ಕಾಸರಗೋಡು: ದೇಶ ವಿಭಜನೆಯ ಸಮಯದಲ್ಲಿ ಆದ ದುರಂತ, ತ್ಯಾಗ, ಬಲಿದಾನದ ಸನ್ನಿವೇಶಗಳ ಕರಾಳ ಚಿತ್ರಣಗಳನ್ನು ಸ್ಮರಿಸುವ ನಿಟ್ಟಿನಲ್ಲಿ ಲೀಡ್ ಬ್ಯಾಂಕ್ ಕಾಸರಗೋಡು ವತಿಯಿಂದ ಆ.13ರಿಂದ 15ರವರೆಗೆ ಛಾಯಾಚಿತ್ರ ಪ್ರದರ್ಶನ ಆಯೋಜಿಸಲಾಗಿದೆ. ಕಾಸರಗೋಡು ಸಿಟಿ ಸೆಂಟರ್ ಕೆನರಾ ಬ್ಯಾಂಕ್ ವಠಾರದಲ್ಲಿ ನಡೆದ ಸಮಾರಂಭದಲ್ಲಿ ಬ್ಯಾಂಕ್‌ನ ಕಾಸರಗೋಡು ಪ್ರಾದೇಶಿಕ ಕಚೇರಿ ವ್ಯವಸ್ಥಾಪಕ ಅಂಶುಮಾನ್ ದೇ ಪ್ರದರ್ಶನ ಉದ್ಘಾಟಿಸಿದರು. ನಿವೃತ್ತ ಯೋಧ ಕೆ.ಎಂ.ವಾಸುದೇವನ್ ಅವರನ್ನು ಸನ್ಮಾನಿಸಲಾಯಿತು. ಕಾಸರಗೋಡು ಜಿಲ್ಲಾ ಲೀಡ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ತಿಪ್ಪೇಶ್ ಎಸ್., ಬ್ಯಾಂಕ್ ಸಿಬ್ಬಂದಿ, ಆರ್ಥಿಕ ಸಾಕ್ಷರತೆ ಕೇಂದ್ರ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.