ಮೇ ತಿಂಗಳಲ್ಲಿ ಜಾಗತಿಕವಾಗಿ ಹೆಚ್ಚು ಡೌನ್​ಲೋಡ್​ ಆದ ಆ್ಯಪ್​ ಯಾವುದು? ಭಾರತವೇ ಮೊದಲು...!

APP
Published on

ನವದೆಹಲಿ: ಲಾಕ್​ಡೌನ್​ ಸಮಯದ ನಡುವೆ ಮೇ ತಿಂಗಳಲ್ಲಿ ಹೆಚ್ಚು ಡೌನ್​ಲೋಡ್​​ ಮಾಡಲ್ಪಟ್ಟ ನಾನ್​ ಗೇಮ್​ ಆ್ಯಪ್​​ಗಳಲ್ಲಿ ಟಿಕ್​ಟಾಕ್​ ಮೊದಲನೇ ಸ್ಥಾನದಲ್ಲಿರುವುದಾಗಿ ಅನಾಲಿಟಿಕ್ಸ್​ ಫ್ಲಾಟ್​ಫಾರ್ಮ್​ ಸೆನ್ಸಾರ್​ ಟವರ್​ ವರದಿಯಲ್ಲಿ ಬಹಿರಂಗವಾಗಿದೆ.

ಚೀನಾ ಮೂಲದ ವಿಡಿಯೋ ಶೇರಿಂಗ್​ ಆ್ಯಪ್​ ಟಿಕ್​ಟಾಕ್ ಮೇ ತಿಂಗಳಲ್ಲಿ​ ಬರೋಬ್ಬರಿ 112 ಮಿಲಿಯನ್ ಬಾರಿ ಡೌನ್​ಲೋಡ್​ ಆಗಿದೆ. ಇದರಲ್ಲಿ ಐದನೇ ಒಂದು ಭಾಗ ಭಾರತದಲ್ಲೇ ಡೌನ್​ಲೋಡ್​ ಆಗಿದೆ. ಈ ಮೂಲಕ ಟಿಕ್​ಟಾಕ್​ ಆ್ಯಪ್​ಗೆ ಭಾರತ ಬಹುದೊಡ್ಡ ಮಾರುಕಟ್ಟೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಎರಡನೇ ಸ್ಥಾನದಲ್ಲಿ ಅಮೆರಿಕ ಇದೆ. ಇಲ್ಲಿ ಶೇ 9 ರಷ್ಟು ಡೌನ್​ಲೋಡ್​ ಆಗಿವೆ. ಮೇ 2019ಕ್ಕಿಂತ 2020ರ ಮೇನಲ್ಲಿ ಅತ್ಯಧಿಕ ಡೌನ್​ಲೋಡ್​ ಆಗಿವೆ.  ​ಇದನ್ನೂ ಓದಿ: ಸಾಯಿ ಪಲ್ಲವಿಯವರ ಫಸ್ಟ್​ ಸಿನಿಮಾ ಪ್ರೇಮಂ ಅಲ್ಲ: ಮೊದಲ ಚಿತ್ರದಲ್ಲೇ ಆಗಿತ್ತಂತೆ ಕೆಟ್ಟ ಅನುಭವ

ಇನ್ನು ಗೂಗಲ್​ ಪ್ಲೇ ಸ್ಟೋರ್​ನಲ್ಲಿ ಫೇಸ್​ಬುಕ್​, ವಾಟ್ಸ್​ಆ್ಯಪ್​ ಹಾಗೂ ನೂತನ ವಿಡಿಯೋ ಕಾನ್ಫರೆನ್ಸ್​ ಆ್ಯಪ್​ ಜೂಮ್​ ಹಿಂದಿಕ್ಕಿ ಟಿಕ್​ಟಾಕ್ ಟಾಪ್​ನಲ್ಲಿದೆ.​ ಆ್ಯಪಲ್​ ಆ್ಯಪ್​ ಸ್ಟೋರ್​ನಲ್ಲಿ ಟಿಕ್​ಟಾಕ್​ಗಿಂತ ಜೂಮ್​ ಮೊದಲ ಸ್ಥಾನದಲ್ಲಿದ್ದು, ಯೂಟ್ಯೂಬ್​ ಎರಡನೇ ಸ್ಥಾನದಲ್ಲಿದೆ.

ಏಪ್ರಿಲ್​ಗೆ ಹೋಲಿಸಿದರೆ ಮೇ ತಿಂಗಳಲ್ಲಿ ಟಿಕ್​ಟಾಕ್​ ಹೆಚ್ಚು ಡೌನ್​ಲೋಡ್​ ಆಗಿದೆ. ಏಪ್ರಿಲ್​ನಲ್ಲಿ ಜಾಗತಿಕವಾಗಿ 107 ಮಿಲಿಯನ್​ ಆಗಿತ್ತು. ಮೇನಲ್ಲಿ 112 ಮಿಲಿಯನ್​ ಡೌನ್​ಲೋಡ್​ ಆಗಿದೆ. ಇಲ್ಲೂ ಸಹ ಭಾರತವೇ ಮುಂದಿದೆ.

ಅಂದಹಾಗೆ ಟಿಕ್​ಟಾಕ್​ ಅನ್ನು ಚೀನಾ ಅಂತರ್ಜಾಲ ತಂತ್ರಜ್ಞಾನ ಕಂಪನಿ ಬೈಟೆಡ್ಯಾನ್ಸ್​ ಅಭಿವೃದ್ಧಿಪಡಿಸಿದೆ. ಟಿಕ್​ಟಾಕ್​ಗೆ ಪ್ಲೇ ಸ್ಟೋರ್​ನಲ್ಲಿ 4.4 ರೇಟಿಂಗ್​ ನೀಡಲಾಗಿದೆ. ಆ್ಯಪ್​ ಸ್ಟೋರ್​ನಲ್ಲಿ 3.4 ರೇಟಿಂಗ್​ ಕೊಡಲಾಗಿದ್ದು, ಜೂನ್​ 8ರವರೆಗೆ 21 ಮಿಲಿಯನ್ಸ್​ ವಿಮರ್ಶೆಗಳು ಹರಿದುಬಂದಿವೆ. ಇದನ್ನೂ ಓದಿ: ನಟ ಸುಶಾಂತ್ ಸಿಂಗ್ ಮಾಜಿ ಮ್ಯಾನೇಜರ್​ 14ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಶರಣು

ಜಾಗತಿಕವಾಗಿ ಬಿಕ್ಕಟ್ಟು ಸೃಷ್ಟಿಸಿರುವ ಕರೊನಾ ವೈರಸ್​ ಹುಟ್ಟು ಚೀನಾದಲ್ಲಿ ಆಗಿರುವುದರಿಂದ ಚೀನಾ ವಿರುದ್ಧ ಅನೇಕ ರಾಷ್ಟ್ರಗಳು ಆಕ್ರೋಶ ಹೊರಹಾಕಿವೆ. ಭಾರತವು ಸಹ ಚೀನಾ ನರಿಬುದ್ಧಿಯ ಬಗ್ಗೆ ಆಗಾಗಾ ಟೀಕಾ ಪ್ರಹಾರ ನಡೆಸುತ್ತಿದ್ದು, ಚೀನಾ ನಿರ್ಮಿತ ಟಿಕ್​ಟಾಕ್​ ಆ್ಯಪ್​ ಬಳಸದಂತೆ ಹಲವು ಅಭಿಯಾನಗಳು ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net