More

    ಮೇ 11ರಿಂದ ಧಾರಾವಾಹಿ ಶೂಟಿಂಗ್‌ ಪ್ರಾರಂಭ

    ಅಂತೂ ಕಿರುತೆರೆಯ ಮನವಿಗೆ ಸರ್ಕಾರ ಪುರಸ್ಕಾರ ಕೊಟ್ಟಿದೆ. ಧಾರಾವಾಹಿ ಮತ್ತು ರಿಯಾಲಿಟಿ ಶೋಗಳ ಚಿತ್ರೀಕರಣಕ್ಕೆ ಸರ್ಕಾರವು ಅನುಮತಿ ಕೊಟ್ಟಿದ್ದು, ಮೇ 11ರ ಸೋಮವಾರದಿಂದ ಚಿತ್ರೀಕರಣ ಪ್ರಾರಂಭವಾಗಲಿದೆ.

    ಇದನ್ನೂ ಓದಿ: ಶೂಟಿಂಗ್​ಗೆ ಸಿದ್ಧರಾಗುತ್ತಿದ್ದ ಕಲಾವಿದರಿಗೆ ಶುರುವಾಯ್ತು ಹೊಸ ರಗಳೆ!

    ಲಾಕ್‌ಡೌನ್‌ನಿಂದ ಕಿರುತೆರೆಯ ಚಿತ್ರೀಕರಣಕ್ಕೆ ಬ್ರೇಕ್ ಬಿದ್ದು ಒಂದೂವರೆ ತಿಂಗಳಾಗಿವೆ. ಈ ಮಧ್ಯೆ ಲಾಕ್‌ಡೌನ್ ಕೊಂಚ ಸಡಲಿಕೆಯಾಗಿರುವುದರಿಂದ ಮತ್ತು ಬೇರೆ ಬೇರೆ ವಲಯಗಳಲ್ಲಿ ಕೆಲಸ ಪ್ರಾರಂಭವಾಗುತ್ತಿರುವುದರಿಂದ, ಕಿರುತೆರೆಯ ಚಿತ್ರೀಕರಣಕ್ಕೂ ಅನುವು ಮಾಡಿಕೊಡಬೇಕೆಂದು ಹಲವರು ಇದೀಗ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು.

    ಈ ಕುರಿತು ಮಂಗಳವಾರ ಮಾತನಾಡಿದ್ದ ಕಂದಾಯ ಸಚಿವ ಆರ್​. ಅಶೋಕ್​, ಧಾರಾವಾಹಿ ಮತ್ತು ರಿಯಾಲಿಟಿ ಶೋಗಳ ಚಿತ್ರೀಕರಣ ಮಾಡುವುದರ ಕುರಿತಾಗಿ ಬುಧವಾರ ಮುಖ್ಯಮಂತ್ರಿಗಳ ಜತೆಗೆ ಚರ್ಚೆ ಮಾಡಿ, ಸೂಕ್ತ ತೀರ್ಮಾನ ತೆಗೆದುಕೊಳ್ಳುವುದಾಗಿ ಹೇಳಿದ್ದರು. ಅದರಂತೆ, ಸೋಮವಾರದಿಂದ ಚಿತ್ರೀಕರಣ ಮಾಡಬಹುದು ಎಂಬ ಅನುಮತಿ ಇಂದು ಸಿಕ್ಕಿದೆ. ಚಿತ್ರೀಕರಣ ಮಾಡುವ ಮನವಿಗೆ ಸರ್ಕಾರದಿಂದ ಗ್ರೀನ್​ ಸಿಗ್ನಲ್​ ಸಿಕ್ಕಿದ್ದಿಕ್ಕೆ ಕರ್ನಾಟಕ ಟೆಲಿವಿಷನ್​ ಅಸೋಸಿಯೇಷನ್​ ಅಧ್ಯಕ್ಷ ಶಿವಕುಮಾರ್​ ಸಂತಸ ವ್ಯಕ್ತಪಡಿಸಿದ್ದು, ಸರ್ಕಾರಕ್ಕೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

    ಇದನ್ನೂ ಓದಿ: ಕನ್ನಡದ ಈ ಚಿತ್ರ ನೇರವಾಗಿ ಓಟಿಟಿಯಲ್ಲಿ ಬಿಡುಗಡೆ; ಪುನೀತ್​ ರಾಜ್​ಕುಮಾರ್ ಕೊಟ್ರು ಸುಳಿವು!

    ಧಾರಾವಾಹಿಗಳ ಚಿತ್ರೀಕರಣ ಮಾಡುವುದಕ್ಕೆ ಅನುಮತಿ ನೀಡಲಾಗಿದೆಯಾದರೂ, ಕೆಲವು ಷರತ್ತುಗಳನ್ನು ವಿಧಿಸಲಾಗಿದೆ. ಪ್ರಮುಖವಾಗಿ ಒಳಾಂಗಣದಲ್ಲಷ್ಟೇ ಚಿತ್ರೀಕರಣ ಮಾಡುವುದಕ್ಕೆ ಅನುಮತಿಯನ್ನು ನೀಡಲಾಗಿದೆ.

    ಮೇ 11ರಿಂದ ಧಾರಾವಾಹಿ ಶೂಟಿಂಗ್ ಪ್ರಾರಂಭ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts