More

    ಆನ್‌ಲೈನ್‌ನಲ್ಲಿ ಮಾರಾಟಕ್ಕಿದೆ 15 ಲಕ್ಷ ಭಾರತೀಯ ಮಹಿಳಾ ಗ್ರಾಹಕರ ವೈಯಕ್ತಿಕ ಮಾಹಿತಿ..?

    ದೆಹಲಿ: ಸ್ಮಾರ್ಟ್‌ಫೋನ್‌ ಯುಗದಲ್ಲಿ ಜಾಗತಿಕ ಇಂಟರ್​ನೆಟ್​ ಬಳಕೆದಾರರು ಬೆಚ್ಚಿ ಬೀಳುವ ಸುದ್ದಿಯೊಂದು ಹೊರ ಬಿದ್ದಿದೆ. ಖದೀಮರ ಗುಂಪೊಂದು ಪ್ರಮುಖ ಇ-ಕಾಮರ್ಸ್ ತಾಣವೊಂದರ ಕಂಪನಿಯ ಲಕ್ಷಾಂತರ ಗ್ರಾಹಕರ ವೈಯುಕ್ತಿಕ ಮಾಹಿತಿಯನ್ನು ದೋಚಿದ್ದಾರೆ ಎಂದು ಆರೋಪಿಸಲಾಗಿದೆ.

    ಸುಮಾರು 15 ಲಕ್ಷ ಬಳಕೆದಾರರ ವೈಯುಕ್ತಿಕ ಮಾಹಿತಿಯನ್ನು ಕದ್ದಿರುವ ಖದೀಮರು, ಈ ಡೇಟಾವನ್ನು ಕ್ರಿಪ್ಟೋಕರೆನ್ಸಿ ಮೂಲಕ ಆನ್​ಲೈನ್​ ಮಾರಾಟಕ್ಕಿದ್ದಾರೆ.

    ಇದನ್ನೂ ಓದಿ: ಹೆಸ್ಕಾಂ ಸಿಬ್ಬಂದಿಗೆ ಎಚ್ಚರಿಕೆಕೊಟ್ಟ ಡಿಸಿ ನಿತೇಶ ಪಾಟೀಲ

    ಝೀವಾಮೆ ಕಂಪನಿಯು ಮಹಿಳೆಯರ ಉಡುಪುಗಳನ್ನು ಆನ್‌ಲೈನ್ ಮಾರಾಟ ಮಾಡುತ್ತದೆ. ಕಂಪನಿಯು ಬಳಕೆದಾರರ ಎಲ್ಲ ವೈಯುಕ್ತಿಕ ಡೇಟಾವನ್ನು ಒಳಗೊಂಡಿರುತ್ತದೆ. ಈ ಡೇಟಾ ಹೆಸರು, ಇಮೇಲ್, ಫೋನ್ ಸಂಖ್ಯೆ ಮತ್ತು ಗ್ರಾಹಕರ ಭೌತಿಕ ವಿಳಾಸದ ಮಾಹಿತಿಯನ್ನು ಒಳಗೊಂಡಿರುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಕೆಲವು ಬಳಕೆದಾರರು ಡೇಟಾ ಆನ್‌ಲೈನ್‌ನಲ್ಲಿ ಮಾರಾಟ ಕುರಿತು ಬಗ್ಗೆ ಹೇಳಿಕೊಂಡಿದ್ದರೂ, ಕಂಪನಿಯು ಇದಕ್ಕೆ ಪ್ರತಿಕ್ರಿಯಿಸಿಲ್ಲ ಎನ್ನುವ ಆರೋಪಗಳು ಕೇಳಿ ಬಂದಿವೆ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts