ಮಾಜಿ ಕಾರ್ಪೊರೇಟರ್ ಹತ್ಯೆ ಪ್ರಕರಣ: ಸತ್ಯಾಂಶ‌ ಶೀಘ್ರ ಬಯಲು

rekha
Published on

ಬೆಂಗಳೂರು:‌ ಬಿಬಿಎಂಪಿ ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಬರ್ಬರ ಹತ್ಯೆ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ. ಸತ್ಯಾಂಶ ಶೀಘ್ರವೇ ಬಯಲಾಗಲಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ‌ ವಿಶ್ವಾಸ ವ್ಯಕ್ತಪಡಿಸಿದರು.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ. ದುಷ್ಕೃತ್ಯ ಎಸಗಿದ ಆರೋಪಿಗಳ ಶೋಧ ಕಾರ್ಯಾಚರಣೆ ನಡೆದಿದೆ ಎಂದರು. ಹತ್ಯೆಗೆ ರಾಜಕೀಯ ಅಥವಾ ಕೌಟುಂಬಿಕ ಕಾರಣವೋ ಎನ್ನುವುದು ತನಿಖೆಯ ನಂತರ ಗೊತ್ತಾಗಲಿದ್ದು, ಶೀಘ್ರವೇ ನಿಜಾಂಶ ಬಹಿರಂಗವಾಗಲಿದೆ ಎಂದು ಬಸವರಾಜ ಬೊಮ್ಮಾಯಿ‌ ಪುನರುಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net