More

    ಭಾರತದಲ್ಲಿ ಈ ಹಿಂದೆ ನಡೆದ ವಿಮಾನ ದುರಂತಗಳು

    ‘ದೇವರ ಸ್ವಂತನಾಡು’ ಕೇರಳ ಎರಡು ದುರಂತಕ್ಕೆ ಬೆಚ್ಚಿದೆ. ಇಡುಕ್ಕಿ ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತಕ್ಕೆ 13 ಜನ ಬಲಿಯಾಗಿ 80 ಜನ ನಾಪತ್ತೆಯಾದ ದುರ್ಘಟನೆ ಬೆನ್ನಲ್ಲೇ ಶುಕ್ರವಾರ ರಾತ್ರಿ ದುಬೈನಿಂದ ಆಗಮಿಸಿದ ಏರ್ ಇಂಡಿಯಾ ವಿಮಾನ ಕೋಯಿಕ್ಕೋಡಿನ ಕರಿಪ್ಪೂರ್ ವಿಮಾನ ನಿಲ್ದಾಣದ ರನ್​ವೇಯಲ್ಲಿ ಜಾರಿ ಕಮರಿಗೆ ಬಿದ್ದು ಎರಡು ಹೋಳಾಗಿದೆ. ಈ ದುರಂತದಲ್ಲಿ ಪೈಲಟ್ ಸೇರಿ 14 ಜನ ಮೃತಪಟ್ಟಿದ್ದು, 123ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡಿದ್ದಾರೆ.

    ಭಾರತದಲ್ಲಿ ಈ ಹಿಂದೆ ನಡೆದ ವಿಮಾನ ದುರಂತಗಳು ಹೀಗಿವೆ…

    # ಮಂಗಳೂರು ವಿಮಾನ ದುರಂತ. 22 ಮೇ, 2010: ದುಬೈನಿಂದ ಮಂಗಳೂರಿಗೆ ಆಗಮಿಸಿದ್ದ ಏರ್ ಇಂಡಿಯಾದ ಬೋಯಿಂಗ್ 737-800 ವಿಮಾನ ರನ್​ವೇಯಿಂದ ದೂರ ಸಾಗಿ ಕಣಿವೆಗೆ ಉರುಳಿ ಸಂಭವಿಸಿದ ಭೀಕರ ದುರ್ಘಟನೆಯಲ್ಲಿ 158 ಪ್ರಯಾಣಿಕರ ಪೈಕಿ 152 ಪ್ರಯಾಣಿಕರು ಮತ್ತು ಎಲ್ಲ ಆರು ಸಿಬ್ಬಂದಿ ಮೃತಪಟ್ಟಿದ್ದರು. ಮೃತರಲ್ಲಿ ಬಹುತೇಕ ಜನರು ಕರಾವಳಿ ಜಿಲ್ಲೆಗಳಿಗೆ ಸೇರಿದವರಾಗಿದ್ದರು. ಇದು ದೇಶದ ಮೂರನೇ ಅತಿ ದೊಡ್ಡ ವಿಮಾನ ದುರಂತವಾಗಿತ್ತು. ಏರ್ ಇಂಡಿಯಾ ಎಕ್ಸ್​ಪ್ರೆಸ್ ಒಳಗೊಂಡ ಮೊದಲ ಅವಘಡವಾಗಿತ್ತು.

    # 1988 ಅಕ್ಟೋಬರ್ 19: ಮುಂಬೈನಿಂದ ಅಹಮದಾಬಾದ್​ಗೆ ಪ್ರಯಾಣಿಸುತ್ತಿದ್ದ ಇಂಡಿಯನ್ ಏರ್​ಲೈನ್ಸ್ ವಿಮಾನ ಅಹಮದಾಬಾದ್ ನಿಲ್ದಾಣ ತಲುಪುವ ವೇಳೆ ನೆಲಕ್ಕಪ್ಪಳಿಸಿ ಅದರಲ್ಲಿದ್ದ 135 ಜನರ ಪೈಕಿ 133 ಮಂದಿ ಸಾವನ್ನಪ್ಪಿದ್ದರು. ಪ್ರತಿಕೂಲ ಹವಾಮಾನ ಅದಕ್ಕೆ ಕಾರಣ ಎನ್ನಲಾಗಿತ್ತು.

    # 1973 ಮೇ 31: ಚೆನ್ನೈನಿಂದ (ಆಗ ಮದ್ರಾಸ್) ದೆಹಲಿಗೆ ಪ್ರಯಾಣಿಸಿದ್ದ ಇಂಡಿಯನ್ ಏರ್​ಲೈನ್ಸ್ ವಿಮಾನ, ಪಾಲಂ ವಿಮಾನ ನಿಲ್ದಾಣ ತಲುಪುತ್ತಿದ್ದಂತೆ ನೆಲಕ್ಕಪ್ಪಳಿಸಿ 65 ಜನರ ಪೈಕಿ 48 ಮಂದಿ ಅಸು ನೀಗಿದ್ದರು. ಧೂಳು ಮತ್ತು ಭಾರಿ ಮಳೆಯಿಂದಾಗಿ ವಾತಾವರಣ ದುರಂತಕ್ಕೆ ಕಾರಣವಾಗಿತ್ತು. ನೆಲಕ್ಕಪ್ಪಳಿಸುತ್ತಲೇ ಬೆಂಕಿಯುಂಡೆಯಾದ ವಿಮಾನದಲ್ಲಿದ್ದ 48 ಜನರು ಮೃತಪಟ್ಟಿದ್ದರು.

    # 1978 ಜನವರಿ 1: ಹೊಸ ವರ್ಷದ ಸಂಭ್ರಮದ ನಡುವೆ ಮುಂಬೈನ ಬಾಂದ್ರಾ ಕರಾವಳಿಯಿಂದ ಮೂರು ಕಿಮೀ ದೂರದಲ್ಲಿ ಏರ್ ಇಂಡಿಯಾದ ವಿಮಾನ ಅರಬ್ಬಿ ಸಮುದ್ರಕ್ಕೆ ಬಿದ್ದು ಭೀಕರ ದುರಂತ. ಎಲ್ಲ 213 ಪ್ರಯಾಣಿಕರು ಹಾಗೂ ಸಿಬ್ಬಂದಿ ಜಲ ಸಮಾಧಿಯಾದರು.

    # 1962 ಜುಲೈ 7: ಮುಂಬೈ ಈಶಾನ್ಯದಲ್ಲಿ ಬೆಟ್ಟಕ್ಕೆ ಅಪ್ಪಳಿಸಿದ ಆಯಾ ವಿಮಾನ. 94 ಮಂದಿ ಸಾವು.

    # 1996 ನವೆಂಬರ್ 12: ಸೌದಿ ಅರೇಬಿಯಾ ಮತ್ತು ಕಜಕಿಸ್ತಾನದ ಎರಡು ವಿಮಾನಗಳು ರ್ಚಕಿ-ದಾದ್ರಿಯ ಆಗಸದಲ್ಲಿ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ಅವಘಡ. ಎರಡೂ ವಿಮಾನಗಳಲ್ಲಿದ್ದ ಎಲ್ಲ 349 ಜನರ ಸಾವು. ಇದು ಆಗಸದಲ್ಲಿ ನಡೆದ ವೈಮಾನಿಕ ದುರಂತಗಳ ಇತಿಹಾಸದಲ್ಲೇ ಅತ್ಯಂತ ಭೀಕರ ಎಂದು ದಾಖಲಾಗಿದೆ.

    # 2000 ಜುಲೈ 17: ಬಿಹಾರದ ಟಪನಾದ ವಸತಿ ಸಮುಚ್ಚಯದ ಮೇಲೆ ಬಿದ್ದ ಅಲಯನ್ಸ್ ಏರ್ ಫ್ಲೈಟ್. ಕೆಳಗಡೆಯಿದ್ದ ಐವರ ಸಹಿತ ಒಟ್ಟು 55 ಮಂದಿ ಸಾವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts