

ಮುಂಬೈ : ಹೊಸದಾಗಿ ಆತಂಕ ಮೂಡಿಸಿರುವ ಡೆಲ್ಟಾ ಪ್ಲಸ್ ರೂಪಾಂತರಿ ಕರೊನಾ ಸೋಂಕಿನ 21 ಪ್ರಕರಣಗಳು ಮಹಾರಾಷ್ಟ್ರದಲ್ಲಿ ಕಂಡುಬಂದಿವೆ. ಇದೀಗ ಈ ರೂಪಾಂತರಿಯ ಸೋಂಕು ಹೊಂದಿದವರಲ್ಲಿ ಮೊದಲನೇ ಸಾವು ಈ ರಾಜ್ಯದಲ್ಲಿ ಸಂಭವಿಸಿದೆ.
ಡೆಲ್ಟಾ ಪ್ಲಸ್ ರೂಪಾಂತರಿ ಕಂಡುಬಂದಿದ್ದ, ಕೋಮಾರ್ಬಿಡಿಟೀಸ್ ಇದ್ದ 80 ವರ್ಷದ ಸೋಂಕಿತ ಮೃತಪಟ್ಟಿದ್ದಾರೆ ಎಂದು ರಾಜ್ಯ ಆರೋಗ್ಯ ಸಚಿವ ರಾಜೇಶ್ ಟೋಪೆ ಹೇಳಿದ್ದಾರೆ. ರತ್ನಗಿರಿ, ಜಲಗಾವ್, ಮುಂಬೈ, ಪಲಘರ್, ಸಿಂಧುದುರ್ಗ್ ಮತ್ತು ಥಾಣೆಗಳಲ್ಲಿ ಒಟ್ಟು 21 ಡೆಲ್ಟಾ ಪ್ಲಸ್ ರೂಪಾಂತರಿಯ ಸೋಂಕಿತರು ಇದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)