ಆರ್​ಸಿಬಿ ಮಹಿಳೆಯರ ಶುಭಾರಂಭ; ಪೆರ್ರಿ-ರಿಚಾ ಆರ್ಭಟದಿಂದ ಭರ್ಜರಿ ಚೇಸಿಂಗ್​ ದಾಖಲೆ

blank

ವಡೋದರ: ದಿಟ್ಟ ಬ್ಯಾಟಿಂಗ್​ ನಿರ್ವಹಣೆಯ ಮೂಲಕ ಬೃಹತ್​ ಮೊತ್ತದ ಸವಾಲನ್ನು ಬೆನ್ನಟ್ಟಿದ ಆರ್​ಸಿಬಿ ತಂಡ “ಮಹಿಳೆಯರ ಐಪಿಎಲ್​’ ಖ್ಯಾತಿಯ ವುಮೆನ್ಸ್​ ಪ್ರೀಮಿಯರ್​ ಲೀಗ್​ (ಡಬ್ಲುಪಿಎಲ್​) ಮೂರನೇ ಆವೃತ್ತಿಯಲ್ಲಿ ಗೆಲುವಿನ ಆರಂಭ ಕಂಡಿದೆ. ಎಲ್ಲಿಸ್​ ಪೆರ್ರಿ (57 ರನ್​, 34 ಎಸೆತ, 6 ಬೌಂಡರಿ, 2 ಸಿಕ್ಸರ್​) ಮತ್ತು ರಿಚಾ ಘೋಷ್​ (64*ರನ್​, 27 ಎಸೆತ, 7 ಬೌಂಡರಿ, 4 ಸಿಕ್ಸರ್​) ಸ್ಫೋಟಕ ಅರ್ಧಶತಕದ ಬಲದಿಂದ ಹಾಲಿ ಚಾಂಪಿಯನ್​ ಆರ್​ಸಿಬಿ ತಂಡ, ಗುಜರಾತ್​ ಜೈಂಟ್ಸ್​ ವಿರುದ್ಧ ಶುಕ್ರವಾರ ನಡೆದ ಉದ್ಘಾಟನಾ ಪಂದ್ಯದಲ್ಲಿ 4 ವಿಕೆಟ್​ಗಳಿಂದ ಗೆದ್ದು ಬೀಗಿತು. ಈ ಮೂಲಕ ಟೂರ್ನಿಯಲ್ಲಿ ಗರಿಷ್ಠ ಮೊತ್ತದ ಚೇಸಿಂಗ್ ದಾಖಲೆ ಬರೆಯಿತು.

ನೂತನ ಕೋಟಂಬಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿದ ಗುಜರಾತ್​ ಜೈಂಟ್ಸ್​, ಎಡಗೈ ಬ್ಯಾಟುಗಾರ್ತಿ ಬೆಥ್​ ಮೂನಿ (56 ರನ್​, 42 ಎಸೆತ, 8 ಬೌಂಡರಿ), ನಾಯಕಿ ಆಶ್ಲೇ ಗಾರ್ಡ್​ನರ್​ (79* ರನ್​, 37 ಎಸೆತ, 3 ಬೌಂಡರಿ, 8 ಸಿಕ್ಸರ್​) ಬಿರುಸಿನ ಬ್ಯಾಟಿಂಗ್​ ನೆರವಿನಿಂದ 5 ವಿಕೆಟ್​ಗೆ 201 ರನ್​ ಪೇರಿಸಿತು. ಪ್ರತಿಯಾಗಿ ಆರ್​ಸಿಬಿ 18.3 ಓವರ್​ಗಳಲ್ಲಿ 4 ವಿಕೆಟ್​ಗೆ 202 ರನ್​ ಗಳಿಸಿ ಜಯಿಸಿತು. ರಿಚಾ ಘೋಷ್​ ಮತ್ತು ಕನಿಕಾ ಅಹುಜಾ (30*ರನ್​, 13 ಎಸೆತ, 4 ಬೌಂಡರಿ) ಮುರಿಯದ 5ನೇ ವಿಕೆಟ್​ಗೆ 37 ಎಸೆತಗಳಲ್ಲೇ 93 ರನ್​ ಕಸಿಯುವ ಮೂಲಕ ಆರ್​ಸಿಬಿಯನ್ನು ಗೆಲುವಿನ ದಡ ಸೇರಿಸಿದರು.

