More

    5 ರೂಪಾಯಿಯ ಪೆನ್ನಿ ಸ್ಟಾಕ್​ಗೆ ಡಿಮ್ಯಾಂಡು: ಒಂದೇ ವಾರದಲ್ಲಿ 25% ಏರಿಕೆ

    ಮುಂಬೈ: ಕಳೆದ ಶುಕ್ರವಾರ ಷೇರುಪೇಟೆಯಲ್ಲಿ ಉತ್ಸಾಹದ ಮರಳುವಿಕೆಯ ನಡುವೆ, ಕೆಲವು ಪೆನ್ನಿ ಷೇರುಗಳು ಸಹ ತಮ್ಮದೇ ಆದ ಓಟವನ್ನು ಮುಂದುವರಿಸಿದವು. ವಾರದ ಕೊನೆಯ ವಹಿವಾಟಿನ ದಿನದಂದು ಜಾನಸ್ ಕಾರ್ಪೊರೇಶನ್‌ನ (Janus Corporation) ಷೇರುಗಳು ತೀವ್ರ ಏರಿಕೆ ದಾಖಲಿಸಿದವು. 5 ರೂ.ಗಳಿದ್ದ ಈ ಷೇರು ಬೆಲೆ ಶೇ. 15ರಷ್ಟು ಏರಿಕೆ ಕಂಡಿತು. ವಹಿವಾಟಿನ ಅಂತ್ಯಕ್ಕೆ ಈ ಷೇರಿನ ಬೆಲೆ 5.85 ರೂ.ಗೆ ತಲುಪಿತು. ಹಿಂದಿನ ದಿನಕ್ಕೆ ಹೋಲಿಸಿದರೆ ಈ ಸ್ಟಾಕ್ 13.15% ರಷ್ಟು ಲಾಭ ಕಂಡಿತು. ವಹಿವಾಟಿನ ವೇಳೆ ಈ ಷೇರು ದಿನದ ಗರಿಷ್ಠ ಮಟ್ಟವಾದ 6.15 ರೂ. ತಲುಪಿದ್ದವು.

    ಫೆಬ್ರವರಿ 14, 2024 ರಂದು ಈ ಷೇರಿನ ಬೆಲೆ ರೂ 7.89 ಇತ್ತು. ಇದು 52 ವಾರಗಳ ಗರಿಷ್ಠ ಬೆಲೆ ಆಗಿದೆ. ಕಳೆದ ಒಂದು ವಾರದಿಂದ ಈ ಸ್ಟಾಕ್ ಬೆಲೆ ರಾಕೆಟ್​ನಂತೆ ಗಗನಕ್ಕೇರುತ್ತಿದೆ. ಒಂದು ವಾರದಲ್ಲಿ ಷೇರುಗಳ ಬೆಲೆ ಶೇಕಡಾ 25 ಕ್ಕಿಂತ ಹೆಚ್ಚು ಏರಿಕೆ ಕಂಡಿದೆ.

    ಈ ಕಂಪನಿಯಲ್ಲಿ ಸೆಪ್ಟೆಂಬರ್ ತ್ರೈಮಾಸಿಕದವರೆಗೆ ಪ್ರವರ್ತಕರ ಪಾಲು ಶೇ.10.73 ಇತ್ತು. ಇದೇ ಸಮಯದಲ್ಲಿ, ಸಾರ್ವಜನಿಕ ಷೇರುಗಳ ಪಾಲು ಶೇಕಡಾ 89.27 ಇದೆ.

    ಮಾರ್ಚ್ 11ರಂದು ಈ ಕಂಪನಿಯ ಆಡಳಿತ ಮಂಡಳಿ ಸಭೆ ನಡೆದಿದೆ. ಈ ಸಭೆಯಲ್ಲಿ ಫಾರೆವರ್ ಬಿಸಿನೆಸ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್‌ನ ಈಕ್ವಿಟಿ ಷೇರುಗಳ ಖರೀದಿಗೆ ಹೂಡಿಕೆ ಪ್ರಸ್ತಾವನೆಯನ್ನು ಚರ್ಚಿಸಲಾಗಿದೆ.

    ಕಂಪನಿಯ ಕಾರ್ಯದರ್ಶಿ ನಿಹಾರಿಕಾ ಕೊಠಾರಿ ಅವರ ರಾಜೀನಾಮೆಯನ್ನು ಜಾನಸ್ ಕಾರ್ಪೊರೇಷನ್ ಮಂಡಳಿಯು ದಾಖಲೆಯಾಗಿ ತೆಗೆದುಕೊಂಡಿದೆ. Forever Business Solutions Private Limited (FBSPL) ನ ಈಕ್ವಿಟಿ ಷೇರುಗಳಲ್ಲಿ ಹೂಡಿಕೆಗಾಗಿ ಚರ್ಚಿಸಲು, ವ್ಯವಹರಿಸಲು ಮತ್ತು ಮಾತುಕತೆ ನಡೆಸಲು ಮಂಡಳಿಯು ವ್ಯವಸ್ಥಾಪಕ ನಿರ್ದೇಶಕರು ಮತ್ತು ಕಾರ್ಯನಿರ್ವಾಹಕ ನಿರ್ದೇಶಕರಿಗೆ ಅಧಿಕಾರ ನೀಡಿದೆ.

    ಸ್ಟಾರ್‌ಚಾರ್ಜ್ ಎನರ್ಜಿ ಜತೆ ಒಪ್ಪಂದ: ವಾಹನ ಬಿಡಿಭಾಗ ತಯಾರಕ ಕಂಪನಿ ಷೇರು ಟಾರ್ಗೆಟ್​ ಪ್ರೈಸ್​ ಹೆಚ್ಚಳ

    500ರಿಂದ 1 ರೂಪಾಯಿಗೆ ಕುಸಿದಿದ್ದ ರಿಲಯನ್ಸ್​ ಕಂಪನಿ ಷೇರು: ಈಗ 7 ದಿನಗಳಲ್ಲಿ ಬೆಲೆ 30% ಹೆಚ್ಚಳವಾಗಿದ್ದೇಕೆ?

    ರೂ. 80ರ ಐಪಿಒ ಷೇರಿಗೆ ಗ್ರೇ ಮಾರ್ಕೆಟ್​ನಲ್ಲಿ ರೂ 40 ಪ್ರೀಮಿಯಂ: ಹೂಡಿಕೆ ಮಾಡಿ ಲಾಭ ಗಳಿಸಲು ಏ. 4ರವರೆಗೆ ಅವಕಾಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts