More

    ಇನ್ನೊಂದು ವಾರದಲ್ಲಿ ಭದ್ರಾ ನೀರು ಪೂರೈಕೆ

    ಬಾಳೆಹೊನ್ನೂರು: ಬಿ.ಕಣಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ವಾರ್ಡ್‌ಗಳಿಗೆ ಭದ್ರಾ ನದಿಯಿಂದ ನೀರು ಪೂರೈಕೆ ಮಾಡಲು ಪರಿಶೀಲನೆ ನಡೆಸಿದ್ದು, ಶೀಘ್ರ ಕ್ರಮಕೈಗೊಳ್ಳಲಾಗುವುದು ಎಂದು ಗ್ರಾಪಂ ಅಧ್ಯಕ್ಷ ಎಂ.ವಿ.ಸದಾಶಿವ ಆಚಾರ್ಯ ತಿಳಿಸಿದರು.

    ಚಿಕ್ಕಮಗಳೂರು ರಸ್ತೆಯ ಭದ್ರಾ ನದಿ ಬಳಿ ಬುಧವಾರ ಅಧಿಕಾರಿಗಳೊಂದಿಗೆ ವೀಕ್ಷಿಸಿ ಮಾತನಾಡಿ, ಗ್ರಾಪಂನ ವಿವಿಧ ವಾರ್ಡ್‌ಗಳಿಗೆ ಭದ್ರಾ ನದಿಯಿಂದ ಶುದ್ಧೀಕರಿಸಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. 2019ರಲ್ಲಿ ನೆರೆ ಬಂದ ಬಳಿಕ ನೀರಿನ ಪಂಪ್‌ಹೌಸ್ ಮತ್ತು ಶುದ್ಧೀಕರಿಸುವ ಘಟಕದೊಳಗೆ ನೀರು ನುಗ್ಗಿದ್ದರಿಂದ ತಾತ್ಕಾಲಿಕವಾಗಿ ಕುಡಿಯುವ ನೀರು ಸರಬರಾಜು ಸ್ಥಗಿತಗೊಳಿಸಲಾಗಿತ್ತು. ಇದೀಗ ಗ್ರಾಪಂ ವ್ಯಾಪ್ತಿಯ ವಿವಿಧೆಡೆ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು, ಮುಂಬರುವ ದಿನಗಳಲ್ಲಿ ಇನ್ನಷ್ಟು ಸಮಸ್ಯೆಯಾಗುವ ಸಾಧ್ಯತೆಯಿದೆ ಎಂದರು.
    ಗ್ರಾಪಂ ವ್ಯಾಪ್ತಿಯಲ್ಲಿ 36 ಬೋರ್‌ವೆಲ್‌ಗಳಿದ್ದು, ಇವುಗಳಲ್ಲಿ 7 ಬೋರ್‌ವೆಲ್‌ಗಳಲ್ಲಿ ನೀರು ಪೂರೈಕೆ ಸ್ಥಗಿತಗೊಂಡಿದೆ. ಆದ್ದರಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು, ಹೊಸ ಕೊಳವೆಬಾವಿ ಕೊರೆಯಲು ಪಾಯಿಂಟ್‌ಗಳನ್ನು ನೋಡಲಾಗಿದೆ. ಭದ್ರಾ ನದಿ ನೀರು ಶುದ್ಧೀಕರಿಸಿ ಪೂರೈಸಲು ಫಿಲ್ಟರ್ ಬೆಡ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
    ಮೆಸ್ಕಾಂ ಅಧಿಕಾರಿಗಳನ್ನು ಸ್ಥಳಕೆ ಕರೆಯಿಸಿ ಪರಿಶೀಲನೆ ನಡೆಸಿದ್ದು, ತಾತ್ಕಾಲಿಕವಾಗಿ ಸ್ಥಗಿತಗೊಂಡಿರುವ ವಿದ್ಯುತ್ ಸಂಪರ್ಕ, ಮೋಟಾರು ವ್ಯವಸ್ಥೆ ಕಲ್ಪಿಸುವಂತೆ ಕೋರಲಾಗಿದೆ. ಒಂದು ವಾರದೊಳಗೆ ಎಲ್ಲ ಕೆಲಸ ಪೂರೈಸಿಕೊಂಡು ನೀರು ಪೂರೈಕೆಗೆ ಕ್ರಮಕೈಗೊಳ್ಳಲಾಗುವುದು ಎಂದರು.
    ಬಿ.ಕಣಬೂರು ಪಿಡಿಒ ಕಾಶಪ್ಪ, ಸದಸ್ಯ ಇಬ್ರಾಹಿಂ ಶಾಫಿ, ಮೆಸ್ಕಾಂ ಜೆಇ ತಾಜ್ ಸಾಹೇಬ್, ಲೈನ್‌ಮನ್ ನಾಗರಾಜು, ಮಾದೇಶ್, ಬಸವರಾಜು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts