

ಪುತ್ತೂರು: ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ನಿಯಮಿತ ವತಿಯಿಂದ ಬ್ಯಾಂಕ್ ಸಿಬ್ಬಂದಿಗೆ ತರಬೇತಿ ಕಾರ್ಯಾಗಾರ ತೆಂಕಿಲದಲ್ಲಿ ನಡೆಯಿತು.
ಮಂಗಳೂರು ಮಾಸ್ಟರ್ ಮೈಂಡ್ ಎಂಟರ್‌ಪ್ರೈಸಸ್ ಮುಖ್ಯಸ್ಥ ಶ್ರೀಶ ಕೆಎಂ. ಕಾರ್ಯಾಗಾರ ನಡೆಸಿದರು. ಬ್ಯಾಂಕ್ ಅಧ್ಯಕ್ಷ ಎಚ್.ಜಗನ್ನಾಥ ಸಾಲ್ಯಾನ್, ಉಪಾಧ್ಯಕ್ಷ ಮನೋರಂಜನ್ ಕೆ.ಆರ್, ನಿರ್ದೇಶಕರಾದ ದಯಾನಂದ ಆಳ್ವ ಕೆ, ಮೋಹನ್ ಕೆ.ಎಸ್., ಭಾಸ್ಕರ್ ಶೆಟ್ಟಿ, ದಿವಾಕರ ವಿ., ಸತೀಶ ಪಿ., ಪೂವಪ್ಪ ಎಸ್, ಶುಭಲಕ್ಷ್ಮಿ, ಜಯಂತಿ ಎಚ್. ರಾವ್, ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಽಕಾರಿ ಕೃಷ್ಣ ಮುರಳಿ ಶ್ಯಾಮ್ ಕೆ., ಸಿಬ್ಬಂದಿ ಭಾಗವಹಿಸಿದರು.