ಸಂಪರ್ಕ ರಸ್ತೆ ಅಭಿವೃದ್ಧಿಪಡಿಸುವಂತೆ ಒತ್ತಾಯಿಸಿ ಸಂಸದ ಚೌಟರಿಗೆ ಮನವಿ

manavi
Published on

ಸುಳ್ಯ: ಐವರ್ನಾಡು-ದೇರಾಜೆ-ಶೇಣಿ ಸಂಪರ್ಕ ರಸ್ತೆಯನ್ನು ಪ್ರಧಾನಮಂತ್ರಿ ಗ್ರಾಮ ಸಡಕ್ ರಸ್ತೆಯನ್ನಾಗಿಸಿ, ಕಾಮಗಾರಿ ನಡೆಸುವ ಬಗ್ಗೆ ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರಿಗೆ ಬಿಜೆಪಿ ಕಾರ್ಯಕರ್ತರು ಗುರುವಾರ ಮನವಿ ಸಲ್ಲಿಸಿದರು.

ಐವರ್ನಾಡು ಗ್ರಾಮ ಪಂಚಾಯಿತಿ ಬಳಿಯಿಂದ ದೇರಾಜೆ ಶೇಣಿಯ ತನಕ ಏಳು ನೂರಕ್ಕೂ ಮಿಕ್ಕಿದ ಮನೆಗಳು ಇವೆ. ಅಲ್ಲದೆ ಪರಿಶಿಷ್ಟ ಜಾತಿಯ ಕಾಲನಿ, ಗ್ರಾಮ ದೇವಸ್ಥಾನ, ಅಂಗನವಾಡಿ ಕೇಂದ್ರ, ಪ್ರಾಥಮಿಕ ಶಾಲೆಗಳೂ ಇವೆ. ಎರಡು ಗ್ರಾಮಗಳಾದ ಐವರ್ನಾಡು ಹಾಗೂ ಅಮರಪಡ್ನೂರು ಗ್ರಾಮಗಳನ್ನು ಸೇರಿಸುವ ಅತೀ ಅವಶ್ಯಕ ರಸ್ತೆ ಇದಾಗಿದ್ದರೂ ಸಂಪೂರ್ಣ ಹದಗೆಟ್ಟು ಹೋಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ, ಮಾಜಿ ಸಚಿವ ಎಸ್.ಅಂಗಾರ, ಐವರ್ನಾಡು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ನಂದಕುಮಾರ್ ಬಾರೆತ್ತಡ್ಕ, ಪ್ರಮುಖರಾದ ಮೋಹನ್ ಬೋಳುಗುಡ್ಡೆ, ರಕ್ಷಿತ್ ಸಾರಕುಟೇಲು, ಕಿಶನ್ ಜಬಳೆ, ಅನಿಲ್ ದೇರಾಜೆ, ನಿಖಿಲ್ ಮಡ್ತಿಲ, ಅಜಿತ್ ಐವರ್ನಾಡು, ಅರುಣ್ ಗುತ್ತಿಗಾರುಮೂಲೆ, ಅನಿಲ್ ಕುತ್ಯಾಡಿ, ಪ್ರೀತಮ್ ಕೋಡ್ತಿಲು, ನವೀನ್ ಸಾರಕೆರೆ ಮೊದಲಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net