ಈ ಒಂದು ವಸ್ತುವನ್ನು ನಿಮ್ಮ ಮನೆಯ ಬಾಗಿಲಲ್ಲಿ ಇರಿಸಿದ್ರೆ ಸಾಕು ಹಣದ ಸಮಸ್ಯೆಯೇ ಬರುವುದಿಲ್ಲ! Money Problem

Money Problem
Published on

Money Problem : ಮನೆಯಲ್ಲಿ ಸಂಪತ್ತು ಮತ್ತು ಹಣದ ಹರಿವನ್ನು ಹೆಚ್ಚಿಸಬೇಕೆಂಬುದು ಅನೇಕರ ಕನಸಾಗಿದೆ. ಅದಕ್ಕೆ ಶ್ರಮವೊಂದಿದ್ದರೆ ಸಾಲದು ಅದೃಷ್ಟವೂ ಬೇಕು. ಕೆಲ ವಾಸ್ತು ವಿಧಾನಗಳನ್ನು ಅನುಸರಿಸಿದರೆ ಮಾತ್ರ ಲಕ್ಷ್ಮೀ ದೇವಿ ಮನೆಗಳಲ್ಲಿ ನೆಲೆಸುತ್ತಾಳಂತೆ. ಈ ಒಂದು ವಸ್ತುವನ್ನು ಮನೆ ಬಾಗಿಲಲ್ಲಿ ಇಟ್ಟರೆ ಧನ ವೃದ್ಧಿಯಾಗುತ್ತದೆ ಎಂದು ವಾಸ್ತುಶಾಸ್ತ್ರದಲ್ಲಿ ಹೇಳಲಾಗಿದೆ.

ತುಳಸಿ ಗಿಡವನ್ನು ಮನೆಯ ಬಾಗಿಲಲ್ಲಿ ಇಟ್ಟು ಪೂಜಿಸುವುದರಿಂದ ಮನೆಯಲ್ಲಿ ಸುಖ, ಸಮೃದ್ಧಿ ಮತ್ತು ಆರ್ಥಿಕ ಸಂಪತ್ತು ಹೆಚ್ಚುತ್ತದೆ ಎಂದು ವಾಸ್ತುಶಾಸ್ತ್ರದಲ್ಲಿ ಹೇಳಲಾಗಿದೆ. ಏಕೆಂದರೆ, ತುಳಸಿ ಹಿಡಿದವರ ಮನೆಯಲ್ಲಿ ಹಣಕಾಸಿನ ಮುಗ್ಗಟ್ಟು ಇರುವುದಿಲ್ಲ ಎಂದು ಹೇಳಲಾಗಿದೆ.

ಹಿಂದು ಧರ್ಮದಲ್ಲಿ ತುಳಸಿಯನ್ನು ಲಕ್ಷ್ಮೀ ದೇವತೆ ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ, ಲಕ್ಷ್ಮಿ ದೇವಿಯು ತುಳಸಿಯಲ್ಲಿ ನೆಲೆಸುತ್ತಾಳೆ ಎಂದು ಶಾಸ್ತ್ರಗಳಲ್ಲಿ ನಂಬಲಾಗಿದೆ. ಹೀಗಾಗಿ ತುಳಸಿಯನ್ನು ಪೂಜಿಸುವುದರಿಂದ ಮನೆಯಲ್ಲಿ ಶಾಂತಿ ನೆಲೆಸುತ್ತದೆ ಮತ್ತು ಎಲ್ಲ ಆಪತ್ತುಗಳಿಂದ ಮುಕ್ತಿ ಪಡೆಯಬಹುದು ಎಂದು ಪ್ರಾಚೀನ ಕಾಲದಿಂದಲೂ ಹೇಳಿಕೊಂಡು ಬರಲಾಗಿದೆ.

ತುಳಸಿ ಗಿಡವನ್ನು ಕಾಪಾಡಿಕೊಳ್ಳಲು ಸಾಧ್ಯವಾಗದವರಿಗೆ ಮತ್ತೊಂದು ಆಯ್ಕೆ ಇದೆ. ಅದೇನೆಂದರೆ, ತುಳಸಿ ಬೇರು, ಅರಗು ಹಾಗೂ ಅಕ್ಕಿಯನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ಮನೆಯ ಬಾಗಿಲಿಗೆ ನೇತು ಹಾಕಬೇಕು. ಈ ರೀತಿ ಮಾಡುವುದರಿಂದ ಮನೆಯಲ್ಲಿನ ನಕಾರಾತ್ಮಕ ಶಕ್ತಿಗಳು ದೂರವಾಗಿ, ಮನೆಯಲ್ಲಿ ಜಗಳಗಳು ಕಡಿಮೆಯಾಗಿ ಶಾಂತಿ ನೆಲೆಸುತ್ತದೆ. ಅಲ್ಲದೆ, ಮನೆಯಲ್ಲಿ ಯಾವುದೇ ಹಣಕಾಸಿನ ಸಮಸ್ಯೆ ಇರುವುದಿಲ್ಲ ಎಂದು ಹೇಳಲಾಗುತ್ತದೆ.

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು, ಪಂಚಾಂಗಗಳು, ನಂಬಿಕೆಗಳು ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ ವಿಜಯವಾಣಿ ವೆಬ್​ಸೈಟ್​ ಜವಾಬ್ದಾರರಾಗಿರುವುದಿಲ್ಲ. ಹಾಗೆಯೇ ಮೇಲಿನ ನಿಯಮಗಳು ಸಾಂಪ್ರದಾಯಿಕ ಚಿಂತನೆಯನ್ನು ಆಧರಿಸಿವೆ ಹೊರತು ವಿಜ್ಞಾನದಿಂದ ಬೆಂಬಲಿತವಾಗಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net