ಪೆರ್ರಿ, ರಿಚಾ ದಿಟ್ಟ ಹೋರಾಟ: ಬ್ಯಾಟಿಂಗ್​ ಬಳಿಕ ಬೌಲಿಂಗ್​ನಲ್ಲೂ ಆರ್​ಸಿಬಿ ತಂಡವನ್ನು ಕಾಡಿದ ಗಾರ್ಡ್​ನರ್​, ಆರಂಭಿಕರಾದ ನಾಯಕಿ ಸ್ಮೃತಿ ಮಂದನಾ (9) ಮತ್ತು ಡ್ಯಾನಿ ವ್ಯಾಟ್​ (4) ವಿಕೆಟ್​ಗಳನ್ನು ಬೇಗನೆ ಕಬಳಿಸಿದರು. ಆಗ ಆರ್​ಸಿಬಿಗೆ ಆಧಾರವಾದ ಎಲ್ಲಿಸ್​ ಪೆರ್ರಿ 3ನೇ ವಿಕೆಟ್​ಗೆ ರಾವಿ ಬಿಷ್ಟ್​ (25) ಜತೆಗೂಡಿ 55 ಎಸೆತಗಳಲ್ಲಿ 86 ರನ್​ ಕಸಿದು ಗೆಲುವಿನಾಸೆಗೆ ಬಲ ತುಂಬಿದರು. ನಂತರ ಇವರಿಬ್ಬರು 9 ರನ್​ ಅಂತರದಲ್ಲಿ ಔಟಾದರು. ನಂತರ 46 ಎಸೆತಗಳಲ್ಲಿ 93 ರನ್​ ಬೇಕಿದ್ದಾಗ ಜತೆಗೂಡಿದ ರಿಚಾ&ಅಹುಜಾ ಇನ್ನೂ 9 ಎಸೆತ ಬಾಕಿ ಇರುವಂತೆಯೇ ಜಯ ತಂದರು. ಗಾರ್ಡ್​ನರ್​ ಎಸೆದ ಇನಿಂಗ್ಸ್​ನ 16ನೇ ಓವರ್​ನಲ್ಲಿ ರಿಚಾ 4 ಬೌಂಡರಿ, 1 ಸಿಕ್ಸರ್​ ಸಹಿತ 23 ರನ್​ ಕಸಿದರು.

ಪಂದ್ಯದಲ್ಲಿ ಆರ್​ಸಿಬಿ ಹಾಗೂ ಗುಜರಾತ್​ ಪರ ಒಟ್ಟಾರೆ ಎಂಟು ಆಟಗಾರ್ತಿಯರು ಡಬ್ಲುಪಿಎಲ್​ಗೆ ಪದಾರ್ಪಣೆ ಮಾಡಿದರು.

ಗುಜರಾತ್​ ಜೈಂಟ್ಸ್​: 5 ವಿಕೆಟ್​ಗೆ 201 (ಬೆಥ್​ ಮೂನಿ 56, ವೊಲ್ವಾರ್ಡ್​ 6, ಡಿ. ಹೇಮಲತಾ 4, ಗಾರ್ಡ್​ನರ್​ 79*, ಡಾಟಿನ್​ 25, ಸಿಮ್ರನ್​ 11, ಹರ್ಲೀನ್​ 9*, ರೇಣುಕಾ ಸಿಂಗ್​ 25ಕ್ಕೆ 2, ಪ್ರೇಮಾ 26ಕ್ಕೆ 1). ಆರ್​ಸಿಬಿ: 18.3 ಓವರ್​ಗಳಲ್ಲಿ 4 ವಿಕೆಟ್​ಗೆ 202 (ಸ್ಮೃತಿ 9, ವ್ಯಾಟ್​ 4, ಪೆರ್ರಿ 57, ರಾವಿ 25, ರಿಚಾ 64*, ಕನಿಕಾ 30*, ಗಾರ್ಡ್​ನರ್​ 33ಕ್ಕೆ 2)..

ರಾಷ್ಟ್ರೀಯ ಕ್ರೀಡಾಕೂಟದಲ್ಲಿ ರಿಲಯನ್ಸ್ ಫೌಂಡೇಶನ್ ಕ್ರೀಡಾಪಟುಗಳಿಂದ ಇತಿಹಾಸ ಸೃಷ್ಟಿ; 20 ಚಿನ್ನ ಸಹಿತ 43 ಪದಕ ಗೆಲುವಿನ ಸಾಧನೆ

 

TAGGED:
Share This Article

ಬೇಸಿಗೆಯಲ್ಲಿ ರಾತ್ರಿ ಪ್ರಯಾಣಿಸುತ್ತಿದ್ದೀರಾ? ಈ ವಿಷಯ ನೆನಪಿರಲಿ… traveling at night

traveling at night : ರಾತ್ರಿಯಲ್ಲಿ  ಹೆಚ್ಚಿನ ರಸ್ತೆಗಳು ಖಾಲಿಯಾಗಿರುತ್ತವೆ, ಸಂಚಾರ ಕಡಿಮೆ ಇರುತ್ತದೆ ಮತ್ತು ಪ್ರಯಾಣವನ್ನು…

ಮಾರ್ಚ್​ 29ರಂದು ಷಷ್ಠ ಗ್ರಹ ಕೂಟ… ಅಪ್ಪಿತಪ್ಪಿಯೂ ಆ ದಿನ ಈ ತಪ್ಪುಗಳನ್ನು ಮಾಡಬೇಡಿ! Shasta Graha Koota

Shasta Graha Koota : ಮಾರ್ಚ್ 29ರಂದು ಸೂರ್ಯಗ್ರಹಣ ಸಂಭವಿಸಲಿದೆ. ಅದೇ ದಿನ ಷಷ್ಠ ಗ್ರಹ…

ತೂಕ ಇಳಿಸಿಕೊಳ್ಳಲು ಬೆಳಿಗ್ಗೆ ಯಾವ ರೀತಿಯ ಉಪಹಾರ ಸೇವಿಸಬೇಕು ಗೊತ್ತಾ? Break Fast

Break Fast: ತೂಕ ಇಳಿಸಿಕೊಳ್ಳಲು ಬಯಸುವ ಜನರು ಸಾಮಾನ್ಯವಾಗಿ ಕೇವಲ ವ್ಯಾಯಾಮ ಮಾಡುವುದಿಲ್ಲ, ಜಿಮ್‌ಗೆ ಹೋಗುತ್ತಾರೆ…