More

    ಸದ್ದು ಮಾಡುತ್ತಿದೆ RCBಗೆ “ಜಿಂಗಲ ಜೈ” ಹಾಡು!

    ಬೆಂಗಳೂರು: ಆರ್​ಸಿಬಿ ತಂಡವನ್ನು ಹುರಿದುಂಬಿಸುವ ಹಾಡು ಬರೆದರು ವಿಕಟಕವಿ, ನಿರ್ದೇಶಕ ಯೋಗರಾಜ್ ಭಟ್. ಮಾರ್ಚ್​​ 22ರಿಂದ ಆರಂಭವಾದ “ಐಪಿಎಲ್” ಹಿನ್ನೆಲೆ ಆರ್​ಸಿಬಿ ಅಭಿಮಾನಿಗಳಿಗೆಂದು ಹೊಸ ಸಾಂಗ್ ಸಂಯೋಜಿಸಿದ್ದಾರೆ. ಇತ್ತೀಚೆಗಷ್ಟೇ ನಡೆದ ವುಮೆನ್ಸ್​ ಪ್ರೀಮಿಯರ್​ ಲೀಗ್​ನಲ್ಲಿ ಆರ್ಸಿಬಿ ಮಹಿಳಾ‌ ತಂಡದವರು ಕಪ್ ಗೆದ್ದು, ಇತಿಹಾಸ ನಿರ್ಮಿಸಿದರು. ಈ ಬಾರಿಯ ಐಪಿಎಲ್​ನಲ್ಲೂ ನಮ್ಮ ಆರ್ಸಿಬಿ ಕಪ್ ಗೆದ್ದೆ ಗೆಲ್ಲುತ್ತದೆ ಎಂಬ ವಿಶ್ವಾಸದ ಮಾತು ಎಲ್ಲೆಡೆ ವ್ಯಾಪಕವಾಗಿ ಕೇಳಿ ಬರುತ್ತಿದೆ.

    ಇದನ್ನೂ ಓದಿ: ಮನಸ್ತಾಪ ಬದಿಗೊತ್ತಿ ಕಾಂಗ್ರೆಸ್ ಗೆಲುವಿಗೆ ಶ್ರಮಿಸಿ: ಡಾ.ಮಂತರ್ ಗೌಡ

    ಆರ್​ಸಿಬಿ ತಂಡವನ್ನು ಹುರಿದುಂಬಿಸುವ “ಜಿಂಗಲ ಜೈ” ಎಂಬ ಹಾಡನ್ನು ಖ್ಯಾತ ಸಾಹಿತಿ ಹಾಗೂ ನಿರ್ದೇಶಕ ಯೋಗರಾಜ್ ಭಟ್ ಬರೆದಿದ್ದಾರೆ. ಜಿಂಗಲ ಜೈ ಎಂದು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಡಿದ್ದಾರೆ. ಇದು ಧ್ರುವ ಹಾಡಿರುವ ಮೊದಲ ಹಾಡು ಕೂಡ. ಸರ್ಜಾ ಅವರೊಟ್ಟಿಗೆ ಗಾಯನಕ್ಕೆ ಯೋಗರಾಜ್ ಭಟ್, ಉತ್ತರ ಕರ್ನಾಟಕದ ಪ್ರತಿಭೆ ಮಾಳು ನಿಪನಾಳ ಹಾಗೂ ಚೇತನ್ ಸೋಸ್ಕಾ ಸಹ ಜೊತೆಯಾಗಿದ್ದಾರೆ‌. ಚೇತನ್ ಸೋಸ್ಕಾ ಸಂಗೀತ ನೀಡಿದ್ದಾರೆ.

    ರೇಣುಕಾ ಯೋಗರಾಜ್ ಭಟ್ ಈ ಹಾಡನ್ನು ನಿರ್ಮಾಣ ಮಾಡಿದ್ದು, ಯೋಗರಾಜ್ ಭಟ್ ನಿರ್ದೇಶಿಸಿದ್ದಾರೆ‌. ನಿರ್ದೇಶಕ ಎ.ಪಿ.ಅರ್ಜುನ್, ಡ್ಯಾನಿಶ್ ಸೇಠ್, ಮಣಿಕಂಠನ್ ಮುಂತಾದವರು ಈ ಹಾಡಿಗೆ ಸಹಕರಿಸಿದ್ದಾರೆ. ಅಭಿರಾಜ್, ಶಿವ್ ಪಾಟೀಲ್, ರಾಕೇಶ್ ರಾಮ್ ಅವರ ಛಾಯಾಗ್ರಹಣ, ಸಚಿನ್ ಕೆ. ರಾಮು ಸಂಕಲನ, ಗುಡ್ಡು ರಾಜ್ ನೃತ್ಯ ನಿರ್ದೇಶನ ಹಾಗೂ ಗಡ್ಡ ವಿಜಿ ಅವರ ಕಲಾ ನಿರ್ದೇಶನವಿರುವ “ಜಿಂಗಲ ಜೈ” ಹಾಡು ಪಂಚರಂಗಿ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಧ್ರುವ ಸರ್ಜಾ, ಉತ್ತರ ಕರ್ನಾಟಕದ ಪ್ರತಿಭೆ ಮಾಳು ನಿಪನಾಳ, ಕನ್ನಡದ ಮಕ್ಕಳು ಹಾಗೂ ಆರ್ ಸಿ ಬಿ ಅಭಿಮಾನಿಗಳು ಈ ಹಾಡಿನಲ್ಲಿ ಅಭಿನಯಿಸಿದ್ದಾರೆ.

    ಶ್ರೀಲೀಲಾ ಜತೆ ನಟಿಸಲು ಸ್ಟಾರ್​ ನಟರಿಗೆ ಚಿಂತೆ! ಇದು ಮುಂದುವರಿದ್ರೆ ‘ಕಿಸ್’​ ಬೆಡಗಿಗೆ ಸಂಕಷ್ಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts