More

    ಸಾರ್ವಕಾಲಿಕ ಎತ್ತರಕ್ಕೆ ಪೆಟ್ರೋಲ್ ದರ; ದೆಹಲಿಯಲ್ಲಿ 23 ಪೈಸೆ ಏರಿಕೆ ಪ್ರತಿ ಲೀಟರ್ ಬೆಲೆ 84.20 ರೂ.

    ನವದೆಹಲಿ: ಇಂಧನ ದರ ಸತತ ಎರಡನೇ ದಿನವೂ ಏರಿಕೆಯಾಗಿದ್ದು, ಪೆಟ್ರೋಲ್ ದರ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ. ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಗುರುವಾರ 23 ಪೈಸೆ ಏರಿಕೆಯಾಗುವ ಮೂಲಕ ಪ್ರತಿ ಲೀಟರ್ ದರ -ಠಿ;84.20 ಮುಟ್ಟಿದೆ. ಡೀಸೆಲ್ ದರ 26 ಪೈಸೆ ಏರಿಕೆಯಾಗಿದ್ದು, ಪ್ರತಿ ಲೀಟರ್ ಬೆಲೆ -ಠಿ; 74.38ಕ್ಕೆ ತಲುಪಿದೆ. ಮುಂಬೈನಲ್ಲಿ ಪೆಟ್ರೋಲ್ ದರ -ಠಿ; 90.83 ಮತ್ತು ಡೀಸೆಲ್ -ಠಿ; 81.07ಕ್ಕೆ ಏರಿದ್ದು, ದೇಶದಲ್ಲಿ ಗರಿಷ್ಠ ಮಟ್ಟದ ಬೆಲೆ ದಾಖಲಿಸಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಪ್ರತಿ ಬ್ಯಾರಲ್​ಗೆ 50.29 ಡಾಲರ್ ಇದ್ದು, ಒಪೆಕ್ ರಾಷ್ಟ್ರಗಳು ಕಳೆದ ಮೂರು ದಿನಗಳಿಂದ ಉತ್ಪಾದನೆಯನ್ನು ಹೆಚ್ಚಿಸದಿರಲು ನಿರ್ಣಯಿಸಿವೆ. ಕಚ್ಚಾತೈಲ ಮಾರುಕಟ್ಟೆಯಲ್ಲಿ ದರ ಪರಿಷ್ಕರಣೆಯ ಜತೆಗೆ ಭಾರತದಲ್ಲಿ ತೈಲದ ಮೇಲಿನ ವ್ಯಾಟ್, ಅಬಕಾರಿ, ಸೆಸ್ ಸೇರಿ ಅಂದಾಜು ಶೇ. 60 ತೆರಿಗೆ ಇರುವುದು ತೈಲ ಬೆಲೆಯನ್ನು ದುಬಾರಿಗೊಳಿಸಿದೆ. ಕಳೆದ ಡಿಸೆಂಬರ್ 7ರಂದು ಪರಿಷ್ಕರಣೆಯಾಗಿದ್ದ ದರ ಒಂದು ತಿಂಗಳು ಸ್ಥಿರವಾಗಿತ್ತು. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಬುಧವಾರ ಪೆಟ್ರೋಲ್ ಬೆಲೆ 26 ಪೈಸೆ ಮತ್ತು ಡೀಸೆಲ್ ದರ 25 ಪೈಸೆ ಏರಿಸಿದ್ದವು.

    ಹಿಂದಿನ ಗರಿಷ್ಠ ದರ 84 ರೂ.: ರಾಜಧಾನಿ ದೆಹಲಿಯಲ್ಲಿ 2018ರ ಅ. 4ರಂದು ಪೆಟ್ರೋಲ್ ದರ 84 ಮತ್ತು ಡೀಸೆಲ್ ದರ 75.45 ರೂಪಾಯಿಗೆ ಮುಟ್ಟಿತ್ತು. ಹಣದುಬ್ಬರ ಏರಿಕೆಯನ್ನು ತಡೆಯಲು ಕೇಂದ್ರ ಸರ್ಕಾರ ಉಭಯ ತೈಲಗಳ ಮೇಲಿನ ಅಬಕಾರಿ ಸುಂಕವನ್ನು 1.50 ರೂ.ಗೆ ತಗ್ಗಿಸಿತ್ತು. ತೈಲ ಕಂಪನಿಗಳು ಕೂಡ ಪ್ರತಿ ಲೀಟರ್​ಗೆ 1 ರೂ. ಕಡಿತ ಮಾಡಿದ್ದವು.

