ ಮೂಲಕ ಆಚರಿಸಿದರು.

ಶಿಕ್ಷಕಿ ಅನ್ನಪೂರ್ಣಾ ಪರಿಸರ ದಿನದ ಮಹತ್ವ ತಿಳಿಸಿದರು. ವಲಯ ಅರಣ್ಯಾಧಿಕಾರಿ ಸುನೀಲ್ ಡಿಸೋಜ, ಗಸ್ತು ಅರಣ್ಯಾಧಿಕಾರಿ ರಾವೇಂದ್ರ, ಉಪವಲಯ ಅರಣ್ಯಾಧಿಕಾರಿ ರವಿರಾಜ್, ಕಜೆ ಶ್ರೀರಾಮ ಭಜನಾ ಮಂದಿರ ಅಧ್ಯಕ್ಷ ಶಿವರಾಮ್ ರೈ ಮೇರಾವು, ಪ್ರಮುಖರಾದ ಗಿರಿಯಪ್ಪ ಗೌಡ ಪಂಜಾಲು, ಜಯಪ್ರಕಾಶ್ ರೈ, ಪುರುಷೋತ್ತಮ ಪೂಜಾರಿ ಪಡೀಲ್, ಶಂಕರ ನಾಯ್ಕ ನಿರ್ಬೈಲು, ಹರೀಶ್ ಕಜೆ, ಸತೀಶ್, ಪುಷ್ಪರಾಜ್, ರಮೇಶ್, ಗಣೇಶ್, ರಂಜನಿ, ಸುಮಿತ್ರಾ, ಶಶಿಕಲಾ, ಮುಖ್ಯ ಶಿಕ್ಷಕ ರವಿರಾಜ್ ಕಣಂತೂರು, ಸಹ ಮುಖ್ಯ ಶಿಕ್ಷಕ ಸುಮಂತ್ ಆಳ್ವ, ಶಿಕ್ಷಕರಾದ ಜ್ಯೋತಿಶ್ರೀ, ಬಾಲಕೃಷ್ಣ, ಗುಣಶ್ರೀ, ವಾಣಿಶ್ರೀ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net