More

    ಸ್ಟಾರ್‌ಚಾರ್ಜ್ ಎನರ್ಜಿ ಜತೆ ಒಪ್ಪಂದ: ವಾಹನ ಬಿಡಿಭಾಗ ತಯಾರಕ ಕಂಪನಿ ಷೇರು ಟಾರ್ಗೆಟ್​ ಪ್ರೈಸ್​ ಹೆಚ್ಚಳ

    ಮುಂಬೈ: ವಾಹನ ಘಟಕ ತಯಾರಕ ಯುನೊ ಮಿಂಡಾ ಕಂಪನಿಯು ದೇಶದಲ್ಲಿ ಎಲೆಕ್ಟ್ರಿಕ್ ವಾಹನ ಪೂರೈಕೆ ಘಟಕಗಳನ್ನು ತಯಾರಿಸಲು ಮತ್ತು ಮಾರಾಟ ಮಾಡಲು ಸ್ಟಾರ್‌ಚಾರ್ಜ್ ಎನರ್ಜಿ ಜತೆ ಒಪ್ಪಂದ ಮಾಡಿಕೊಂಡಿದೆ. ಕಂಪನಿಯು ಮನೆಯ ಚಾರ್ಜಿಂಗ್‌ಗಾಗಿ ವಿನ್ಯಾಸಗೊಳಿಸಲಾದ ವಾಲ್-ಮೌಂಟೆಡ್ ಎಸಿ ಚಾರ್ಜರ್‌ಗಳಿಗಾಗಿ RechargeEnergy Pte. ಜತೆಗೆ ತಂತ್ರಜ್ಞಾನ ಪರವಾನಗಿ ಒಪ್ಪಂದವನ್ನು ಮಾಡಿಕೊಂಡಿದೆ.

    ಯುನೊ ಮಿಂಡಾ ಗ್ರೂಪ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ (ಸಿಎಮ್‌ಡಿ) ನಿರ್ಮಲ್ ಕೆ ಮಿಂಡಾ ಅವರು, ಈ ಸಹಯೋಗವು ‘ಮೇಕ್ ಇನ್ ಇಂಡಿಯಾ’ ಕಡೆಗೆ ನಮ್ಮ ಸಮರ್ಪಣೆಯನ್ನು ಮತ್ತಷ್ಟು ಬಲಪಡಿಸುತ್ತದೆ. ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಮೂಲಸೌಕರ್ಯ ಮತ್ತು ಮೈಕ್ರೋಗ್ರಿಡ್ ಪರಿಹಾರಗಳಲ್ಲಿ ಸ್ಟಾರ್‌ಚಾರ್ಜ್ ವಿಶ್ವದ ಪ್ರಮುಖ ಕಂಪನಿಯಾಗಿದೆ ಎಂದು ಹೇಳಿದ್ದಾರೆ.

    ಅಮೆರಿಕ, ವಿಯೆಟ್ನಾಂ ಮತ್ತು ಚೀನಾದಲ್ಲಿ ಉತ್ಪಾದನೆ ಮಾಡುತ್ತದೆ. 67 ದೇಶಗಳು ಮತ್ತು ಪ್ರಾಂತ್ಯಗಳಲ್ಲಿ ಸೌಲಭ್ಯಗಳೊಂದಿಗೆ ಕಾರ್ಯನಿರ್ವಹಿಸುತ್ತದೆ.

    ಸ್ಟಾರ್‌ ಚಾರ್ಜ್‌ ಕಂಪನಿ ಅಧ್ಯಕ್ಷ ಶಾವೋ ಡಾನ್‌ವೀ ಅವರು, “ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಅಳವಡಿಕೆಯ ದೃಷ್ಟಿಕೋನದ ಬಗ್ಗೆ ನಾವು ಆಶಾವಾದಿಗಳಾಗಿದ್ದೇವೆ. ಹೋಮ್ ಚಾರ್ಜಿಂಗ್ ಪರಿಹಾರಗಳಿಗೆ ಪ್ರಚಂಡ ಅವಕಾಶಗಳಿವೆ ಎಂದು ನಂಬುತ್ತೇವೆ ಎಂದಿದ್ದಾರೆ.

    ಯುನೊ ಮಿಂಡಾ ಷೇರಿನ ಬೆಲೆ 649.20 ರೂ. ಇದೆ. ಕಳೆದ ಶುಕ್ರವಾರ ಷೇರುಪೇಟೆಯಲ್ಲಿ ಕೊಂಚ ಕುಸಿತ ದಾಖಲಾಗಿತ್ತು. ಇದೇ ಸಮಯದಲ್ಲಿ, ಜನವರಿ 12, 2024 ರಂದು, ಈ ಷೇರು ರೂ 726.85 ರ ಬೆಲೆಯನ್ನು ತಲುಪಿತ್ತು. ಇತ್ತೀಚೆಗೆ, ಬ್ರೋಕರೇಜ್ ಆಕ್ಸಿಸ್ ಸೆಕ್ಯುರಿಟೀಸ್ ಈ ಷೇರಿಗೆ ಗುರಿ ಬೆಲೆಯನ್ನು ನೀಡಿತ್ತು. ಆಕ್ಸಿಸ್ ಸೆಕ್ಯುರಿಟೀಸ್ ತನ್ನ ಟಾರ್ಗೆಟ್​ ಪ್ರೈಸ್​ ಅನ್ನು 750 ರೂ.ಗೆ ನಿಗದಿಪಡಿಸಿದೆ. ಆನಂದ್ ರಾಠಿ ಬ್ರೋಕರೇಜ್​ ಸಂಸ್ಥೆಯು ಈ ಷೇರುಗಳ ಗುರಿ ಬೆಲೆಯನ್ನು 760 ರೂ.ಗೆ ನಿಗದಿ ಮಾಡಿದೆ.

    500ರಿಂದ 1 ರೂಪಾಯಿಗೆ ಕುಸಿದಿದ್ದ ರಿಲಯನ್ಸ್​ ಕಂಪನಿ ಷೇರು: ಈಗ 7 ದಿನಗಳಲ್ಲಿ ಬೆಲೆ 30% ಹೆಚ್ಚಳವಾಗಿದ್ದೇಕೆ?

     

    ರೂ. 80ರ ಐಪಿಒ ಷೇರಿಗೆ ಗ್ರೇ ಮಾರ್ಕೆಟ್​ನಲ್ಲಿ ರೂ 40 ಪ್ರೀಮಿಯಂ: ಹೂಡಿಕೆ ಮಾಡಿ ಲಾಭ ಗಳಿಸಲು ಏ. 4ರವರೆಗೆ ಅವಕಾಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts