

ಜೈಪುರ: ದೇಶಾದ್ಯಂತ ಪೆಟ್ರೋಲ್, ಡೀಸೆಲ್ ಬೆಲೆಯಂತೂ ಭಾರೀ ಏರಿಕೆ ಕಾಣುತ್ತಲೇ ಇದೆ. ಅದರಲ್ಲೂ ಬೆಲೆ ಏರಿಕೆ ಬಿಸಿ ರಾಜಸ್ಥಾನಕ್ಕೆ ತುಸು ಹೆಚ್ಚಾಗಿಯೇ ತಗುಲಿದ್ದು, ರಾಜ್ಯದಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 110 ರೂಪಾಯಿ ಹಾಗೂ ಡೀಸೆಲ್ ಬೆಲೆ ಲೀಟರ್ಗೆ 100 ರೂಪಾಯಿ ಗಡಿ ದಾಟಿದೆ.
ರಾಜಸ್ಥಾನದ ಗಂಗಾನಗರ ಜಿಲ್ಲೆಯಲ್ಲಿ ಭಾನುವಾರ ಪೆಟ್ರೋಲ್ ಬೆಲೆಯಲ್ಲಿ 36 ಪೈಸೆ ಹಾಗೂ ಡೀಸೆಲ್ ಬೆಲೆಯಲ್ಲಿ 27 ಪೈಸೆ ಏರಿಕೆ ಆಗಿದೆ. ಈ ಮೂಲಕ ಪ್ರೀಮಿಯಂ ಪೆಟ್ರೋಲ್ ಬೆಲೆ 112.54 ರೂಪಾಯಿ, ಸಾಮಾನ್ಯ ಪೆಟ್ರೋಲ್ ಬೆಲೆ 109.49 ರೂಪಾಯಿ ಹಾಗೂ ಡೀಸೆಲ್ ಬೆಲೆ ಲೀಟರ್ಗೆ 101.96 ರೂಪಾಯಿಯಷ್ಟಾಗಿದೆ. ಅದರ ಜತೆ ಹನುಮಾನ್ಗಢದಲ್ಲೂ ಇಂಧನ ಬೆಲೆ ಹೆಚ್ಚಾಗಿದೆ. ಅಲ್ಲಿ ಪ್ರೀಮಿಯಂ ಪೆಟ್ರೋಲ್ ಬೆಲೆ 112.11 ರೂಪಾಯಿ, ಸಾಮಾನ್ಯ ಪೆಟ್ರೋಲ್ ಬೆಲೆ 109.05 ರೂಪಾಯಿ ಹಾಗೂ ಡೀಸೆಲ್ ಬೆಲೆ 101.55 ರೂಪಾಯಿ ಆಗಿದೆ.
ರಾಜಸ್ಥಾನದ ಇಂಧನ ಬೆಲೆಯಿಂದಾಗಿ ಕಂಗೆಟ್ಟಿರುವ ರಾಜ್ಯದ ಗಡಿ ಭಾಗದ ಜನರು ಪಕ್ಕದ ಪಂಜಾಬ್, ಹರಿಯಾಣ ರಾಜ್ಯಕ್ಕೆ ತೆರಳಿ ಪೆಟ್ರೋಲ್, ಡೀಸೆಲ್ ತುಂಬಿಸಿಕೊಂಡು ಬರಲಾರಂಭಿಸಿದ್ದಾರೆ. ಮಧ್ಯಪ್ರದೇಶದಲ್ಲೂ ಡೀಸೆಲ್ ಬೆಲೆ 100ರ ಗಡಿ ದಾಟಿದೆ. (ಏಜೆನ್ಸೀಸ್)