

ಹುಬ್ಬಳ್ಳಿ: ಅವಳಿ ನಗರಗಳು ಎಂದೇ ಪ್ರಸಿದ್ಧವಾಗಿರುವ ಹುಬ್ಬಳ್ಳಿ ಧಾರವಾಡಕ್ಕೆ ಪ್ರಭಾರಿ ಕಮಿಷನರ್ ಆಗಿ ಸಂತೋಷ್ ಬಾಬು ನೇಮಕವಾಗಿದ್ದಾರೆ.
ಕಳೆದ ಎಂಟು ದಿನಗಳಿಂದ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಹುದ್ದೆ ತೆರವಾಗಿದ್ದು, ಕಡೆಗೂ ನೂತನ ಕಮಿಷನರ್ ನೇಮಕವಾಗಿದ್ದಾರೆ. ಈ ಹುದ್ದೆಗೆ 2011 ರ ಬ್ಯಾಚ್ನ ಐಪಿಎಸ್ ಅಧಿಕಾರಿ ಸಂತೋಷ್ ಬಾಬು ಪ್ರಭಾರಿಯಾಗಿ ನೇಮಕವಾಗಿದ್ದಾರೆ.
ರಮಣ್ ಗುಪ್ತ ಅವರು ವರ್ಗಾವಣೆ ಆದ ನಂತರ ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸ್ ಕಮಿಷನರ್ ಸ್ಥಾನ ತೆರವಾಗಿತ್ತು. ಸ್ಥಾನ ತೆರವಾಗಿ ಎಂಟು ದಿನಗಳು ಕಳೆದರೂ ರಾಜ್ಯ ಸರ್ಕಾರ ಯಾವೊಬ್ಬ ಅಧಿಕಾರಿಯನ್ನು ಇಲ್ಲಿಗೆ ನಿಯೋಜನೆ ಮಾಡಿರಲಿಲ್ಲ. ಹೀಗಾಗಿ ಕಾನೂನು ಸುವ್ಯವಸ್ಥೆ ಹದಿಗೆಡುವ ಮುನ್ನವೇ ಇದೀಗ ಎಚ್ಚೆತ್ತಕೊಂಡ ಪೊಲೀಸ್ ಇಲಾಖೆ, ಸಂತೋಷ್ ಬಾಬು ಅವರನ್ನು ಪ್ರಭಾರಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ.