ಪುರಾತನ ಪೇಂಟಿಂಗ್​ನಲ್ಲಿ ಪಿಜ್ಜಾ ಪತ್ತೆ?!

pizza
Published on

ನವದೆಹಲಿ: ಎಲ್ಲರ ನೆಚ್ಚಿನ ಪಿಜ್ಜಾ ಮೂಲ ಯಾವುದು ಎಂದು ಕೇಳಿದರೆ ಕೆಲವರು ಇಟಾಲಿಯನ್ ಎನ್ನುತ್ತಾರೆ. ಆದರೆ ಅದಕ್ಕೂ ಮೊದಲು ಎಲ್ಲಿಂದ ಬಂದದ್ದು ಅಥವಾ ಅದರ ಹಿಂದಿನ ಕಥೆ ಏನಾಗಿರಬಹುದು ಎಂದು ನೀವು ಒಮ್ಮೆಯಾದರೂ ಯೋಚಿಸಿದ್ದೀರಾ? ನಾವೆಲ್ಲರೂ ನಮ್ಮ ಅತ್ಯಂತ ಪ್ರಿಯವಾದ ಪ್ರತಿ ಬಾರಿಯೂ ತಿಂದು ಆನಂದಿಸಲು ಇಷ್ಟಪಡುತ್ತೇವೆ.

ಆದರೆ ಈ ಆಹಾರಗಳ ಇತಿಹಾಸ ಏನು? ಅವು ಹೇಗೆ ಅಸ್ತಿತ್ವಕ್ಕೆ ಬಂದವು? ಎಂದೆಲ್ಲ ಪ್ರಶ್ನಿಸಿದರೆ ನಮ್ಮಲ್ಲಿ ಬಹುತೇಕರಿಗೆ ಅದರ ಬಗ್ಗೆ ಸುಳಿವಿಲ್ಲ. ಈಗ, ರೋಮ್‌ನ ಪೊಂಪೆಯ ಅವಶೇಷಗಳಲ್ಲಿ ಪತ್ತೆಯಾದ ಪ್ರಾಚೀನ ಆಹಾರ ವರ್ಣಚಿತ್ರವು ಮೊದಲ ಪಿಜ್ಜಾ ಹೇಗೆ ಅಸ್ತಿತ್ವಕ್ಕೆ ಬಂದಿರಬಹುದು ಎಂಬುದರ ಕುರಿತು ಸುಳಿವನ್ನು ನೀಡಿದೆ. ಪೊಂಪೈನಲ್ಲಿನ ಮನೆಯ ಗೋಡೆಯ ಮೇಲೆ ಒಂದು ವರ್ಣಚಿತ್ರ ಕಂಡುಬಂದಿದೆ. ಇದು ಪಿಜ್ಜಾದ ಹಿಂದಿನ ರೂಪ ಹೇಗಿದ್ದಿರಬಹುದು ಎಂಬುದನ್ನು ಚಿತ್ರಿಸುತ್ತಿದೆ.

ವಿಡಿಯೋ ಕೃಪೆ: ರಾಯಿಟರ್ಸ್ 

ಇಟಲಿಯಲ್ಲಿರುವ ನೇಪಲ್ಸ್ ಎಂಬ ಸ್ಥಳವನ್ನು ಪಿಜ್ಜಾದ ಮೂಲ ಸ್ಥಾನ ಎಂದು ನಂಬಲಾಗಿದೆ. ಪುರಾತನ ಪೊಂಪೇ ನಗರದ ಅವಶೇಷಗಳು ನೇಪಲ್ಸ್​ನಿಂದ ಕೇವಲ 23 ಕಿ.ಮೀ ದೂರದಲ್ಲಿವೆ.

ಸುಮಾರು 2,000 ವರ್ಷಗಳ ಹಿಂದಿನ ವರ್ಣಚಿತ್ರದಲ್ಲಿ, ನಾವು ಫ್ಲಾಟ್‌ಬ್ರೆಡ್‌ನ ಮೇಲೆ ಹಣ್ಣುಗಳು, ಬೀಜಗಳು ಇದ್ದು ಪಕ್ಕದಲ್ಲಿ ವೈನ್‌ನ ಗೊಬ್ಲೆಟ್‌ ಇದ್ದಂತೆ ತೋರುತ್ತದೆ. ಇದು ಪಿಜ್ಜಾದ ಮೂಲ ಆವೃತ್ತಿ ಎಂದು ಹೇಳಬಹುದು. ಫ್ಲಾಟ್​ಬ್ರೆಡ್​ನಲ್ಲಿ ಟೊಮ್ಯಾಟೊ ಅಥವಾ ಮೊಝ್ಝಾರೆಲ್ಲಾ ಚೀಸ್ ಇರಲಿಲ್ಲ. ಅದು ನಂತರ ಬಂದಿದೆ. ಆದಾಗ್ಯೂ, ಈ ಪಿಜ್ಜಾ ಮೇಲೆ ಮಸಾಲೆಗಳು ಮತ್ತು ಪೆಸ್ಟೊ ಸಾಸ್‌ ಇರುವಂತೆ ತೋರುತ್ತಿದೆ ಎಂದು ವರದಿಗಳು ಸೂಚಿಸಿವೆ. ಪೊಂಪೈನಲ್ಲಿ ಕಂಡುಬರುವ ಈ ವರ್ಣಚಿತ್ರವು ಆಧುನಿಕ ಪಿಜ್ಜಾದ ದೂರದ ಸಂಬಂಧಿಯಾಗಿರಬಹುದು ಎಂದು ಇಟಾಲಿಯನ್ ಸಂಸ್ಕೃತಿ ಸಚಿವಾಲಯ ಮಂಗಳವಾರ ಹೇಳಿದೆ, ರಾಯಿಟರ್ಸ್ ವರದಿ ಹೇಳಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net