ಮಸಾಜ್ ಸ್ಪಾಗಳಲ್ಲಿ ವೇಶ್ಯಾವಾಟಿಕೆ, ಸಿಸಿಬಿ ಬಲೆಗೆ ಸಿಕ್ಕಿಬಿದ್ಳು 'ಪಿಂಪ್'

pimp areest
Published on

ಬೆಂಗಳೂರು: ನಗರದ ವಿವಿಧೆಡೆ ಮಸಾಜ್ ಸ್ಪಾಗಳನ್ನ ತೆರೆದು ವೇಶ್ಯಾವಾಟಿಕೆ ನಡೆಸುತ್ತಿದ್ದ ಮಹಿಳೆಯನ್ನು ಸಿಸಿಬಿ ಪೊಲೀಸರು ಇದೇ ಮೊದಲ ಬಾರಿಗೆ ಕರ್ನಾಟಕ ಅಕ್ರಮ ಕಳ್ಳಸಾಗಣೆ ತಡೆಗಟ್ಟುವಿಕೆ ಕಾಯ್ದೆಯಡಿ (ಕೆಪಿಐಟಿ) ಯಲ್ಲಿ ಬಂಧಿಸಿದ್ದಾರೆ.

ಸ್ವಾತಿ ಬಂಧಿತ ಆರೋಪಿ. ಈಕೆಯನ್ನು ಹಲವು ಬಾರಿ ಬಂಧಿಸಲಾಗಿತ್ತಾದರೂ ಜಾಮೀನು ಪಡೆದು ನ್ಯಾಯಾಲಯಕ್ಕೆ ಹಾಜರಾಗದೆ ಮತ್ತೆ ವೇಶ್ಯಾವಟಿಕೆ ಕೆಲಸದಲ್ಲೇ ತೊಡಗಿಕೊಂಡಿದ್ದಳು. ಅಷ್ಟೇ ಅಲ್ಲದೆ ವೇಶ್ಯಾವಾಟಿಕೆ ದಂಧೆಗೆ ಯುವತಿಯರನ್ನ ಅಕ್ರಮ ಕಳ್ಳ ಸಾಗಾಣಿಕೆ ಮಾಡಿಕೊಳ್ಳುತ್ತಿದ್ದಳು.

ಆರೋಪಿ ಸ್ವಾತಿಯನ್ನು ಕೆಪಿಐಟಿ ಕಾಯ್ದೆಯಡಿ(Karnataka prevention of illegal trafficking act) ಬಂಧಿಸಲಾಗಿದ್ದು, ಈ ಕಾಯ್ದೆ ಅನ್ವಯ ಆರೋಪಿಗೆ ಒಂದು ವರ್ಷ ಯಾವುದೇ ರೀತಿಯಲ್ಲೂ ಜಾಮೀನು ಸಿಗಲ್ಲ ಎಂದು ಹೇಳಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net