VIDEO| ವಿಮಾನ ಲ್ಯಾಂಡ್​ ಆಗುವ ಪ್ರಯತ್ನದಲ್ಲಿದ್ದಾಗ ಒಟ್ಟಿಗೆ ಬಡಿಯಿತು 3 ಸಿಡಿಲು: ಮುಂದಾಗಿದ್ದು ಅಚ್ಚರಿ...!

Flight
Published on

ಲಂಡನ್​: ಇಲ್ಲಿನ ಹೀಥ್ರೂ ವಿಮಾನ ನಿಲ್ದಾಣದಲ್ಲಿ ವಿಮಾನವೊಂದು ಲ್ಯಾಂಡ್​ ಆಗುವ ಮುಂಚೆಯೇ ಮೂರು ಭೀಕರ ಸಿಡಿಲಿನಿಂದ ಪಾರಾಗಿರುವ ದೃಶ್ಯವೊಂದು ಕ್ಯಾಮೆರಾ ಕಣ್ಣಲ್ಲಿ ಕಳೆದ ವೀಕೆಂಡ್​ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ವಿಡಿಯೋವನ್ನು ಕೇಂದ್ರ ಲಂಡನ್​ನಲ್ಲಿ ಸೆರೆಹಿಡಿಯಲಾಗಿದೆ. ಬಿರುಸಿನ ಹವಾಮಾನ ಹಿನ್ನೆಲೆಯಲ್ಲಿ ವಿಮಾನವು ಲ್ಯಾಂಡ್​ ಆಗುವ ಯತ್ನದಲ್ಲಿದ್ದಾಗ ಅದೇ ಸಮಯದಲ್ಲಿ ಮೂರು ಭೀಕರ ಸಿಡಿಲು ಬಡಿದಿದೆ. ವಿಡಿಯೋ ನೋಡುವಾಗ ಸಿಡಿಲು ನೇರವಾಗಿ ವಿಮಾನಕ್ಕೇ ಬಡಿದಿದೆ ಎಂದು ಭಾಸವಾಗುತ್ತದೆ. ಆದರೂ ವಿಮಾನ ತನ್ನ ಪ್ರಯಾಣ ಮುಂದುವರಿಸುವುದರಿಂದ ನೋಡುಗರು ನಿಟ್ಟುಸಿರುವ ಬಿಡುವಂತಾಗುತ್ತದೆ. ಇದನ್ನೂ ಓದಿ: ಮೇ ತಿಂಗಳಲ್ಲಿ ಜಾಗತಿಕವಾಗಿ ಹೆಚ್ಚು ಡೌನ್​ಲೋಡ್​ ಆದ ಆ್ಯಪ್​ ಯಾವುದು? ಭಾರತವೇ ಮೊದಲು…!

7ನೇ ಮಹಡಿಯ ಮೇಲೆ ನಿಂತು ಅಪರೂಪದ ದೃಶ್ಯವನ್ನು ನೋಡಿದ ಪ್ರತ್ಯಕ್ಷದರ್ಶಿಯೊಬ್ಬರು, ಕ್ಯಾಮೆರಾ ಹೊರ ತೆಗೆಯಲು ಎಂತಹ ಕ್ಷಣವೆಂದು ಬಣ್ಣಿಸಿದ್ದಾರೆ. ಅಲ್ಲದೆ, ನಾನು ನೋಡುವಾಗ ವಿಮಾನಕ್ಕೆ ಸಿಡಿಲು ಬಡಿದೇಬಿಟ್ಟಿತು ಎಂದು ತಿಳಿದಿದ್ದೆ. ಸದ್ಯ ಯಾರೊಬ್ಬರಿಗೂ ತೊಂದರೆಯಾಗಿಲ್ಲ ಎಂದು ಭಾವಿಸಿದ್ದಾನೆ ಎಂದಿದ್ದಾರೆ.

ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದ್ದು, ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ವಿಮಾನಕ್ಕೆ ಸಿಡಿಲು ಬಡಿಯುವ ಘಟನೆಗಳು ಈವರೆಗೆ ಎರಡು ವರ್ಷಗಳಿಗೊಮ್ಮೆ ವರದಿಯಾಗಿದೆ. ಪ್ಯಾಸೆಂಜರ್​ ವಿಮಾನಗಳನ್ನು ವಿದ್ಯುತ್ ಗುರಾಣಿಯಿಂದ ನಿರ್ಮಿಸಲಾಗಿರುತ್ತದೆ. ಹೀಗಾಗಿ ಸಿಡಿಲು ಬಡಿಯುವುದು ತುಂಬಾ ವಿರಳ. ಸಿಡಿಲು ಬಡಿದಾಗ ಪ್ರಯಾಣಿಕರಿಗೆ ಅದರ ಅನುಭವವೂ ಅಹ ಆಗುವುದಿಲ್ಲ. ಬದಲಾಗಿ ಸಣ್ಣ ಲೈಟ್​ ಫ್ಲ್ಯಾಶ್​ ಆದಂತೆ ಆಗುತ್ತದೆ. (ಏಜೆನ್ಸೀಸ್​) ಇದನ್ನೂ ಓದಿ: ಸಾಯಿ ಪಲ್ಲವಿಯವರ ಫಸ್ಟ್​ ಸಿನಿಮಾ ಪ್ರೇಮಂ ಅಲ್ಲ: ಮೊದಲ ಚಿತ್ರದಲ್ಲೇ ಆಗಿತ್ತಂತೆ ಕೆಟ್ಟ ಅನುಭವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net