More

    ಶೂಟಿಂಗ್​ಗೆ ಸಿದ್ಧರಾಗುತ್ತಿದ್ದ ಕಲಾವಿದರಿಗೆ ಶುರುವಾಯ್ತು ಹೊಸ ರಗಳೆ!

    ಸಿನಿಮಾ ಸಂಬಂಧಿ ಕೆಲಸಗಳು ಸ್ಥಗಿತಗೊಂಡಿವೆ. ಇನ್ನೇನು ಜೂನ್​, ಜುಲೈ ಅಷ್ಟೊತ್ತಿಗೆ ಚಿತ್ರೀಕರಣಕ್ಕೆ ಚಾಲನೆ ಸಿಕ್ಕರೂ ಸಿಗಬಹುದು. ಆದರೆ, ಕರೊನಾ ಹಿನ್ನೆಲೆಯಲ್ಲಿ ಸೆಟ್​ನಲ್ಲಿ ಒಂದಷ್ಟು ಕಟ್ಟು ನಿಟ್ಟಿನ ನಿಯಮಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಲೇಬೇಕಿದೆ. ಕರೊನಾ ವೈರಸ್​ ಸಾಂಕ್ರಾಮಿಕ ರೋಗ ಆಗಿರುವುದರಿಂದ ಜನಸಂದಣಿ ಸೇರುವಲ್ಲಿ ಕಾಳಜಿವಹಿಸಲೇಬೇಕಿದೆ.
    ಆ ಹಿನ್ನೆಲೆಯಲ್ಲಿ ಟಿವಿ ಆರ್ಟಿಸ್ಟ್ ಅಸೋಸಿಯೆಷನ್​, ಫೆಡರೇಷನ್​ ಆಫ್​ ವೆಸ್ಟರ್ನ್​ ಇಂಡಿಯಾ ಸಿನಿ ಎಂಪ್ಲಾಯಿಸ್​ ಸೋಮವಾರ ಸಭೆ ನಡೆಸಿ ಶೂಟಿಂಗ್​ ಸೆಟ್​ನಲ್ಲಿ ತೆಗೆದುಕೊಳ್ಳಬಹುದಾದ ಮುನ್ನೆಚ್ಚರಿಕಾ ಕ್ರಮಗಳನ್ನು ಪಟ್ಟಿ ಮಾಡಿದೆ. ಅವುಗಳು ಈ ಕೆಳಗಿನಂತಿವೆ.

    ಇದನ್ನೂ ಓದಿ: ಯಶ್ ಜತೆ ತಮನ್ನಾ ನಟಿಸಲ್ಲ; ಹರಿದಾಡಿದ ವದಂತಿಗೆ ತೆರೆ ಎಳೆದ ನಿರ್ದೇಶಕ ನರ್ತನ್…

    ಸೆಟ್​ನಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳೇನು?
    1. ಪ್ರತಿ ನಿತ್ಯ ಸೆಟ್​ಗೆ ಆಗಮಿಸುವುದಕ್ಕೂ ಮುನ್ನ ದೇಹದ ಉಷ್ಣತೆ ಪರೀಕ್ಷಿಸುವುದು ಕಡ್ಡಾಯ.
    2. ಧಾರಾವಾಹಿಗೆ ಸಂಬಂಧಿಸಿದ ಕಲಾವಿದರು ಅವರವರ ಮೇಕಪ್​ಅನ್ನು ಮನೆಯಲ್ಲೇ ಮಾಡಿಕೊಂಡು ಸೆಟ್​ಗೆ ಬರಬೇಕು.
    3. ಸೆಟ್​ಗೆ ಒಬ್ಬ ಮೇಕಪ್​ ಮೆನ್​ ಅನ್ನು ಮಾತ್ರ ಕರೆದುಕೊಂಡು ಬರಲು ಅವಕಾಶ
    4. ವೈದ್ಯರು ಮತ್ತು ನರ್ಸ್​​ಗಳು ಸೆಟ್​ನಲ್ಲಿ ಕಡ್ಡಾಯವಾಗಿ ಹಾಜರಿರಬೇಕು.
    5. 12 ಗಂಟೆಯ ಶೂಟಿಂಗ್​ ಇದ್ದರೆ, ಪ್ರತಿ ಸದಸ್ಯನಿಗೂ ತಲಾ ನಾಲ್ಕು ಮಾಸ್ಕ್​ಗಳನ್ನು ನೀಡಬೇಕು
    6. ಮೊದಲ 3 ತಿಂಗಳು 60 ವಯಸ್ಸು ಮೀರಿದವರನ್ನು ಕೆಲಸಕ್ಕೆ ಆಯ್ದುಕೊಳ್ಳುವಂತಿಲ್ಲ.
    7. ಸೆಟ್​ನಲ್ಲಿರುವ ಪ್ರತಿಯೊಬ್ಬರ ಹೆಸರಲ್ಲೂ ವಿಮೆ ಮಾಡಿಸುವುದು ಕಡ್ಡಾಯ

    ಪಾತಾಳ್ ಲೋಕಕ್ಕಿಳಿದ ಅನುಷ್ಕಾ, ಮೊದಲ ಬಾರಿಗೆ ವೆಬ್ ಸಿರೀಸ್ ನಿರ್ಮಾಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts