ಬರ್ಲಿನ್(ಜರ್ಮನಿ): ಹಂದಿಯೊಂದನ್ನು ವ್ಯಕ್ತಿಯೊಬ್ಬ ಬೆತ್ತಲೆಯಾಗಿ ಬೆನ್ನಟ್ಟುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಬರ್ಲಿನ್ನ ಗ್ರನ್ವೆಲ್ ಫಾರೆಸ್ಟ್ನ ಬಾತಿಂಗ್ ಸ್ಪಾಟ್ ಆಗಿರುವ ಟ್ಯೂಫೆಲ್ಸೀ ಲೇಕ್ನಲ್ಲಿ ಈ ಘಟನೆ ನಡೆದಿರುವುದು. ಬೆತ್ತಲೆ ವ್ಯಕ್ತಿ ಹಂದಿಯನ್ನು ಅಟ್ಟಿಸಿಕೊಂಡು ಹೋಗ್ತಾ ಇರೋದನ್ನು ನೋಡಿ ಜನ ದಂಗಾಗಿ ನಿಂತಿರುವ ದೃಶ್ಯ ಮತ್ತು ಹಂದಿಯ ಹಿಂದೆಯೇ ಎರಡು ಹಂದಿಮರಿಗಳೂ ಓಡ್ತಿರೋ ದೃಶ್ಯ ಫೋಟೋದಲ್ಲಿವೆ.
ಅಡೆಲೆ ಲಾಂಡೌರ್ ಎಂಬ ಮಹಿಳೆ ಈ ಫೋಟೋಗಳನ್ನು ತೆಗೆದು ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದಾರೆ. ಅದಕ್ಕೆ ಅವರು ಕೊಟ್ಟ ವಿವರಣೆ ಹೀಗಿದೆ- ನೇಚರ್ ಸ್ಟ್ರೈಕ್ಸ್ ಬ್ಯಾಕ್! ಬಿಡಾಡಿ ಹಂದಿ ಟ್ಯೂಫೆಲ್ಸೀಯಲ್ಲಿ ಬೇಟೆಗಿಳಿದುದು ಹೀಗೆ.. ಲೇಕ್ನಲ್ಲಿ ಈಜಾಡುತ್ತಿದ್ದ ವ್ಯಕ್ತಿಯ ಬ್ಯಾಗ್ನಿಂದ ಪಿಜ್ಜಾ ತಿಂದು ತೇಗಿದ ಬಿಡಾಡಿ ಹಂದಿ ಮತ್ತು ಅದರ ಮರಿಗಳು ಇನ್ನೂ ಹೆಚ್ಚಿನ ತಿನಿಸಿಗಾಗಿ ಹುಡುಕಾಡುತ್ತಿದ್ದವು. ಆಗ ಅವುಗಳ ಕಣ್ಣಿಗೆ ಹಳದಿ ಬಣ್ಣದ ಬ್ಯಾಗ್ ಬಿದ್ದಿದೆ. ಸೀದಾ ಮುನ್ನುಗ್ಗಿ ಹಳದಿ ಬಣ್ಣದ ಬ್ಯಾಗ್ ಕಚ್ಚಿಕೊಂಡು ಓಡತೊಡಗಿತು. ಲೇಕ್ನಲ್ಲಿ ಈಜಾಡುತ್ತಿದ್ದ ಈ ವ್ಯಕ್ತಿ ಸೀದಾ ಹುಟ್ಟುಡುಗೆಯಲ್ಲೇ ಓಡತೊಡಗಿದ.

ಜನ ದಂಗಾಗಿ ಹೋದ್ರು.. ಹಂದಿ ಕಚ್ಚಿಕೊಂಡು ಓಡ್ತಾ ಇರುವ ಆ ಹಳದಿ ಬಣ್ಣದ ಬ್ಯಾಗ್ನಲ್ಲಿ ಅಂಥಾದ್ದೇನಿಯಪ್ಪಾ ಎಂಬ ಕಮೆಂಟ್ಗಳು ಕೇಳಿದ್ವು. ನಾನು ಈ ಕ್ಷಣಗಳನ್ನು ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದೆ. ಬಳಿಕ ನಾನು ಈ ಫೋಟೋಗಳನ್ನು ಆ ಮನುಷ್ಯನಿಗೆ ಆಮೇಲೆ ತೋರಿಸಿದೆ. ಆತ ಜೋರಾಗಿ ನಕ್ಕು... ಅದನ್ನು ಸಾರ್ವಜನಿಕವಾಗಿ ಅಪ್ಲೋಡ್ ಮಾಡುವುದಕ್ಕೆ ಅನುಮತಿ ನೀಡಿದ. ಅಂದ ಹಾಗೆ, ಹಂದಿ ಕಚ್ಚಿಕೊಂಡು ಹೋದ ಹಳದಿ ಬಣ್ಣದ ಬ್ಯಾಗ್ನಲ್ಲಿ ಆ ಮನುಷ್ಯನ ಲ್ಯಾಪ್ಟಾಪ್ ಇದೆ. ಅದು ಆತನ ಪಾಲಿಗೆ ಸರ್ವಸ್ವ. ಹೀಗಾಗಿ ಬೆತ್ತಲೆಯಾಗಿ ಓಡಿದ್ದ..
ಜರ್ಮನಿಯಲ್ಲಿ ಅನೇಕ ಬೀಚ್ ಮತ್ತು ಸರೋವರಗಳಲ್ಲಿ ಜನ ಹುಟ್ಟುಡುಗೆಯಲ್ಲಿ ಈಜಾಡೋದಕ್ಕೆ ಅಥವಾ ಅದರ ತಟದಲ್ಲಿ ಸೂರ್ಯಸ್ನಾನ ತೆಗೆದುಕೊಳ್ಳುವುದಕ್ಕೆ ಅವಕಾಶವಿದೆ. ಇದು ಅಲ್ಲಿನ ಫ್ರೀ ಬಾಡಿ ಕಲ್ಚರ್ನ ಒಂದು ಭಾಗವಷ್ಟೆ. (ಏಜೆನ್ಸೀಸ್)