ವಿಜ್ಞಾನ ಮಾದರಿ ರಾಷ್ಟ್ರಮಟ್ಟಕ್ಕೆ ಆಯ್ಕೆ

basith
Published on

ಉಪ್ಪಿನಂಗಡಿ: ಇಲ್ಲಿನ ಸರ್ಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ 8ನೇ ತರಗತಿ ವಿದ್ಯಾರ್ಥಿ ಬಾಷಿತ್ ಅವರ ವಿಜ್ಞಾನ ಮಾದರಿ ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ನಡೆಸುವ ಇನ್‌ಸ್ಪೈರ್ ಅವಾರ್ಡ್ ಮಾನಕ್ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ.

39 ಮಾದರಿಗಳು ರಾಷ್ಟಮಟ್ಟಕ್ಕೆ ಆಯ್ಕೆಯಾಗಿದ್ದು, ಇದರಲ್ಲಿ ಕಡವಿನಬಾಗಿಲು ನಿವಾಸಿ ಇಲಿಯಾಸ್ ಪಾಷಾ-ಸಬಿಯಾ ದಂಪತಿ ಪುತ್ರ ಅಬ್ದುಲ್ ಬಾಷಿತ್ ತಯಾರಿಸಿದ ‘ಸೀವಿಂಗ್ ಚೇರ್ ಫಾರ್ ಹ್ಯಾಂಡಿಕ್ಯಾಪ್ಸ್’ ಮಾದರಿಯೂ ಸೇರಿದೆ. ಇದು ಕೈಗಳನ್ನು ಕಳೆದುಕೊಂಡಿರುವ ವ್ಯಕ್ತಿಗಳಿಗೆ ಅನುಕೂಲವಾಗುವ ಸಾಧನವಾಗಿದೆ. ಸೆ.14 ರಿಂದ 20ರವರೆಗೆ ದಿಲ್ಲಿಯ ಐಐಟಿ ಕ್ಯಾಂಪಸ್‌ನಲ್ಲಿ ನಡೆಯುವ ಸ್ಪರ್ಧೆಯಲ್ಲಿ ಈ ಮಾದರಿ ಪ್ರದರ್ಶಿಸಲಿದ್ದಾರೆ. ವಿಜ್ಞಾನ ಶಿಕ್ಷಕಿ ಕೃಷ್ಣವೇಣಿ ರೈ ಮಾರ್ಗದರ್ಶನ ನೀಡಿದ್ದಾರೆ. ಸಹಶಿಕ್ಷಕಿ ನಯನಾ ಹಾಗೂ ಸುಜಯಾ ಸಹಕರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net