More

    ರಫೆಲ್​ ಸ್ಕ್ವಾಡ್ರನ್​ ​ನಲ್ಲಿದ್ದವರು ಏರ್​ಇಂಡಿಯಾ ಪೈಲಟ್​ ಕ್ಯಾಪ್ಟನ್​ ದೀಪಕ್ ಸಾಠೆ

    ನವದೆಹಲಿ: ಕೇರಳದ ಕರಿಪ್ಪೂರ್​ ವಿಮಾನನಿಲ್ದಾಣದಲ್ಲಿ ಸ್ಕಿಡ್ ಆಗಿ ದುರಂತಕ್ಕೀಡಾದ ವಿಮಾನದ ಪೈಲಟ್ ಕ್ಯಾಪ್ಟನ್ ದೀಪಕ್ ಸಾಠೆ ಅವರು ಭಾರತೀಯ ವಾಯುಪಡೆಯ ರಫೆಲ್ ಸ್ಕ್ವಾಡ್ರನ್​ನಲ್ಲಿ ಕೆಲಸ ಮಾಡಿದ ಅನುಭವಿಯಾಗಿದ್ದರು. ಅವರು ರಫೆಲ್ ಸ್ಕ್ವಾಡ್ರನ್​ ನಂ.17ರ ಗೋಲ್ಡನ್ ಏರೋಸ್​ ಎಂಬ ರಫೆಲ್ ಫೈಟರ್ ಜೆಟ್​ನ ಪೈಲಟ್ ಆಗಿ ಸ್ವೋರ್ಡ್ ಆಫ್ ಹಾನರ್ ಪ್ರಶಸ್ತಿ ಪಡೆದವರಾಗಿದ್ದರು.

    ಸಾಠೆ ಅವರು ಪುಣೆಯ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯ 58ನೇ ಕೋರ್ಸ್​ ಬ್ಯಾಚಿನವರು. ಅವರು ಜ್ಯೂಲಿಯೆಟ್ ಸ್ಕ್ವಾಡ್ರನ್​ನಲ್ಲಿದ್ದರು. ಅವರು 1981ರ ಜೂನ್​ ತಿಂಗಳಲ್ಲಿ ಸ್ವೋರ್ಡ್​ ಆಫ್​ ಹಾನರ್​ನೊಂಧಿಗೆ ಏರ್​ಫೋರ್ಸ್ ಅಕಾಡೆಮಿಯಲ್ಲಿ ಉತ್ತೀರ್ಣರಾದವರು. ನಂತರ ಭಾರತೀಯ ವಾಯುಪಡೆಗೆ ಫೈಟರ್ ಪೈಲೆಟ್ ಆಗಿ ಸೇರ್ಪಡೆಗೊಂಡರು ಎಂಬುದನ್ನು ನಿವೃತ್ತ ಏರ್​ಮಾರ್ಷಲ್​ ಭೂಷಣ್ ಗೋಖಲೆ ನೆನಪಿಸಿಕೊಂಡಿದ್ದಾರೆ.
    ಫೈಟರ್ ಜೆಟ್ ಪೈಲಟ್ ಪರಿಣತರಷ್ಟೇ ಅಲ್ಲ ಸಾಠೆ, ಬೋಯಿಂಗ್ 737-800 ಏರ್​ಕ್ರಾಫ್ಟ್​ ಪೈಲಟ್ ಆಗಿಯೂ ಅನುಭವಿ. ಇದಕ್ಕೂ ಮುನ್ನ ಅವರು ಏರ್​ಬಸ್​ ಎ-310 ವಿಮಾನವನ್ನು ಚಲಾಯಿಸಿದ್ದರು.

    ಇದನ್ನೂ ಓದಿ: ಭಾರತದಲ್ಲಿ ಈ ಹಿಂದೆ ನಡೆದ ವಿಮಾನ ದುರಂತಗಳು

    ಕರಿಪ್ಪೂರ್​ನಲ್ಲಿ ಸ್ಕಿಡ್ ಆಗಿ ದುರಂತಕ್ಕೀಡಾದ ದುಬೈ-ಕಲ್ಲಿಕೋಟೆ ಏರ್​ಇಂಡಿಯಾ ಎಕ್ಸ್​ಪ್ರೆಸ್​ ವಿಮಾನದಲ್ಲಿ 191 ಪ್ರಯಾಣಿಕರಿದ್ದರು. ಈ ಪೈಕಿ ಇಬ್ಬರು ಪೈಲಟ್​ ಸೇರಿ 17 ಜನ ಮೃತಪಟ್ಟಿದ್ದಾರೆ. ಈ ದುರಂತ ನಿನ್ನೆ ರಾತ್ರಿ 7.41ಕ್ಕೆ ಸಂಭವಿಸಿದೆ. ವಿಸ್ತೃತ ತನಿಖೆಗೆ ನಾಗರಿಕ ವಿಮಾನ ಯಾನ ಸಚಿವಾಲಯ ಆದೇಶಿಸಿದೆ. (ಏಜೆನ್ಸೀಸ್)

    ಜೋಡಿ ದುರಂತ ಕೇರಳಕ್ಕೆ ಆಘಾತ: 2 ಹೋಳಾದ ವಿಮಾನ, ಭೂಕುಸಿತಕ್ಕೆ 13 ಮಂದಿ ಜೀವಂತ ಸಮಾಧಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts