

ವಿಜಯಪುರ: ಗೋಳಗುಮ್ಮಟಕ್ಕೆ ಪ್ರವಾಸ ಬಂದ ವ್ಯಕ್ತಿಯೊಬ್ಬರು ಗೋಳಗುಮ್ಮಟದ ಮೇಲಿಂದ ಬಿದ್ದು ದಾರುಣವಾಗಿ ಮೃತಪಟ್ಟ ಘಟನೆ ಬುಧವಾರ ಸಂಭವಿಸಿದೆ.
ಸಲೀಂ ತಿಕೋಟಿಕರ್ (55) ಮೃತ ದುರ್ದೈವಿ. ಬುಧವಾರ ಗೋಳಗುಮ್ಮಟ ವೀಕ್ಷಣೆಗೆ ಹೋಗಿದ್ದಾಗ ಮೇಲಿಂದ ಬಿದ್ದಿದ್ದಾನೆ. ಇದು ಆತ್ಮಹತ್ಯೆಯೋ ಅಥವಾ ಆಕಸ್ಮಿಕ ಘಟನೆಯೋ ಎಂಬುದು ಖಚಿತವಾಗಿಲ್ಲ. ಸ್ಥಳಕ್ಕೆ ಗೋಳಗುಮ್ಮಟ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.