    ಅಬಕಾರಿ ಸುಂಕ ಏರಿಕೆ ಪರಿಣಾಮ: ಕರೊನಾ ಲಾಕ್​ಡೌನ್ ಕಾರಣ ವಾಹನಗಳ ಸಂಚಾರಕ್ಕೆ ನಿರ್ಬಂಧ ಉಂಟಾಗಿ ತೈಲ ಬೇಡಿಕೆ ಗಣನೀಯವಾಗಿ ಕುಸಿಯಿತು. ಆವಕ ಹೆಚ್ಚಳವಾಗಿ, ಫ್ಯೂಚರ್ ಮಾರಾಟವಂತೂ ನೆಲಕಚ್ಚಿತು. ಅಂತಾರಾಷ್ಟ್ರೀಯ ಕಚ್ಚಾ ತೈಲ ಮಾರುಕಟ್ಟೆಯಲ್ಲಿ ಬೆಲೆ ಅರ್ಧಕ್ಕೆ ಕುಸಿದು, ಏಪ್ರಿಲ್, ಮೇ ತಿಂಗಳಲ್ಲಿ ಪ್ರತಿ ಬ್ಯಾರೆಲ್ ದರ 20 ಡಾಲರ್​ಗಿಂತ ಕಡಿಮೆ ಆಯಿತು. ಈ ವೇಳೆ

    ಕೇಂದ್ರ ಸರ್ಕಾರ ಪ್ರತಿ ಲೀಟರ್ ಪೆಟ್ರೋಲ್​ಗೆ 13 ಮತ್ತು ಡೀಸೆಲ್​ಗೆ 16 ರೂ. ಅಬಕಾರಿ ಸುಂಕವನ್ನು ಹೆಚ್ಚಿಸಿತ್ತು. ಇದರಿಂದ ಏಪ್ರಿಲ್ ಮತ್ತು ನವೆಂಬರ್ ವೇಳೆಯಲ್ಲಿ ಸರ್ಕಾರಕ್ಕೆ 2 ಲಕ್ಷ ಕೋಟಿ ರೂ. ಹೆಚ್ಚುವರಿ ಆದಾಯ ಸಂಗ್ರಹವಾಯಿತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಇಳಿಕೆಯಾದರೂ ಅದರ ಪೂರ್ಣ ಲಾಭ ಗ್ರಾಹಕರಿಗೆ ದೊರೆಯಲಿಲ್ಲ.

    ಬೆಂಗಳೂರಲ್ಲಿ 90 ರೂ. ಸನಿಹಕ್ಕೆ: ಬೆಂಗಳೂರಲ್ಲಿ ಗುರುವಾರ ಪೆಟ್ರೋಲ್ ಬೆಲೆಯಲ್ಲಿ 25 ಪೈಸೆ ಹೆಚ್ಚಳವಾಗಿದ್ದು, 87.4 ರೂ.ಗೆ ತಲುಪಿದೆ. ಡೀಸೆಲ್ ಬೆಲೆಯಲ್ಲಿ 28 ಪೈಸೆ ಏರಿಕೆಯಾಗಿದ್ದು, 78.87 ರೂ. ಆಗಿದೆ.

    ಸುಂಕ ಇಳಿಸಲು ಒತ್ತಾಯ

    ತೈಲ ಬೆಲೆ ಹೊರೆಯನ್ನು ಕಡಿಮೆ ಮಾಡಲು ಸರ್ಕಾರ ಅಬಕಾರಿ ಸುಂಕವನ್ನು ಇಳಿಸಬೇಕು ಎಂದು ಶೇ. 69ರಷ್ಟು ಜನರು ಆಗ್ರಹಿಸಿದ್ದಾರೆ. ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಕನಿಷ್ಠ ಶೇ. 20 ಅಥವಾ ಆರು ರೂಪಾಯಿಯನ್ನಾದರೂ ತಗ್ಗಿಸಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ನಡೆಸಿದ ಸಮೀಕ್ಷೆಗೆ ಜನರು ಪ್ರತಿಕ್ರಿಯೆ ನೀಡಿದ್ದಾರೆ. ದೇಶದ 201 ಜಿಲ್ಲೆಗಳಲ್ಲಿ 9,326 ಮಂದಿ ಸಮೀಕ್ಷೆಯಲ್ಲಿ ಭಾಗಿಯಾಗಿದ್ದು, ಶೇ. 71 ಮಂದಿ ಪುರುಷರು ಮತ್ತು ಶೇ. 29ರಷ್ಟು ಮಹಿಳೆಯರು ಪ್ರತಿಕ್ರಿಯಿಸಿದ್ದಾರೆ.

    ಅಂತಾರಾಷ್ಟ್ರೀಯ ಮಟ್ಟದಲ್ಲಿ ಲೀಟರ್ ಪೆಟ್ರೋಲ್​ಗೆ -ಠಿ; 23.43 ದರ ಇದೆ. ಆದರೆ, ದೇಶದಲ್ಲಿ ಸರಿಸುಮಾರು ನಾಲ್ಕು ಪಟ್ಟು ಬೆಲೆ ಹೆಚ್ಚಿದೆ. ಇದಕ್ಕೆ ಸರ್ಕಾರ ವಿಪರೀತ ತೆರಿಗೆ ವಿಧಿಸುತ್ತಿರುವುದು ಕಾರಣ. ತೈಲ ಬೆಲೆ ಏರಿಕೆ ಸಂದರ್ಭದಲ್ಲಿ ಜನರ ಮೇಲಿನ ಹೊರೆ ತಗ್ಗಿಸಬೇಕಾದ ಸರ್ಕಾರ ಲಾಭ ಮಾಡಿಕೊಳ್ಳುವ ಅವಕಾಶವಾದಿಯಾಗಿದೆ.

    | ಸೋನಿಯಾ ಗಾಂಧಿ ಕಾಂಗ್ರೆಸ್ ಅಧ್ಯಕ್ಷೆ

    ಜಿಡಿಪಿ ಮೈನಸ್ ಶೇ. 7.7ಕ್ಕೆ?

    ಪ್ರಸಕ್ತ ಸಾಲಿನ ಅಂತ್ಯಕ್ಕೆ ದೇಶದ ಒಟ್ಟು ಉತ್ಪನ್ನ ದರ (ಜಿಡಿಪಿ) ಶೇ. ಮೈನಸ್ 7.7ಕ್ಕೆ ಸ್ಥಿರಗೊಳ್ಳುವ ಅಂದಾಜು ಇದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಕೃಷಿ ಹೊರತು ಪಡಿಸಿ ಉಳಿದ ಬಹುತೇಕ ಕ್ಷೇತ್ರಗಳಲ್ಲಿ ಹಿಂಜರಿತ ಇರಲಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ ತಿಳಿಸಿದೆ. ಕೋವಿಡ್ ಸಾಂಕ್ರಾಮಿಕದ ಪರಿಣಾಮ ಈ ವರ್ಷದ ಮೊದಲ ತ್ರೖೆಮಾಸಿಕದಲ್ಲಿ ಜಿಡಿಪಿ ಮೈನಸ್ 23.9ಕ್ಕೆ ಕುಸಿತ ಕಂಡಿತ್ತು. ಆದರೆ, ಎರಡನೇ ತ್ರೖೆಮಾಸಿಕದಲ್ಲಿ ಚೇತರಿಕೆ ಕಂಡರೂ ಮೈನಸ್ 7.5ಕ್ಕೆ ನಿಂತಿತ್ತು. ಈ ವರ್ಷ ಭಾರತದ ಜಿಡಿಪಿ ಶೇ. 9.6 ಇರಲಿದೆ ಎಂದು ವಿಶ್ವ ಬ್ಯಾಂಕ್ ಅಂದಾಜಿಸಿದೆ.

    ಚಿನ್ನ 714 ರೂ. ಇಳಿಕೆ: ದೆಹಲಿ ಚಿನಿವಾರ ಪೇಟೆಯಲ್ಲಿ ಬಂಗಾರದ ದರ 714 ರೂ. ತಗ್ಗಿದ್ದು, 10 ಗ್ರಾಂ ಅಪರಂಜಿ ಚಿನ್ನದ ಬೆಲೆ 50,335 ರೂ.ಗೆ ಇಳಿದಿದೆ. ಬೆಳ್ಳಿ ಬೆಲೆ 386 ರೂ. ಕಡಿಮೆ ಆಗಿದ್ದು, ಕೆ.ಜಿ.ಗೆ 69,708 ರೂ.ಗೆ ತಗ್ಗಿದೆ. ವಿದೇಶಿ ವಿನಿಮಯದಲ್ಲಿ ರೂಪಾಯಿ ಮೌಲ್ಯ 20 ಪೈಸೆ ಕುಸಿದಿದ್ದು, ಡಾಲರ್​ಗೆ 73.31 ರೂ.ಗೆ ಸ್ಥಿರವಾಗಿದೆ.

    ಅಪ್ರಾಪ್ತೆಯ ಮೇಲೆ ರೇಪ್​ ಮಾಡಿ ವಿಡಿಯೋ ಮಾಡಿಕೊಂಡ ಕಾಮುಕ! ಮತ್ತೆ ಕರೆದಾಗ ಬರುವುದಿಲ್ಲ ಎಂದಿದ್ದಕ್ಕೆ ವಿಡಿಯೋ ವೈರಲ್​ ಮಾಡಿದ

    ಬಿಡುಗಡೆಗೂ ಮುನ್ನ ಕೆಜಿಎಫ್ ಚಾಪ್ಟರ್-2 ಟೀಸರ್ ಸೋರಿಕೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts